ಗೌರವ ವಂದನೆ ಸ್ವೀಕರಿಸಲು ನಿರಾಕರಿಸಿದ ಬಿ.ಎಸ್.ಯಡಿಯೂರಪ್ಪ

First Published May 21, 2018, 1:46 PM IST
Highlights

ಕೇವಲ 55 ಗಂಟೆಗಳ ಮುಖ್ಯಮಂತ್ರಿಯಾಗಿ ಅಧಿಕಾರ ತ್ಯಜಿಸಿದ ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ಸರಕಾರ ರಚನೆಯಾಗುವವರೆಗೂ ಹಂಗಾಮಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಅದಕ್ಕೆ ಬಾಗಲಕೋಟೆ ಜಿಲ್ಲಾಡಳಿತ ಗೌರವ ವಂದನೆ ಸಲ್ಲಿಸಲು ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಸ್ವೀಕರಿಸಲು ಯಡಿಯೂರಪ್ಪ ಅವರು ನಿರಾಕರಿಸಿದರು.

ಬಾಗಲಕೋಟೆ  (ಮೇ 21): ಇಳಕಲ್ ಪಟ್ಟಣಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೆಲಿ ಪ್ಯಾಡ್‌ನಲ್ಲಿ ಗಾಡ್ ಆಫ್ ಆನರ್ ಸ್ವೀಕರಿಸಲು ನಿರಾಕರಿಸಿದರು.

ಡಾ. ಮಹಾಂತ ಸ್ವಾಮೀಜಿಗಳ ಅಂತ್ಯಕ್ರಿಯೆಗೆ ಆಗಮಿಸಿರುವ ಯಡಿಯೂರಪ್ಪ ಅವರಿಗೆ ಇಳಕಲ್ ಪಟ್ಟಣದ ಹೊರವಲಯದ ಹೆಲಿಪ್ಯಾಡ್‌ನಲ್ಲಿ ಗೌರವ ವಂದನೆಗೆ  ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಹೆಲಿಕಾಪ್ಟರ್‌ನಿಂದ ಇಳಿಯುತ್ತಲೇ ಗೌರವ ವಂದನೆ ನಿರಾಕರಿಸಿದರು.

ಈ ನಡುವೆ ಯಡಿಯೂರಪ್ಪ ಅವರನ್ನು ಸ್ವಾಗತಿಸಿದ ಜಿಲ್ಲಾಧಿಕಾರಿ ಮತ್ತು ಸಿಇಒ, ಎಸ್‌ಪಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಯಡಿಯೂರಪ್ಪ, 'ಮಹಾಂತ ಶ್ರೀಗಳು ಸಾಮಾಜ ಸೇವೆ ಮೂಲಕ ಹೆಸರಾದವರು. ಜೋಳಿಗೆ ಮೂಲಕ ಯುವಕರಲ್ಲಿ ದುಶ್ಚಟ ನಿವಾರಿಸಿದ ಮಹಾತ್ಮರು. ಸ್ವಾಮೀಜಿಗಳ ಕಾಯ೯ ಶ್ಲಾಘನೀಯ,' ಎಂದರು. 

ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಸಚಿವ ನಿರಾಣಿ, ಬೊಮ್ಮಾಯಿ ಸಾಥ್ ನೀಡಿದ್ದಾರೆ.

click me!