ಜಾಹೀರಾತಿನಲ್ಲಿ ಮಾಂಸ ತಿನ್ನುವ ಗಣೇಶ! ಹಿಂದೂ ಸಂಘಟನೆಗಳಿಂದ ವಿರೋಧ

By Suvarna Web DeskFirst Published Sep 9, 2017, 5:42 PM IST
Highlights

ಆಸ್ಟ್ರೆಲಿಯಾದಲ್ಲಿ ಕುರಿ ಮಾಂಸ ಸೇವನೆಗೆ ಉತ್ತೇಜನ ನೀಡಲು ಮೀಟ್ & ಲೈವ್’ಸ್ಟಾಕ್ ಆಸ್ಟ್ರೇಲಿಯಾ (MLA)ಯು ಆರಂಭಿಸಿರುವ ಅಭಿಯಾನದ ಜಾಹೀರಾತಿಗೆ ಹಿಂದೂ ಗಳಿಂದ ತೀವ್ರ ವಿರೊಧ ವ್ಯಕ್ತವಾಗಿದೆ.

ನವದೆಹಲಿ: ಆಸ್ಟ್ರೆಲಿಯಾದಲ್ಲಿ ಕುರಿ ಮಾಂಸ ಸೇವನೆಗೆ ಉತ್ತೇಜನ ನೀಡಲು ಮೀಟ್ & ಲೈವ್’ಸ್ಟಾಕ್ ಆಸ್ಟ್ರೇಲಿಯಾ (MLA)ಯು ಆರಂಭಿಸಿರುವ ಅಭಿಯಾನದ ಜಾಹೀರಾತಿಗೆ ಹಿಂದೂಗಳಿಂದ ತೀವ್ರ ವಿರೊಧ ವ್ಯಕ್ತವಾಗಿದೆ.

ಗಣೇಶ ಡಿನ್ನರ್ ಪಾರ್ಟಿಯೊಂದರಲ್ಲಿ ಪಾಲ್ಗೊಂಡು ಕುರಿ ಮಾಂಸವನ್ನು ಅಸ್ವಾದಿಸುತ್ತಿರುವುದನ್ನು ಜಾಹೀರಾತಿನಲ್ಲಿ ತೋರಿಸಲಾಗಿದೆ. ಆದರೆ ಸಸ್ಯಹಾರಿ ಗಣೇಶ ಮಾಂಸವನ್ನು ಸೇವಿಸುತ್ತಿರುವುದನ್ನು ತೋರಿಸಿರುವುದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆಯೆಂದು ಹಿಂದೂ ಸಂಘಟನೆಗಳು ಆಕ್ರೊಶ ವ್ಯಕ್ತಪಡಿಸಿವೆ.

ಗಣೇಶನ ಜೊತೆ ಇತರ ಧಾರ್ಮಿಕ ವ್ಯಕ್ತಿಗಳಾದ ಜೀಸಸ್, ಮೋಸೆಸ್, ಬುದ್ಧ, ಝ್ಯೂಸ್ ಮುಂತಾದವರನ್ನೂ ಕೂಡಾ ತೋರಿಸಲಾಗಿದೆ.

ಈ ವಿಷಯವನ್ನು ಸಿಡ್ನಿಯಲ್ಲಿರುವ ಕಾನ್ಸುಲೇಟ್ ಜನರಲ್ ಮೂಲಕ MLA ಸಂಸ್ಥೆಯ ಗಮನಕ್ಕೆ ತರಲಾಗಿದ್ದು, ಕೂಡಲೇ ಆ ಜಾಹೀರಾತನ್ನು ಹಿಂಪಡೆಯುವಂತೆ ಆಗ್ರಹಿಸಲಾಗಿದೆ.

ಜನಪ್ರಿಯ ವಿಡಿಯೋ ಸಾಮಾಜಿಕ ಜಾಲತಾಣವಾದ ಯೂಟ್ಯೂಬ್’ನಲ್ಲಿ ಆ ಜಾಹೀರಾತನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ. ಆದರೆ ಇತರ ದೇಶಗಳಲ್ಲಿ ಈಗಲೂ ಲಭ್ಯವಿದೆಯೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

 

click me!