ನೂತನ ಭೂಸೇನಾ ಮುಖ್ಯಸ್ಥರ ಬಗ್ಗೆ ನೀವು ತಿಳಿದಿರಲೇ ಬೇಕಾದ ವಿಷಯಗಳು
ಲೆ|ಜ| ಬಿಪಿನ್ ರಾವತ್ ಜನಿಸಿದ್ದು ಯೋಧರ ಕುಟುಂಬದಲ್ಲಿ. ಬಿಪಿನ್ ರಾವತ್ ತಂದೆ ಲೆ|ಜ| ಎಲ್.ಎಸ್. ರಾವತ್ ಕೂಡಾ ಸೇನೆಯಲ್ಲಿ ಸೇವೆ ಸಲ್ಲಿಸಿದವರು.
ಲೆ|ಜ| ಬಿಪಿನ್ ರಾವತ್ ಶಿಕ್ಷಣ ಪಡೆದದ್ದು ಶಿಮ್ಲಾದ ಸಂತ ಎಡ್ವರ್ಡ್ ಶಾಲೆಯಲ್ಲಿ. ಬಳಿಕ ಡೆಹ್ರಾಡೂನ್’ನ ‘ಇಂಡಿಯನ್ ಮಿಲಿಟರಿ ಅಕಾಡೆಮಿ’ಯಲ್ಲಿ ತರಬೇತಿ. ಅಲ್ಲಿ ‘ಸೋರ್ಡ್ ಆಫ್ ಆನರ್’ ಗೌರವಕ್ಕೆ ಪಾತ್ರ.
ವೆಲಿಂಗ್ಟನ್’ನಲ್ಲಿರುವ ಕೇಂದ್ರ ಸರ್ಕಾರದ ’ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿ’ನಿಂದ ಪದವಿ, ಬಳಿಕ ಮೆರಿಕಾದ ‘ಫೋರ್ಟ್ ಲೀವಿನ್ವರ್ತ್’ ನಿಂದ ತರಬೇತಿ.
1978ರಲ್ಲಿ 11 ಗೋರ್ಖಾ ರೈಫಲ್ಸ್’ನ 5ನೇ ಬೆಟಾಲಿಯನ್’ಗೆ ಸೇರಿ ಸೇವೆ ಆರಂಭ.
37 ವರ್ಷಗಳ ಸೇವೆಯಲ್ಲಿ ಭಾರತದ ವಿವಿಧ ಭಾಗಗಳಲ್ಲಿ, ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಣೆ. ಭಾರತದ ಪೂರ್ವ ಗಡಿ ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ.
ಈ ಮಧ್ಯೆ ವಿಶ್ವಸಂಸ್ಥೆಯ ಮಿಶನ್ ಮೇಲೆ ಕಾಂಗೋದಲ್ಲಿ ಕಠಿಣ ಸವಾಲುಗಳ ನಡುವೆಯೂ ಅಪ್ರತಿಮ ಸೇವೆ ಸಲ್ಲಿಸಿ ಅಂತರಾಷ್ಟ್ರೀಯ ಗೌರವಗಳಿಗೆ ಪಾತ್ರ.
ಭಾರತದಲ್ಲಿಯೂ ಹಲವಾರು ಗೌರವ ಹಾಗೂ ಶೌರ್ಯ ಪ್ರಶಸ್ತಿಗಳಿಗೆ ಭಾಜನ.
ಸೇವೆ ಜತೆ ಸಂಶೋಧನೆ; ಸೇನಾ ಮಾಧ್ಯಮ ನೀತಿ ಕುರಿತು ಸಂಶೋಧನೆ; ಮೀರಠ್’ನ ಚೌಧರಿ ಚರಣ್ ಸಿಂಗ್ ವಿವಿಯಿಂದ 2011ರಲ್ಲಿ ಡಾಕ್ಟರೇಟ್ ಪದವಿ.
ರಾವತ್ ಅವರ ಪತ್ನಿ ಮಧುಲಿಕಾ ದೆಹಲಿ ವಿವಿಯಿಂದ ಸೈಕಲಾಜಿ ಪದವಿಧರೆ; ಹಲವಾರು ಸಮಾಜ ಸೇವಾ ಕೆಲಸಗಳಲ್ಲಿ, ವಿಶೇಷವಾಗಿ ಕ್ಯಾನರ್ ರೋಗಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಹಿಳೆ.
ಸೇನಾಧಿಕಾರಿ ಜತೆಗೆ ಅಂಕಣಕಾರನೂ ಹೌದು; ದೇಶದ ಸುರಕ್ಷತೆ ಹಾಗೂ ಭದ್ರತೆ ವಿಷಯದಲ್ಲಿ ವಿವಿಧ ಪತ್ರಿಕೆ ಹಾಗೂ ಜರ್ನಲ್’ಗಳಲ್ಲಿ ಲೇಖನ ಪ್ರಕಟ
1 ಜನವರಿ 2016ರಿಂದ ಭೂಸೇನೆಯ ಉಪ-ಮುಖ್ಯಸ್ಥನಾಗಿ ಅಧಿಕಾರ ಸ್ವೀಕಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.