
ನವದೆಹಲಿ(ಡಿ.18): ನೋಟ್ ಬ್ಯಾನ್ ಬಳಿಕ ಬ್ಯಾಂಕ್ ಹಾಗೂ ATM ಎದುರು ಹಣಕ್ಕಾಗಿ ಸಾಲಿನಲ್ಲಿ ಕಾಯುವುದು ಈಗ ಸಾಮಾನ್ಯವಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಹಣ ಪಡೆಯಲು ಜನರು ಬಿಸಿಲನ್ನೂ ಲೆಕ್ಕಿಸದೆ ಕಾಯುತ್ತಿದ್ದಾರೆ. ಈ ವೇಳೆ ಕೆಲವರು ಪ್ರಜ್ಷೆ ತಪ್ಪಿ ಬೀಳುತ್ತಿದ್ದಾರೆ.
ವರದಿಯೊಂದರ ಅನುಸಾರ ಹಣ ಪಡೆಯಲು ಸಾಲಿನಲ್ಲಿ ನಿಂತಿದ್ದ ವೇಳೆ 90 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಹೀಗೇ ಸಾಲಿನಲ್ಲಿ ನಿಂತು ಅನಾರೋಗ್ಯಕ್ಕೀಡಾದ ಮಂದಿಯಲ್ಲಿ ಬಾಬಾ ರಾಮ್'ದೇವ್ ಹೆಸರೂ ಕೂಡಾ ಸೇರ್ಪಡೆಗೊಂಡಂತಾಗಿದೆ. ಸಾಮಾಜಿಕ ಜಾಲಾತಾಣಗಳಲ್ಲಿ ರಾಮ್'ದೇವ್ ಬಾಬಾ ಫೋಟೋ ಸಮೇತವಾಗಿ ಸುದ್ದಿಯೊಂದು ವೈರಲ್ ಆಗಿದ್ದು, ಹಣಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗ ರಾಮ್'ದೇವ್ ಬಾಬಾ ಪ್ರಜ್ಷೆ ತಪ್ಪಿ ಬಿದ್ದಿದ್ದರಂತೆ. ಬಳಿಕ ಅವರನ್ನು ಡೆಹ್ರಾಡೂನ್'ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿರುವ ಸುದ್ದಿಯೇ ಹೊರತು, ಈ ಕುರಿತಾಗಿ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ಇದು ನಿಜವೇ ಆಗಿದ್ದರೆ ಪ್ರಧಾನಿ ಮೋದಿಯ ವಿರುದ್ಧ ಕೆಲವು ಠೀಕೆಗಳು ಕೇಳಿ ಬರುವುದರಲ್ಲಿ ಸಂಶಯವಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.