ಬಾಗಲಕೋಟೆಯಲ್ಲಿ ಬಂದ್ ಆಗಿವೆ ಶುದ್ಧ ಕುಡಿವ ನೀರಿನ ಘಟಕಗಳು

Published : Nov 22, 2017, 12:43 PM ISTUpdated : Apr 11, 2018, 12:38 PM IST
ಬಾಗಲಕೋಟೆಯಲ್ಲಿ  ಬಂದ್ ಆಗಿವೆ ಶುದ್ಧ ಕುಡಿವ ನೀರಿನ ಘಟಕಗಳು

ಸಾರಾಂಶ

ಉತ್ತಮವಾಗಿ ಕಾರ್ಯ ನಿರ್ವಹಿಸುವ ಘಟಕಗಳೂ ಸರಿಯಾಗಿ ತೆರೆಯುತ್ತಿಲ್ಲ. ಮಧ್ಯಾಹ್ನ ಹೊತ್ತಲ್ಲಿ ಜನ ಬರುತ್ತಿಲ್ಲ ಎನ್ನುವ ನೆಪದಲ್ಲಿ ಅವುಗಳನ್ನು ಬಂದ್ ಮಾಡಲಾಗುತ್ತಿದೆ. ಬೆಳಗಿನ ಹೊತ್ತು ಒಂದೆರಡು ತಾಸು, ಸಂಜೆ ವೇಳೆ ಆರಂಭಿಸಿ ಉಳಿದ ಸಮಯದ ಬಂದ್ ಮಾಡಲಾಗುತ್ತಿದೆ. ಇದು ಕೂಡ ಜನತೆಗೆ ತೊಂದರೆ ಎನ್ನುವಂತಾಗಿದೆ. ತಾಂತ್ರಿಕ ಕಾರಣಗಳ ನೆಪ ಹೇಳಿಕೊಂಡು ಘಟಕಗಳ ಆರಂಭಕ್ಕೆ ಸಂಬಂಧ ಪಟ್ಟವರು ಮನಸ್ಸು ಮಾಡುತ್ತಿಲ್ಲ.

ಬಾಗಲಕೋಟೆ(ನ.22): ನಗರದ ಜನತೆಯ ಆರೋಗ್ಯ ಕಾಪಾಡು ನಿಟ್ಟಿನಲ್ಲಿ ಅವರಿಗೆಲ್ಲ ಶುದ್ಧ ಕುಡಿವ ನೀರು ಕೊಡಬೇಕು ಎನ್ನವ ಉದ್ದೇಶದಿಂದ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಶಾಸಕರ ಅನುದಾನದಡಿ ಲಕ್ಷಾಂತರ ರುಪಾಯಿಗಳ ವೆಚ್ಚದಲ್ಲಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಲಾಗಿದೆ. ಆರಂಭದಲ್ಲಿ ಬಹುತೇಕ ಎಲ್ಲ ಕಡೆಗಳಲ್ಲೂ ಶುದ್ಧ ಕುಡಿವ ನೀರಿನ ಘಟಕಗಳು ಉತ್ತಮವಾಗಿಯೇ ಇದ್ದವು. ಇತ್ತೀಚಿನ ದಿನಗಳಲ್ಲಿ ನಿರ್ವಹಣೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಕೆಲ ಕಡೆ ಘಟಕಗಳು ಬಂದ್'ಆಗಿವೆ.

ಆಯಾ ಪ್ರದೇಶಗಳಲ್ಲಿನ ಜನತೆ ಮತ್ತೇ ಕೊಳವೆಬಾವಿ ಮತ್ತು ಬಿಟಿಡಿಎ ಪೂರೈಕೆ ಮಾಡುವ ನೀರನ್ನೇ ಕುಡಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶುದ್ಧ ಕುಡಿವ ನೀರು ಬೇಕು ಎನ್ನುವವರು ಇತರ ಪ್ರದೇಶಗಳಲ್ಲಿನ ಘಟಕಗಳಿಗೆ ಹೋಗಿ ನೀರು ತರಬೇಕಾಗಿದೆ.

ಉತ್ತಮವಾಗಿ ಕಾರ್ಯ ನಿರ್ವಹಿಸುವ ಘಟಕಗಳೂ ಸರಿಯಾಗಿ ತೆರೆಯುತ್ತಿಲ್ಲ. ಮಧ್ಯಾಹ್ನ ಹೊತ್ತಲ್ಲಿ ಜನ ಬರುತ್ತಿಲ್ಲ ಎನ್ನುವ ನೆಪದಲ್ಲಿ ಅವುಗಳನ್ನು ಬಂದ್ ಮಾಡಲಾಗುತ್ತಿದೆ. ಬೆಳಗಿನ ಹೊತ್ತು ಒಂದೆರಡು ತಾಸು, ಸಂಜೆ ವೇಳೆ ಆರಂಭಿಸಿ ಉಳಿದ ಸಮಯದ ಬಂದ್ ಮಾಡಲಾಗುತ್ತಿದೆ. ಇದು ಕೂಡ ಜನತೆಗೆ ತೊಂದರೆ ಎನ್ನುವಂತಾಗಿದೆ. ತಾಂತ್ರಿಕ ಕಾರಣಗಳ ನೆಪ ಹೇಳಿಕೊಂಡು ಘಟಕಗಳ ಆರಂಭಕ್ಕೆ ಸಂಬಂಧ ಪಟ್ಟವರು ಮನಸ್ಸು ಮಾಡುತ್ತಿಲ್ಲ. ಕೇಳಿದರೆ ಘಟಕದ ಯಂತ್ರಗಳಲ್ಲಿನ ಸಾಮಗ್ರಿ ಬರಬೇಕಿದೆ.

ಅದು ಬಂದ ಕೂಡಲೇ ಘಟಕ ಆರಂಭಿಸಲಾಗುವುದು ಎಂದು ಸಮಜಾಯಿಷಿ ನೀಡಲಾಗುತ್ತಿದೆ. ಇದರಿಂದ ಬೇಸತ್ತ ಜನ ಕಚೇರಿಗೆ ಅಲೆಯುವುದೇ ಬೇಡ. ಯಾವಾಗ ಬೇಕಾದರೂ ಘಟಕಗಳನ್ನು ಆರಂಭಿಸಲಿ ಎಂದು ಬೇಸರದ ಭಾವಕ್ಕೆ ಶರಣಾಗಿದ್ದಾರೆ. ನವನಗರದ ಕೆಲ ಕಡೆಗಳಲ್ಲಿ ಖಾಸಗಿಯವರು ಶುದ್ಧ ಕುಡಿವ ನೀರಿನ ಘಟಕಗಳನ್ನು ನಡೆಸುತ್ತಿದ್ದು,ಅಲ್ಲಿಯೂ ಸಾರ್ವಜನಿಕರಿಗೆ ಹೆಚ್ಚಿನ ಹಣ ಕೊಟ್ಟರೂ ನೀರು ಸಿಗದಂತಾಗಿದೆ. ಅಲ್ಲಿ ಮನೆಮನೆಗೆ ನೀರು ಹಾಕುವ ವಾಹನಗಳು ಬಂದು ನೀರು ತುಂಬಿಸಿಕೊಳ್ಳುತ್ತ ನಿಲ್ಲುತ್ತಾರೆ.

ಅಲ್ಲಿ ನಾಲ್ಕು ನಲ್ಲಿಗಳು ಇದ್ದರೂ ಒಂದೇ ನಲ್ಲಿ ಕಾರ್ಯ ಆರಂಭವಿರುತ್ತದೇ. ಎಲ್ಲಿ ಅಲ್ಲಿ ತಾಸುಗಟ್ಟಲೇ  ನಿಲ್ಲುವುದು ಎಂದು ಅಲ್ಲಿಗೆ ಬರುವ ಜನ ವಾಪಸಾಗುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸಮರ್ಪಕ ಶುದ್ಧ ಕುಡಿವ ನೀರು ಕೊಡಬೇಕು. ಜನತೆ ಆರೋಗ್ಯವಂತರಾಗಿರಬೇಕು ಎನ್ನುವ ಶಾಸಕರ ಕಲ್ಪನೆ ಸಾಕಾರಗೊಳ್ಳದೇ ಹಾಳಾಗುತ್ತಿದೆ. ನಗರದ ಬಹುತೇಕ ಜನತೆ ಇಂದು ಶುದ್ಧ ಕುಡಿವ ನೀರಿನ್ನೇ ಕುಡಿಯಲು ಬಳಕೆ ಮಾಡುತ್ತಿರುವುದರಿಂದ ಶುದ್ಧ ಕುಡಿವ ನೀರಿನ ಘಕಟಗಳ ನಿರ್ವಹಣೆ ಉತ್ತಮವಾಗಿರುವಂತೆ ಸಂಬಂಧ ಪಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕಾಗಿದೆ.

ಇಂದು ಎಲ್ಲಡೆ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಡೆಂಗೆ, ಚಿಕೂನ್ ಗುನ್ಯಾ ಹಾಗೂ ವೈರಲ್ ಹಾವಳಿ ಹೇಳ ತೀರದು. ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಇಂದು ಇದೇ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ರೋಗ ನಿಯಂತ್ರಣ ಮತ್ತು ಜನರ ಆರೋಗ್ಯ ಕಾಳಜಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಆದಷ್ಟು ಬೇಗ ಬಂದ್ ಆಗಿರುವ ಘಟಕಗಳನ್ನು ಆರಂಭಿಸುತ್ತ ಗಮನ ಹರಿಸಬೇಕಿದೆ. ಶಾಸಕರೂ ಈ ನಿಟ್ಟಿನಲ್ಲಿ ನೀಗಾವಹಿಸುವ ಮೂಲಕ ತಾಂತ್ರಿಕ ಸಮಸ್ಯೆಗಳಿಂದಾಗಿ ಬಂದ್ ಆಗಿರುವ ಶುದ್ಧ ಕುಡಿವ ನೀರಿನ ಘಕಟಗಳ ಆರಂಭಕ್ಕೆ ಒತ್ತು ನೀಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಫೇಕ್ ನ್ಯೂಸ್ ಹರಡಿದರೇ ಐಟಿ ಸಚಿವ ಪ್ರಿಯಾಂಕ್ ಖರ್ಗೆ?: ಬಿಜೆಪಿ ಕಿಡಿ, ಬೇಷರತ್ ಕ್ಷಮೆಗೆ ಆಗ್ರಹ
ಭಾರತದಲ್ಲಿ ಮೊಳಗಿದ ಬಾಯ್ಕಾಟ್ ಥಾಯ್ಲೆಂಡ್ ಕೂಗು, ವಿಷ್ಣಮೂರ್ತಿ ಧ್ವಂಸಕ್ಕೆ ಆಕ್ರೋಶ