
ತುಂಬಾ ಹಸಿವಾದಾಗ, ಊಟ ಮಾಡಲು ಸಮಯದ ಅಭಾವವಿದ್ದಾಗ ಎಲ್ಲಕ್ಕೂ ಮೊದಲು ನೆನಪಾಗುವುದು ಫಾಸ್ಟ್ ಫುಡ್. ಇನ್ನು ಈಗಿನ ಜನರೇಶನ್ ಸಾಮಾನ್ಯವಾಗಿ ಮುಖ ಮಾಡುವುದು ಹುಡುಕಾಡುವುದು ಕೆಎಫ್'ಸಿ ಇಲ್ಲವೇ ಮೆಕ್ಡೊನಾಲ್ಡ್ಸ್'ನ್ನು. ಇಂತಹುದೇ ಪರಿಸ್ಥಿ ಎದುರಾಗಿದ್ದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹೆಲಿಕಾಪ್ಟರ್ ಚಲಾಯಿಸುತ್ತಿದ್ದ ಪೈಲೆಟ್ನೊಂದಿಗೆ. ಆದರೆ ಈ ವೇಳೆ ಅವರು ತೆಗೆದುಕೊಂಡ ನಿರ್ಧಾರ ಇದೀಗ ವಿಡಿಯೋ ಒಂದನ್ನು ವೈರಲ್ ಆಗುವಂತೆ ಮಾಡಿದೆ.
ಆಸ್ಟ್ರೇಲಿಯಾದ ಮಾಧ್ಯಮವೊಂದು ಈ ಕುರಿತಾಗಿ ಸುದ್ದಿ ಪ್ರಸಾರ ಮಾಡಿದ್ದು, 'ಪೈಲಟ್ ಒಬ್ಬ ಮೆಕ್ಡೊನಾಲ್ಡ್ಸ್ ಎದುರು ಹೆಲಿಕಾಪ್ಟರ್ ಲ್ಯಾಂಡ್ ಮಾಡಿ, ಆತುರಾತುರವಾಗಿ ಒಳಹೋಗಿ ಫಾಸ್ಟ್ ಫುಡ್ ಪ್ಯಾಕ್ ಮಾಡಿಸಿ ಅಷ್ಟೇ ಆತುರವಾಗಿ ಮತ್ತೆ ಹೆಲಿಕಾಪ್ಟರ್'ನೊಳಗೆ ಸೇರಿದ್ದು ನೋಡಿದ ಅಲ್ಲಿನ ನಿವಾಸಿಗಳು ಗಾಬರಿಗೊಂಡಿರುವುದಾಗಿ ತಿಳಿಸಿದೆ. ಇನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬ ಈ ಘಟನೆಯನ್ನು ತನ್ನ ಮೊಬೈಲ್'ನಲ್ಲಿ ಸೆರೆ ಹಿಡಿದು ಸುದ್ದಿ ವಾಃಇನಿಗಳಿಗೆ ರವಾನಿಸಿದ್ದಾನಂತೆ.
ಶನಿವಾರದಂದು ನಡೆದ ಈ ಘಟನೆಯ ಕುರಿತಾಗಿ ಹೇಳಿಕೆ ನೀಡಿರುವ ಆಸ್ಟ್ರೇಲಿಯಾದ ಸಿವಿಲ್ ಎವಿಯೇಷನ್ ಅಥಾರಿಟಿಯ ಆಯುಕ್ತ ಪೀಟರ್ ಗಿಬ್ಸನ್ ಸ್ಥಳದ ಮಾಲಿಕನ ಅನುಮತಿ ಇದ್ದರೆ ಹೆಲಿಕಾಪ್ಟರ್ ಲ್ಯಾಂಡ್ ಮಾಡುವುದು ಅಪರಾಧವಲ್ಲ ಎಂದಿದ್ದಾರೆ.
ಹೆಲಿಕಾಪ್ಟರ್ ಲ್ಯಾಂಡ್ ಮಾಡಿರುವ ಪೈಲಟ್'ನನ್ನೂ ಇನ್ನೂ ಪತ್ತೆ ಹಚ್ಚಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರೂ, ವ್ಯಕ್ತಿಯೊಬ್ಬ ತಾನೇ ಆ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ ಪೈಲಟ್. ತಾನು ಆ ಸ್ಥಳದ ಮಾಲಿಕನ ಅನುಮತಿ ಪಡೆದೇ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ್ದೆ ಎಂದಿದ್ದಾನೆ. ಈತ ತನ್ನ ಹೆಸರು 'ಡೈನ್' ಎಂದೂ ತಿಳಿಸಿದ್ದಾನೆ.
ಕೃಪೆ: NDTv
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.