
ನವದೆಹಲಿ(ಅ.21): ಎಟಿಎಂ ಕಾರ್ಡ್ ಬಳಕೆದಾರರೇ ಎಚ್ಚರ, ಈಗಾಗಲೇ 32 ಲಕ್ಷಕ್ಕೂ ಹೆಚ್ಚು ಎಟಿಎಂ ಕಾರ್ಡ್ಗಳ ಪಾಸ್ವರ್ಡ್ ಕಳ್ಳತನವಾಗಿದೆ ಇವುಗಳಲ್ಲಿ ವೀಸಾ, ಮಾಸ್ಟರ್ ಕಾರ್ಡ್ಗಳ, ರುಪೇ ಮೊದಲಾದ ಕಾರ್ಡ್ಗಳ ದುರ್ಬಳಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ಬ್ಯಾಂಕ್'ಗಳ 32 ಲಕ್ಷ ಡೆಬಿಟ್ ಕಾರ್ಡ್ಗಳನ್ನು ಸ್ಥಗಿತಗೊಳಿಸಿದ್ದು, ಕಾರ್ಡ್'ಗಳ ಪಾಸ್ವರ್ಡ್ ಬದಲಾಯಿಸಿಕೊಳ್ಳಲು ಬ್ಯಾಂಕ್ ತನ್ನ ಗ್ರಾಹರಿಗೆ ಸೂಚಿಸಿದೆ.
ಯೆಸ್ ಬ್ಯಾಂಕ್ನ ಹಿಟಾಚಿ ಪೇಮೆಂಟ್ ಸರ್ವಿಸಸ್'ನಲ್ಲಿ ಕಾಣಿಸಿದ ಲೋಪದಿಂದಾಗಿ ಮಾಲ್ವೇರ್ ಸಾಫ್ಟ್ವೇರ್ ಬಳಿಸಿ ಖದೀಮರು ಈ ಮಾಹಿತಿ ಕದ್ದಿದ್ದು, ಅಂ.ರಾ. ಡೆಬಿಟ್ ಕಾರ್ಡ್‌ಗಳಿಂದ ಚೀನಾದಲ್ಲಿ ಅನುಮಾನಾಸ್ಪದ ವಹಿವಾಟು ನಡೆಸಲಾಗುತ್ತಿದೆ. ಮಾಹಿತಿ ಸೋರಿಕೆಯಾದ ಡೆಬಿಟ್ ಕಾರ್ಡ್'ಗಳನ್ನು ಬದಲಿಸಲು ಕೂಡಾ ಬ್ಯಾಂಕ್'ಗಳು ಮುಂದಾಗಿವೆ.
-ನಿಮ್ಮ ನಿಮ್ಮ ಡೆಬಿಟ್ ಕಾರ್ಡ್ ಪಾಸ್'ವರ್ಡ್'ಗಳನ್ನು ತಕ್ಷಣ ಬದಲಾಯಿಸಿಕೊಳ್ಳಿ
-ನಿಮ್ಮ ಬ್ಯಾಂಕ್'ನ ಎಟಿಎಂನಿಂದಷ್ಟೇ ಹಣ ಡ್ರಾ ಮಾಡಿಕೊಳ್ಳಿ
-ಬೇರೆ ಬ್ಯಾಂಕ್'ಗಳ ಎಟಿಎಂಗಳನ್ನು ತಾತ್ಕಾಲಿಕವಾಗಿ ಬಳಸಬೇಡಿ
-ತಕ್ಷಣ ಬ್ಯಾಂಕ್'ನವರನ್ನು ಸಂಪರ್ಕಿಸಿ, ಡೆಬಿಟ್ ಕಾರ್ಡ್ ಮಾಹಿತಿ ಪಡೆದುಕೊಳ್ಳಿ
-ನಿಮ್ಮ ನಿಮ್ಮ ಡೆಬಿಟ್ ಕಾರ್ಡ್ ಪಾಸ್ವರ್ಡ್ಗಳನ್ನು ತಕ್ಷಣ ಬದಲಾಯಿಸಿಕೊಳ್ಳಿ
-ಐಸಿಐಸಿಐ, ಯೆಸ್ ಬ್ಯಾಂಕ್, ಹೆಚ್ಡಿಎಫ್ಸಿ ಗ್ರಾಹಕರು ಎಚ್ಚರದಿಂದಿರಿ
-ತಮ್ಮ ಖಾತೆಯಲ್ಲಿ ತಮಗರಿವಿಲ್ಲದಂತೆ ವಹಿವಾಟು ನಡೆದಿರುವುದು ಗೊತ್ತಾದ ತಕ್ಷಣವೇ ಬ್ಯಾಂಕ್ ಸಿಬ್ಬಂದಿ ಗಮನಕ್ಕೆ ತರಬೇಕು. ಅಗತ್ಯಬಿದ್ದರೆ ಲಿಖಿತ ದೂರು ಸಲ್ಲಿಸಬೇಕು.
- ಭಾರಿ ಪ್ರಮಾಣದಲ್ಲಿ ಸುರಕ್ಷತೆ ಛೇದವಾದಾಗ ಒಂದು ಬಾರಿ ಖಾತೆಯಲ್ಲಿರುವ ಹಣ ಸುರಕ್ಷಿತವಾಗಿದೆಯೇ ಎಂಬುದನ್ನು ಎಟಿಎಂನಲ್ಲಿ ಅಥವಾ ಬ್ಯಾಂಕ್‌ನಲ್ಲಿ ಪರೀಕ್ಷಿಸಿಕೊಳ್ಳಬೇಕು.
ಇದನ್ನೂ ಓದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.