ರಾಜ್ಯಸ್ಥಾನಲ್ಲಿ ಹುಲಿ ಆಯ್ತು, ಈಗ ಗೋವು ಸಫಾರಿ ಶುರು!

First Published Jun 28, 2018, 9:48 AM IST
Highlights

ರಾಜಸ್ಥಾನದ ಸಾರಿಸ್ಕಾ ಹುಲಿ ಸಫಾರಿಯ ಬಹಳ ಜನಪ್ರಿಯ ಎಂಬುದು ಎಲ್ಲರಿಗೂ ಗೊತ್ತು. ಆದರೆ, ರಾಜಸ್ಥಾನ ಸರ್ಕಾರ ಗೋವು ಪ್ರಿಯರಿಗಾಗಿ ಜೈಪುರದಲ್ಲಿ ಗೋವುಗಳ ಸಫಾರಿಯನ್ನು ಆಯೋಜಿಸಲು ಮುಂದಾಗಿದೆ.

ಜೈಪುರ: ರಾಜಸ್ಥಾನದ ಸಾರಿಸ್ಕಾ ಹುಲಿ ಸಫಾರಿಯ ಬಹಳ ಜನಪ್ರಿಯ ಎಂಬುದು ಎಲ್ಲರಿಗೂ ಗೊತ್ತು. ಆದರೆ, ರಾಜಸ್ಥಾನ ಸರ್ಕಾರ ಗೋವು ಪ್ರಿಯರಿಗಾಗಿ ಜೈಪುರದಲ್ಲಿ ಗೋವುಗಳ ಸಫಾರಿಯನ್ನು ಆಯೋಜಿಸಲು ಮುಂದಾಗಿದೆ.

ಜೈಪುರದ ಹೊರವಲಯದಲ್ಲಿರುವ ಹಿಂಗೋನಿಯಾ ಗೋ ಶಾಲೆಯಲ್ಲಿ ಪ್ರವಾಸಿಗರು 15,000 ಗೋವುಗಳ ಜೊತೆ ತಂಗಲು ಅವಕಾಶ ನೀಡಲಾಗುತ್ತದೆ. ಅಲ್ಲಿ ಪ್ರವಾಸಿಗರು ಹಸುಗಳಿಗೆ ಮೇವು ಉಣಿಸಿ, ಅವುಗಳ ಮೈ ತೊಳಿಸಿ, ಕರುಗಳಿಗೆ ಹಾಲನ್ನು ಉಣಿಸಬಹುದಾಗಿದೆ. ಗೋ ಸಫಾರಿಗೆ 30 ದೇಶಿ ತಳಿಯ ಗೋವುಗಳನ್ನು ಒದಗಿಸಲಾಗುತ್ತದೆ.

ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ಗೂಳಿಗಳ ಸಫಾರಿಯನ್ನೂ ಸರ್ಕಾರ ಆಯೋಜಿಸಲಿದೆ. ಗೋವುಗಳಿಗೆಂದೇ ಪ್ರತ್ಯೇಕ ಸಚಿವಾಲಯ ಹೊಂದಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಗೆ ರಾಜಸ್ಥಾನ ಪಾತ್ರವಾಗಿದ್ದು, ಗೋ ಸಫಾರಿ ಆಯೋಜಿಸಿದ್ದು ಅಚ್ಚರಿಯೇನಿಲ್ಲ.

click me!