
ಡೆಹ್ರಾಡೂನ್: 2016ನೇ ಸಾಲಿನ ಉತ್ತರಾಖಂಡ ಪ್ರಾಂತೀಯ ನಾಗರಿಕ ನ್ಯಾಯಾಂಗ ಸೇವೆಗಳ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಇದರಲ್ಲಿ ಆಟೋ ಚಾಲಕನ ಪುತ್ರಿಯಾದ ಪೂನಂ ತೋಡಿ ಅಗ್ರಸ್ಥಾನ ಪಡೆದಿದ್ದಾರೆ. ಏನಾದರೂ ಸರಿಯೇ ರಾಜ್ಯ ನ್ಯಾಯಾಂಗ ಪರೀಕ್ಷೆಯಲ್ಲಿ ಉತ್ತೀರ್ಣಳಾಗಬೇಕು ಎಂಬ ಆಕಾಂಕ್ಷೆಯನ್ನು ಪೂನಂ ಟೋಡಿ ತಮ್ಮ ಮೂರನೇ ಯತ್ನದಲ್ಲೇ ಈಡೇರಿಸಿಕೊಂಡಿದ್ದಾರೆ.
ಪೂನಂ ತೋಡಿ ಅವರು ಡೆಹ್ರಾಡೂನ್‌ನ ನೆಹರೂ ಕಾಲೋನಿಯ ಧರಂಪುರ ಮೂಲದವರಾಗಿದ್ದು, ಡಿಎವಿ ಕಾಲೇಜಿನಲ್ಲೇ ಎಲ್‌ಎಲ್‌ಬಿ ಪದವಿ ಮತ್ತು ಇದೇ ಕಾಲೇಜಿನಲ್ಲಿ ಎಂ ಕಾಂ ಪದವಿಯನ್ನೂ ಪೂರ್ಣಗೊಳಿಸಿದ್ದರು. ಇನ್ನು ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಪೂನಂ ತಾಯಿ ಲತಾ ತೋಡಿ, ‘ಎಲ್ಲ ತಾಯಂದಿರಿಗೂ ಇಂಥ ಮಗಳು ಹುಟ್ಟಬೇಕು,’ ಎಂದು ಆಶಿಸಿದ್ದಾರೆ.
ಈ ಪರೀಕ್ಷೆ ಉತ್ತೀರ್ಣಕ್ಕಾಗಿ ನಾನು ತುಂಬಾ ಕಷ್ಟಪಟ್ಟೆ. ಪ್ರತಿ ಹಂತದಲ್ಲಿಯೂ ನನ್ನ ಕುಟುಂಬ ನನಗೆ ಸಹಕಾರ ನೀಡಿತು. ನನ್ನ ತಂದೆ ಆಟೋ ಚಾಲಕರಾಗಿದ್ದ ಹೊರತಾಗಿಯೂ, ಆರ್ಥಿಕ ಸಂಕಷ್ಟಗಳು ನನ್ನ ಕನಸಿಗೆ ಅಡ್ಡಿಯಾಗದಂತೆ ನೋಡಿಕೊಂಡರು. ನನ್ನ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಪ್ರತಿಯೊಬ್ಬರು ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಎಲ್ಲ ಪೋಷಕರಿಗೆ ಪೂನಂ ಕರೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.