ಇರಾನ್-ಇರಾಕ್ ಗಡಿಯಲ್ಲಿ ಪ್ರಬಲ ಭೂಕಂಪ: 129 ಸಾವು

By Suvarna Web deskFirst Published Nov 13, 2017, 8:42 AM IST
Highlights

ಘಟನಾ ಸ್ಥಳಕ್ಕೆ ತಾತ್ಕಾಲಿಕ ಟೆಂಟ್'ಗಳು, ಸಂಚಾರಿ ವೈದ್ಯಕೀಯ ವಾಹನಗಳು, ಹೀಟರ್'ಗಳು, ಹೊದಿಕೆಗಳು, ಆಹಾರ ಪೊಟ್ಟಣಗಳು ಮುಂತಾದ ಸಾಮಗ್ರಿಗಳನ್ನು ಸಾಗಿಸಲಾಗುತ್ತಿದೆ.

ಬಾಗ್ದಾದ್(ನ.13): ಇರಾನ್ - ಇರಾಕ್ ಗಡಿಯ ಕೆರ್ಮನ್ಶಹ್ ಪ್ರಾಂತ್ಯದಲ್ಲಿ ಭಾನುವಾರ ರಾತ್ರಿ 9.30ರ ಸುಮಾರಿನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಕನಿಷ್ಠ 129 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದಾರೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.3 ರಷ್ಟು ದಾಖಲಾಗಿದೆ.

ಇರಾಕ್ ಗಡಿಯ ಸರ್ಪೋಲ್-ಇಜಾಹಾಬ್ ಪ್ರಾಂತ್ಯದಲ್ಲಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ, ಕುರ್ದಿಶ್ ಪ್ರಾಂತ್ಯದಲ್ಲಿ 4 ಮಂದಿ ಸಾವಿಗೀಡಾಗಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ತಾತ್ಕಾಲಿಕ ಟೆಂಟ್'ಗಳು, ಸಂಚಾರಿ ವೈದ್ಯಕೀಯ ವಾಹನಗಳು, ಹೀಟರ್'ಗಳು, ಹೊದಿಕೆಗಳು, ಆಹಾರ ಪೊಟ್ಟಣಗಳು ಮುಂತಾದ ಸಾಮಗ್ರಿಗಳನ್ನು ಸಾಗಿಸಲಾಗುತ್ತಿದೆ. ತೀರ್ವವಾಗಿ ಗಾಯಗೊಂಡವರನ್ನು ಸುರಕ್ಷಿತ ಪ್ರದೇಶದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭೂಕಂಪನದ ಅನುಭವ ಟರ್ಕಿ, ಕುವೈತ್​, ಅರಬ್​ ರಾಷ್ಟ್ರಗಳಲ್ಲಿ ಉಂಟಾಗಿದೆ.

click me!