ಛತ್ತೀಸ್‌ಗಢದಲ್ಲಿ 15 ವರ್ಷಗಳ ಬಳಿಕ ಮುದುಡಿದ ಕಮಲ: ಸೋಲಿಗೆ 6 ಕಾರಣಗಳು

By Web DeskFirst Published Dec 11, 2018, 6:20 PM IST
Highlights

ಈ ಬಾರಿ ಕಾಂಗ್ರೆಸ್, ಬಿಜೆಪಿ ಭದ್ರಕೋಟೆ ಛತ್ತೀಸ್ ಗಢವನ್ನ ಕೈವಶ ಮಾಡಿಕೊಂಡಿದೆ., ಈ ಮೂಲಕ 15 ವರ್ಷಗಳಿಂದ ಛತ್ತೀಸ್ ಗಢದಲ್ಲಿ ನೆಲೆಯೂರಿದ್ದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಹಾಗಾದ್ರೆ 15 ವರ್ಷ ಆಡಳಿತ ಮಾಡಿದ್ದ ಬಿಜೆಪಿ ಸೋಲಿಗೆ ಕಾರಣಗಳೇನು?

ರಾಯ್ಪುರ, [ಡಿ.11]: ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿವಾಗಿದ್ದ ಪಂಚ ರಾಜ್ಯಗಳ ರಿಸೆಲ್ಟ್ ಹೊರ ಬಿದ್ದಿದೆ. ಈ ಫಲಿತಾಂಶ ಅನೇಕ ಅಚ್ಚರಿಗೆ ಕಾರಣವಾಗಿದ್ದು, ಎಲ್ಲರ ಊಹೆ ಉಲ್ಟಾ ಪಲ್ಟಾ ಮಾಡಿದೆ. 

ಐದು ರಾಜ್ಯಗಳ ಫಲಿತಾಂಶದ ಪೈಕಿ  ಛತ್ತೀಸ್ ಗಢ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ನೋಡುವುದಾದ್ರೆ ಈ ಬಾರಿ ಕಾಂಗ್ರೆಸ್,  ಬಿಜೆಪಿ ಭದ್ರಕೋಟೆ ಛತ್ತೀಸ್ ಗಢವನ್ನು ಕೈವಶ ಮಾಡಿಕೊಂಡಿದೆ.

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ

ಒಟ್ಟು 90 ಸದಸ್ಯ ಬಲ ಹೊಂದಿದ್ದ ಛತ್ತೀಸ್ ಗಢ  ವಿಧಾನಸಭೆ ಸ್ಥಾನಗಳಲ್ಲಿ ಕಾಂಗ್ರೆಸ್ 65 ಸ್ಥಾನಗಳಲ್ಲಿ ಗೆದ್ದು ಬೀಗಿದರೆ, ಆಡಳಿತ ರೂಢ  ಬಿಜೆಪಿ  16 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

 ಈ ಮೂಲಕ 15 ವರ್ಷಗಳಿಂದ ಛತ್ತೀಸ್ ಗಢದಲ್ಲಿ ನೆಲೆಯೂರಿದ್ದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ರಾಜ್ಯದ ಮತದಾರರು ಈ ಬಾರಿ ಹೊಸತನಕ್ಕೆ ಮಣೆಹಾಕಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ನೀಡಿದೆ. 

 ಇನ್ನು ಛತ್ತೀಸ್ ಗಢ ಮುಖ್ಯಮಂತ್ರಿ ರೇಸ್ ನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಲ್. ಪುನಿಯಾ ಹೆಸರು ಪ್ರಬಲವಾಗಿ ಕೇಳಿಬಂದಿದೆ. 

 ಮತ್ತೊಂದೆರಡೆ ಮತ್ತೊಮ್ಮೆ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿದ್ದ ರಮಣ್ ಸಿಂಗ್ ಆಸೆ ನುಚ್ಚು ನೂರಾಗಿದ್ದು,  15 ವರ್ಷಗಳ ಬಳಿಕ ಛತ್ತೀಸ್ ಗಢದಲ್ಲಿ ಬಿಜೆಪಿ ಸೋಲಿಗೆ ಕಾರಣಗಳೇನು? ಇಲ್ಲಿವೆ ನೋಡಿ. 

1. 15 ವರ್ಷ ಆಳ್ವಿಕೆಯಲ್ಲಿದ್ದ ಬಿಜೆಪಿಗೆ ಅತಿಯಾದ ವಿಶ್ವಾಸವೇ ಮುಳುವಾಯ್ತಾ..?
2. ರಮಣ್ ಸಿಂಗ್ ಆಳ್ವಿಕೆಯಲ್ಲಿ ಹೇಳಿಕೊಳ್ಳುವ ಅಭಿವೃದ್ಧಿ ಕಾರ್ಯಗಳಾಗಿಲ್ಲ
3. ನಕ್ಸಲ್, ಮಾವೋವಾದಿಗಳ ಉಪಟಳಕ್ಕೆ ಕಡಿವಾಣ ಹಾಕುವಲ್ಲಿ ಬಿಜೆಪಿ ವಿಫಲ 
4. ರೈತರ ಪರ ಯೋಜನೆ ತರುವಲ್ಲಿ ವಿಫಲವಾದ ರಮಣ್ ಸಿಂಗ್ ಸರ್ಕಾರ 
5.  ಮೋದಿ ಅಲೆಯನ್ನ ಮೆಟ್ಟಿ ನಿಂತ ಯುವ ಕಾಂಗ್ರೆಸ್ ನಾಯಕರು.
6. ಬಿಜೆಪಿಯ ಮೂರು ಬಾರಿ [15 ವಷರ್ಷ] ಅವಧಿಕಾರವಧಿ ಬೇಸತ್ತು ಹೊಸತನಕ್ಕೆ ಮಣೆ.

click me!