ಸಿಬಿಐ ಬೇಡ, ಎಸ್ಐಟಿ ಇರಲಿ: ಗೌರಿ ಲಂಕೇಶ್ ತಾಯಿ ಮನವಿ

Published : Sep 09, 2017, 05:41 PM ISTUpdated : Apr 11, 2018, 12:53 PM IST
ಸಿಬಿಐ ಬೇಡ, ಎಸ್ಐಟಿ ಇರಲಿ: ಗೌರಿ ಲಂಕೇಶ್ ತಾಯಿ ಮನವಿ

ಸಾರಾಂಶ

ತಮ್ಮ ಮಗಳ ಹತ್ಯೆ ತನಿಖೆಯನ್ನು ರಾಜ್ಯ ಸರ್ಕಾರದ ಎಸ್ಐಟಿ ನಡೆಸಲಿ ಸಿಬಿಐ ತನಿಖೆ ಬೇಡ ಎಂದು ಹತ್ಯೆಗೊಳಗಾದ ಗೌರಿ ಲಂಕೇಶ್ ತಾಯಿ ಇಂದಿರಾ ಲಂಕೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು(ಸೆ.09): ತಮ್ಮ ಮಗಳ ಹತ್ಯೆ ತನಿಖೆಯನ್ನು ರಾಜ್ಯ ಸರ್ಕಾರದ ಎಸ್ಐಟಿ ನಡೆಸಲಿ ಸಿಬಿಐ ತನಿಖೆ ಬೇಡ ಎಂದು ಹತ್ಯೆಗೊಳಗಾದ ಗೌರಿ ಲಂಕೇಶ್ ತಾಯಿ ಇಂದಿರಾ ಲಂಕೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಸಿಎಂ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ ಅವರು, ಗೌರಿ ಲಂಕೇಶ್​ ಹತ್ಯೆ ಕುರಿತು ಸೂಕ್ತ ತನಿಖೆ ನಡೆಸಿ ಶೀಘ್ರ ತನಿಖೆ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದಾರೆ. ಕುಟುಂಬಸ್ಥರ ಅಳಲು ಕೇಳಿದ  ಸಿಎಂ ಸಿದ್ದರಾಮಯ್ಯ ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಇಂದಿರಾ ಲಂಕೇಶ್  ಜೊತೆ ಜನವಾದಿ ಮಹಿಳಾ ಸಂಘದ ಸದಸ್ಯೆ ವಿಮಲಾ ಕೂಡ ಉಪಸ್ಥಿತರಿದ್ದರು. ಸಿಎಂ ನಿವಾಸಕ್ಕೆ  ಕವಿತಾ ಲಂಕೇಶ್​ ಹಾಗೂ ಇಂದ್ರಜಿತ್​ ಲಂಕೇಶ್​ ಕೂಡ ಆಗಮಿಸುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Breaking ಸ್ಮೋಕ್ ಬಾಂಬ್ ಎಸೆದು ಸಿಕ್ಕ ಸಿಕ್ಕವರಿಗೆ ಚಾಕು ಇರಿದ ದುಷ್ಕರ್ಮಿ, 3 ಸಾವು, ಐವರು ಗಂಭೀರ
ಶಕ್ತಿಯಡಿ ಸರ್ಕಾರದಿಂದ ಸಾರಿಗೆ ನಿಗಮಕ್ಕೆ ₹4000 ಕೋಟಿ ಬಾಕಿ: ಸಚಿವ ರಾಮಲಿಂಗಾರೆಡ್ಡಿ