
ನವದೆಹಲಿ(ಸೆ.30): ಮುಸ್ಲಿಂ ಸಮುದಾಯದವರು ಆರೋಗ್ಯಕ್ಕೆ ಉಪಯುಕ್ತವಾದ ಗೋವುಗಳ ಪವಿತ್ರ ಗಂಜಳ ವನ್ನು ಕುಡಿಯಬೇಕು ಎಂದು ಪತಾಂಜಲಿ ಸಂಸ್ಥೆಯ ಮುಖ್ಯಸ್ಥ ಬಾಬಾ ರಾಮ್'ದೇವ್ ತಿಳಿಸಿದ್ದಾರೆ.
ಗೋವಿನ ಗಂಜಳವು ಆರೋಗ್ಯಕ್ಕೆ ಉಪಯುಕ್ತವಾದುದು ಇದನ್ನು ಕುರಾನ್'ನಲ್ಲಿಯೂ ಉಲ್ಲೇಖಿಸಲಾಗಿದೆ. ಆದರೆ ಕೆಲವರು ಪತಾಂಜಲಿಯನ್ನು ಹಿಂದು ಸಂಸ್ಥೆಯಂದು ದೂಷಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಮುಸ್ಲಿಂ ಸಂಸ್ಥೆಯಾದ 'ಹಮ್ದರ್ದ್' ಬಗ್ಗೆ ಎಂದಾದರೂ ಮಾತನಾಡಿದ್ದೇನೆಯೇ ?
'ಹಮ್ದರ್ದ್' ಸಂಸ್ಥೆಗೆ ನನ್ನ ಸಂಪೂರ್ಣ ಬೆಂಬಲವಿದೆ ಹಾಗೆಯೇ ಹಿಮಾಲಯ ಸಂಸ್ಥೆಯ ಬಗ್ಗೆಯೂ ಕೂಡ. ಹಿಮಾಲಯ ಸಂಸ್ಥೆಯ ಫಾರೂಕ್ ಭಾಯ್ ಯೋಗ ಗ್ರಾಮ ನಿರ್ಮಿಸಲು ನನಗೆ ಭೂಮಿಯನ್ನು ದಾನ ಮಾಡಿದ್ದಾರೆ. ಆದರೆ ಕೆಲವರು ಮಾತ್ರ ದ್ವೇಷದ ಬೀಜವನ್ನು ಬಿತ್ತುವುದೇ ತಮ್ಮ ಕೆಲಸವೆಂದು ತಿಳಿದುಕೊಂಡಿದ್ದಾರೆ' ಎಂದು ಇಂಡಿಯಾ ಟಿವಿಗೆ ನೀಡಿದ ಆಪ್ ಕೀ ಅದಾಲತ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
52 ವರ್ಷದ ಯೋಗ ಗುರು 10 ಸಾವಿರ ಕೋಟಿ ಮೌಲ್ಯ ಹೊಂದಿರುವ ತಮ್ಮ ಸಂಸ್ಥೆಯ ಮುಂದಿನ ಉತ್ತರಾಧಿಕಾರಿ ಯಾರೆಂದು ಘೋಷಿಸಿದ್ದು,ತಮ್ಮಂದ ತರಬೇತಿ ಪಡೆಯುತ್ತಿರುವ 500 ಮಂದಿ ಸಾಧುಗಳೆ ಮುಂದಿನ ನನ್ನ ಸಂಸ್ಥೆಯ ಉತ್ತರಾಧಿಕಾರಿಯಾಗಲಿದ್ದಾರೆ 'ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.