ಪ್ರಾಣಿ ರಕ್ಷಣೆಗೆ ಕಾಜೀರಂಗ ಉದ್ಯಾನದಲ್ಲಿ 36 ಕಿ.ಮೀ. ಉದ್ದದ ಫ್ಲೈಓವರ್‌?

By Web DeskFirst Published Sep 9, 2019, 10:09 AM IST
Highlights

ಪ್ರಾಣಿ ರಕ್ಷಣೆಗೆ ಕಾಜೀರಂಗ ಉದ್ಯಾನದಲ್ಲಿ 36 ಕಿ.ಮೀ. ಉದ್ದದ ಫ್ಲೈಓವರ್‌?| ಯೋಜನೆ ಪೂರ್ಣಗೊಂಡರೆ, ಇದು ದೇಶದ ಅತಿ ಉದ್ದದ ಫ್ಲೈಓವರ್‌ ಎನಿಸಿಕೊಳ್ಳಲಿದೆ

ಗುವಾಹಟಿ[ಸೆ.09]: ಕಾಜೀರಂಗ ಉದ್ಯಾನವನದಲ್ಲಿ ರಸ್ತೆ ಅಪಘಾತಕ್ಕೆ ಸಿಲುಕಿ ಸಾವು​-ನೋವು ಅನುಭವಿಸುತ್ತಿರುವ ವನ್ಯಜೀವಿಗಳ ರಕ್ಷಣೆಗೆ ಅಸ್ಸಾಂ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಕಾಜೀರಂಗದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 37ರಲ್ಲಿ 38 ಕಿ.ಮೀ. ಉದ್ದದ ಎಲಿವೇಟೆಡ್‌ ರಸ್ತೆ ನಿರ್ಮಾಣಕ್ಕೆ ಪ್ರಸ್ತಾಪಿಸಿದೆ. ಯೋಜನೆ ಪೂರ್ಣಗೊಂಡರೆ, ಇದು ದೇಶದ ಅತಿ ಉದ್ದದ ಫ್ಲೈಓವರ್‌ ಎನಿಸಿಕೊಳ್ಳಲಿದೆ. ಹೈದರಾಬಾದ್‌ನಲ್ಲಿರುವ 11.6 ಕಿ.ಮೀ. ಉದ್ದದ ಪಿವಿಎನ್‌ಆರ್‌ ಎಕ್ಸ್‌ಪ್ರೆಸ್‌ ಹೈವೇ ಸದ್ಯ ದೇಶದ ಅತಿ ಉದ್ದದ ಎಲಿವೇಟೆಡ್‌ ರಸ್ತೆಯಾಗಿದೆ.

ಪ್ರವಾಹ ಪೀಡಿತ ಕಾಜಿರಂಗ ವನ್ಯದಿಂದ ತಪ್ಪಿಸಿಕೊಂಡ ಹುಲಿ ಮನೆಯಲ್ಲಿ ವಿಶ್ರಾಂತಿ!

ಕಾಜೀರಂಗದಲ್ಲಿ ಹಾದುಹೋಗಿರುವ ಎನ್‌ಎಚ್‌-37 ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಿಲುಕಿ ವನ್ಯಜೀವಿಗಳು ಸಾವನ್ನಪ್ಪುತ್ತಿರುವುದು ಹೆಚ್ಚಳಗೊಂಡಿದೆ. ಇದನ್ನು ಮನಗಂಡಿರುವ ಸರ್ಕಾರ 2600 ಕೋಟಿ ರು. ಮೊತ್ತದಲ್ಲಿ 38.84 ಕಿ.ಮೀ ಉದ್ದದ, 11 ಮೀಟರ್‌ ಅಗಲದ ಫ್ಲೈಓವರ್‌ ರಸ್ತೆ ನಿರ್ಮಿಸಲು ಯೋಜನೆ ರೂಪಿಸಿದೆ. ವನ್ಯಜೀವಿಗಳಿಗೆ ಮಾರಕವಾಗಿರುವ ವಾಹನ ಸಂಚಾರ ತಡೆ ಅಥವಾ ಪರ್ಯಾಯ ಮಾರ್ಗ ರೂಪಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) 2013 ರಲ್ಲಿ ಆದೇಶಿಸಿತ್ತು. ಈಗಿರುವ ರಸ್ತೆಯನ್ನೇ ಎತ್ತರಿಸುವ ಕುರಿತೂ ಎನ್‌ಜಿಟಿ ತಿಳಿಸಿತ್ತು.

ಪ್ರವಾಹಕ್ಕೆ ಸಿಲುಕಿ ಕಾಜಿರಂಗ ಉದ್ಯಾನವನದ 225 ಪ್ರಾಣಿಗಳು ಸಾವು?

ಇದಕ್ಕೆ ಅನುಗುಣವಾಗಿ ಕಾಜೀರಂಗ ಉದ್ಯಾನದಲ್ಲಿ ಪ್ರಾಣಿಗಳ ರಕ್ಷಣೆಯ ಉದ್ದೇಶವಾಗಿ ಫ್ಲೈಓವರ್‌ ರಸ್ತೆ ನಿರ್ಮಾಣ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆಯ ಡಿಪಿಆರ್‌ ತಯಾರಿಸುತ್ತಿದೆ

click me!