ನಿಫಾ ವಿರುದ್ಧ ಹೋರಾಡಿದ ವೈದ್ಯಕೀಯ ಸಿಬ್ಬಂದಿಗೆ ಬಹುಮಾನ

First Published Jun 28, 2018, 10:01 AM IST
Highlights

ಕೇರಳದ ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಇತ್ತೀಚೆಗೆ ಕಂಡುಬಂದಿದ್ದ ನಿಪಾ ವೈರಸ್‌ ಸೋಂಕು ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ವೇಳೆ ಆರೋಗ್ಯ ಸೇವೆಯನ್ನು ಚೆನ್ನಾಗಿ ನಿಭಾಯಿಸಿ, ತಕ್ಷಣಕ್ಕೇ ರೋಗವನ್ನು ನಿಯಂತ್ರಣಕ್ಕೆ ತಂದ 61 ವೈದ್ಯಕೀಯ ಸಿಬ್ಬಂದಿಗೆ ಹೆಚ್ಚುವರಿ ವೇತನ ಹೆಚ್ಚಳ ನೀಡಲು ಕೇರಳ ಸರ್ಕಾರ ಮುಂದಾಗಿದೆ.

ತಿರುವನಂತಪುರಂ: ಕೇರಳದ ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಇತ್ತೀಚೆಗೆ ಕಂಡುಬಂದಿದ್ದ ನಿಪಾ ವೈರಸ್‌ ಸೋಂಕು ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ವೇಳೆ ಆರೋಗ್ಯ ಸೇವೆಯನ್ನು ಚೆನ್ನಾಗಿ ನಿಭಾಯಿಸಿ, ತಕ್ಷಣಕ್ಕೇ ರೋಗವನ್ನು ನಿಯಂತ್ರಣಕ್ಕೆ ತಂದ 61 ವೈದ್ಯಕೀಯ ಸಿಬ್ಬಂದಿಗೆ ಹೆಚ್ಚುವರಿ ವೇತನ ಹೆಚ್ಚಳ ನೀಡಲು ಕೇರಳ ಸರ್ಕಾರ ಮುಂದಾಗಿದೆ.

ಸಿಎಂ ಪಿಣರಾಯಿ ವಿಜಯನ್‌ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತಮ್ಮ ಜೀವ ರಕ್ಷಣೆಯ ಹಂಗನ್ನು ತೊರೆದು ಸೇವೆ ಸಲ್ಲಿಸಿರುವ ಸಿಬ್ಬಂದಿಗೆ ಈ ಕೊಡುಗೆ ನೀಡಲಾಗುತ್ತಿದೆ. ನಾಲ್ವರು ಸಹಾಯಕ ಪ್ರೊಫೆಸರ್‌ಗಳು, ಇಬ್ಬರು ಆರೋಗ್ಯಾಧಿಕಾರಿಗಳು, 19 ಸ್ಟಾಫ್‌ ನರ್ಸ್‌ಗಳು, 7 ಸಹಾಯಕ ನಸ್‌ಗಳು, 17 ಸ್ವಚ್ಛತಾ ಸಿಬ್ಬಂದಿ, 4 ಆಸ್ಪತ್ರೆ ಅಟೆಂಡರ್‌ಗಳು, ಮೂವರು ಲ್ಯಾಬ್‌ ಟೆಕ್ನಿಶಿಯನ್‌ಗಳು ಈ ಗೌರವ ಪಡೆಯುತ್ತಿದ್ದಾರೆ.

ಮೂವರು ಹಿರಿಯ ವೈದ್ಯರು, 12 ಜೂನಿಯರ್‌ ವೈದ್ಯರಿಗೆ ಚಿನ್ನದ ಪದಕ ನೀಡಲಾಗುತ್ತದೆ. ಅಲ್ಲದೆ, ರೋಗಿಗಳ ಸೇವೆಯ ವೇಳೆ ಸೋಂಕು ತಗುಲಿ ನಿಧನರಾದ ನರ್ಸ್‌ ಲೀನಿ ಪುದುಶ್ಶೇರಿ ಸ್ಮರಣಾರ್ಥವಾಗಿ, ಸರ್ಕಾರಿ ವಲಯದ ಉತ್ತಮ ನರ್ಸ್‌ ಪ್ರಶಸ್ತಿ ಆರಂಭಿಸಲಾಗುತ್ತದೆ. ಕಳೆದ ತಿಂಗಳು ನಿಪಾ ವೈರಸ್‌ ಸೋಂಕಿನಿಂದಾಗಿ 17 ಮಂದಿ ಮೃತರಾಗಿದ್ದರು.

click me!