ನೂತನ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಲೆ. ಜನರಲ್ ಬಿಪಿನ್ ರಾವತ್ ಆಯ್ಕೆ

By Suvarna Web DeskFirst Published Dec 17, 2016, 4:26 PM IST
Highlights

ಡಿಸೆಂಬರ್ 31 ರಂದು ನಿವೃತ್ತಿಯಾಗಲಿರುವ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಸ್ಥಾನಕ್ಕೆ ರಾವತ್ ನೇಮಕವಾಗಿದ್ದಾರೆ.

ನವದೆಹಲಿ(ಡಿ.17): ಭಾರತದ ಎರಡು ಪ್ರಮುಖ ರಕ್ಷಣಾ ವಿಭಾಗಗಳಾದ ಭೂಸೇನೆ ಹಾಗೂ ವಾಯುಸೇನೆಗೆ ನೂತನ ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ. ಭೂಸೇನೆಯ ನೂತನ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ನೇಮಕವಾಗಿದ್ದರೆ, ವಾಯುಸೇನೆಯ ನಾಯಕತ್ವವನ್ನು ವಾಯುಸೇನೆಯ ಉಪಮುಖ್ಯಸ್ಥರಾಗಿದ್ದ ಬೀರೇಂಧರ್ ಸಿಂಗ್ ಧನೋವಾ ವಹಿಸಿಕೊಂಡಿದ್ದಾರೆ.

ಡಿಸೆಂಬರ್ 31 ರಂದು ನಿವೃತ್ತಿಯಾಗಲಿರುವ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಸ್ಥಾನಕ್ಕೆ ರಾವತ್ ನೇಮಕವಾಗಿದ್ದಾರೆ.

ಪ್ರಸಕ್ತ ವರ್ಷದ ಆರಂಭದಲ್ಲೇ ರಾವತ್ ಸೇನೆಯ ಉಪಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಸೇನೆಯ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿರುವ ರಾವತ್ 'ಸ್ವಾರ್ಡ್ ಆಫ್ ಹಾನರ್' ಗೌರವಕ್ಕೂ ಭಾಜನರಾಗಿದ್ದಾರೆ.

ಇನ್ನು ಧನೋವಾ ಪ್ರಸ್ತುತ ವಾಯುಸೇನೆಯ ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾರ್ಗಿಲ್ ಯುದ್ಧ ಸೇರಿದಂತೆ ಬಹುತೇಕ ಕಾರ್ಯಚರಣೆಯನ್ನು ಮುನ್ನೆಡೆಸಿರುವ ಅನುಭವವಿರುವ ಧನೋವಾ ವಾಯುಸೇನೆಯ ವಿವಿಧ ಹಂತದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ.

click me!