
ಸಾಧಕರು ಎಂದಾಕ್ಷಣ ನಮಗೆ ಬೆರಳೆಣಿಕೆಯಷ್ಟೇ ಹೆಸರುಗಳು ಕಣ್ಮುಂದೆ ಬರುತ್ತವೆ. ಆದರೆ ಸಮಾಜದ ಒಳಿತಿಗಾಗಿ ಅದೆಷ್ಟೋ ಜನರು, ಎಲೆಮರೆ ಕಾಯಿಯಂತೆ ಸದ್ದಿಲ್ಲದೆ, ಪ್ರಚಾರವಿಲ್ಲದೆ ಅವಿರತ ಸೇವೆ ಮಾಡುತ್ತಿರುವ ಸಾಧಕರು ನಮ್ಮ ಸುತ್ತಲೇ ಇದ್ದಾರೆ. ಇಂತಹ ಸಾಧಕರನ್ನು ಗುರುತಿಸಿ, ಗೌರವಿಸಲು 'ಅಸಾಮಾನ್ಯ ಕನ್ನಡಿಗ' ಎಂಬ ವಿನೂತನ ಕಾರ್ಯಕ್ರಮ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಮಾಧ್ಯಮ ಸಂಸ್ಥೆಗಳು ಜಂಟಿಯಾಗಿ ಕೈಗೆತ್ತಿಕೊಂಡಿವೆ.
ಈಗಾಗಲೇ ನಿಮ್ಮ ಸುತ್ತಲಿರುವ ಇಂತಹ ಸಾಧಕರನ್ನು ಗುರುತಿಸಿ ಅವರ ವಿವರಗಳನ್ನು ಕಳುಹಿಸಲು ಆಹ್ವಾನ ನೀಡಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವಾರು ಸಾಧಕರ ಹೆಸರುಗಳು ನಮಗೆ ತಲುಪಿದ್ದವು. ಇವುಗಳಲ್ಲಿ ಕೆಲವನ್ನು ಆಯ್ದು ಅಂತಿಮ ಪಟ್ಟಿ ಮಾಡಲಾಗಿದೆ. ಇದೀಗ ಈ 'ಅಸಾಮಾನ್ಯ ಕನ್ನಡಿಗ'ರನ್ನು ಗೌರವಿಸುವ ಸಮಯ ಸನ್ನಿಹಿತವಾಗಿದ್ದು, ಈ ವಿನೂತನ ಕಾರ್ಯಕ್ರಮದಲ್ಲಿ ನೀವು ಕೈಜೋಡಿಸಿ.
ಇದೇ 28ರ (28/10/2016) ಶುಕ್ರವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಪ್ಯಾಲೆಸ್ ರೋಡ್'ನಲ್ಲಿರುವ ಸೆಂಟ್ರಲ್ ಕಾಲೇಜು ಕ್ಯಾಂಪಸ್'ನ ಜ್ಞಾನಜ್ಯೋತಿ ಅಡಿಟೋರಿಯಂನಲ್ಲಿ 2016ನೇ ಸಾಲಿನ 'ಅಸಾಮಾನ್ಯ ಕನ್ನಡಿಗ' ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಹಾಗೂ ಕೇಂದ್ರ ಸಚಿವ, ಸನ್ಮಾನ್ಯ ಶ್ರೀ ಸದಾನಂದ ಗೌಡ ಆಗಮಿಸಲಿದ್ದಾರೆ.
ಬನ್ನಿ ಈ 'ಅಸಾಮಾನ್ಯ ಕನ್ನಡಿಗ'ರನ್ನು ಗೌರವಿಸಿ, ಅವರಿಗೊಂದು ಸಲಾಂ ಎನ್ನುವ ವಿನೂತನ ಕಾರ್ಯಕ್ರಮದಲ್ಲಿ ನೀವೂ ಭಾಗಿಯಾಗಿ. ಈ ಕಾರ್ಯಕ್ರದಲ್ಲಿ ಭಾಗವಹಿಸಲು ಪಾಸ್ ವಿತರಿಸಲಾಗುತ್ತಿದೆ. ಇವುಗಳನ್ನು ಪಡೆಯಲು ಈ ನಂಬರ್'ಗೆ ಸಂಪರ್ಕಿಸಿ. ಗಿರೀಶ್ ಸಿ. ಎಂ- 9886329333
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.