ವೈರಲ್ ಚೆಕ್: ಅಶೋಕ ಹೋಟೆಲ್’ನಲ್ಲಿ ನಾಯಿ ಮಾಂಸ ವಶಪಡಿಸಿಕೊಳ್ಳಲಾಯಿತಂತೆ..?

First Published May 21, 2018, 1:08 PM IST
Highlights

ಪೊಲೀಸರು ದಾಳಿ ಮಾಡಿರುವ ಚಿತ್ರ, ಅಶೋಕ ಹೋಟೆಲ್ ಬೋರ್ಡ್ ಮತ್ತು ನಾಯಿಯ ಮಾಂಸದ ಚಿತ್ರ, ಚರ್ಮ ಸುಲಿದು ನೇತು ಹಾಕಿರುವ ನಾಯಿಯ ಚಿತ್ರಗಳು ಈ ಸಂದೇಶದಲ್ಲಿವೆ.

ಬೆಂಗಳೂರು[ಮೇ.21]: ಅಶೋಕ ಹೋಟೆಲ್‌ನ ಅಡುಗೆ ಕೋಣೆಯಲ್ಲಿ ನಾಯಿ ಮಾಂಸ ಪತ್ತೆಯಾಗಿದೆ ಎಂಬಂತಹ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ಯಾವ ನಗರದ ಅಶೋಕ ಹೋಟೆಲ್ ಇದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಒಂದು ಸಂದೇಶದಲ್ಲಿ ನಾಗ್ಪುರ ಎಂದು ಹೇಳಿದರೆ, ಮತ್ತೊಂದರಲ್ಲಿ ಜಮ್ಮು, ಇನ್ನೊಂದೆಡೆ ಕೋಲ್ಕತಾದ ಹೌರಾದಲ್ಲಿ ಎಂದು ಹೇಳಲಾಗಿದೆ. 

ಪೊಲೀಸರು ದಾಳಿ ಮಾಡಿರುವ ಚಿತ್ರ, ಅಶೋಕ ಹೋಟೆಲ್ ಬೋರ್ಡ್ ಮತ್ತು ನಾಯಿಯ ಮಾಂಸದ ಚಿತ್ರ, ಚರ್ಮ ಸುಲಿದು ನೇತು ಹಾಕಿರುವ ನಾಯಿಯ ಚಿತ್ರಗಳು ಈ ಸಂದೇಶದಲ್ಲಿವೆ. ಆದರೆ ನಿಜಕ್ಕೂ ಅಶೋಕ ಹೋಟೆಲ್ ಅಡುಗೆ ಕೋಣೆಯಲ್ಲಿ ನಾಯಿ ಮಾಂಸ ಪತ್ತೆಯಾಗಿದ್ದು ನಿಜವೇ, ಒಂದೊಮ್ಮೆ ಪತ್ತೆಯಾಗಿದ್ದರೂ ಅಶೋಕ ಹೋಟೆಲ್ ಯಾವ ನಗರದಲ್ಲಿದೆ ಎಂದು ಪರಿಶೀಲನೆಗೆ ಮುಂದಾದಾಗ ಈ ಫೋಟೋಗಳ ಹಿಂದಿನ ನೈಜತೆ ಬಯಲಾಗಿದೆ.

ವಾಸ್ತವವಾಗಿ ಇಲ್ಲಿ ಹೇಳಲಾಗಿರುವ ಅಶೋಕ ಹೋಟೆಲ್ ಇರುವುದು ಕೋಲ್ಕತಾದ ಹೌರಾ ನಗರದಲ್ಲಿ. ಈ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಪತ್ತೆಯಾಗಿದ್ದು ನಾಯಿ ಮಾಂಸವಲ್ಲ, ಬದಲಾಗಿ ಹಳಸಿದ ಮಾಂಸ. ದಾಳಿ ವೇಳೆ ತಾಜಾ ಮಾಂಸದೊಂದಿಗೆ ಹಳಸಿದ ಮಾಂಸ ಮಿಶ್ರಣವಾಗಿದ್ದು ಪತ್ತೆಯಾಗಿತ್ತು. ಅದು 100 ಕೆ.ಜಿ.ಯಷ್ಟಿತ್ತು. ಆದರೆ ಇದೇ ಸುದ್ದಿಯನ್ನು ತಿರುಚಿ ವಿಭಿನ್ನ ಘಟನೆಗಳಿಂದ ಸಂಗ್ರಹಿಸಲಾಗಿದ್ದ ಫೋಟೋಗಳನ್ನು ಪೋಸ್ಟ್ ಮಾಡಿ ಅಶೋಕ ಹೋಟೆಲ್’ನಲ್ಲಿ ನಾಯಿ ಮಾಂಸ ಪತ್ತೆ ಎಂದು ಬಿಂಬಿಸಲಾಗಿದೆ.

click me!