ಓವೈಸಿ ಪ್ರಮಾಣದ ವೇಳೆ ಜೈ ಶ್ರೀರಾಮ್ ಘೋಷಣೆ

Published : Jun 18, 2019, 10:06 PM ISTUpdated : Jun 18, 2019, 10:08 PM IST
ಓವೈಸಿ ಪ್ರಮಾಣದ ವೇಳೆ ಜೈ ಶ್ರೀರಾಮ್ ಘೋಷಣೆ

ಸಾರಾಂಶ

ಅಸಾದುದ್ದೀನ್ ಓವೈಸಿ ಸಂಸದರಾಗಿ ಪ್ರಮಾಣ ತೆಗೆದುಕೊಳ್ಳುವ ವೇಳೆ ಸಂಸತ್ ನಲ್ಲಿ ನಡೆದ ಘಟನಾವಳಿಗಳು ನಿಜಕ್ಕೂ ಎರಡು ಘೋಷಣೆಗಳು ಒಂದಕ್ಕೊಂದು ಎದುರು ಬದರಾದವು.

ನವದೆಹಲಿ[ಜೂ. 18]  ಹೈದರಾಬಾದ್​ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಅಸಾದುದ್ದೀನ್​ ಓವೈಸಿ ಸಂಸದರಾಗಿ  ಪ್ರಮಾಣ ತೆಗೆದುಕೊಂಡರು. ಓವೈಸಿ ಪ್ರಮಾಣ ತೆಗೆದುಕೊಳ್ಳುವ ವೇಳೆ ಕೆಲ ಸಂಸದರು ಜೈ ಶ್ರೀರಾಮ್​ ಎಂದು ಘೋಷಣೆ ಕೂಗಿದರು.  ಘೋಷಣೆ ಕೂಗುವ ವೇಳೆ ಓವೈಸಿ ಕೂಡ ತಮ್ಮ ಎರಡು ಕೈಗಳನ್ನು ಎತ್ತುವ ಮೂಲಕ ಘೋಷಣೆ ಕೂಗುವ ಸಂಸದರನ್ನು ಮತ್ತಷ್ಟು ಹುರಿದುಂಬಿಸಿದಂತೆ ಮಾಡಿದರು.

ಆಲ್​ ಇಂಡಿಯಾ ಮಜ್ಲಿಸ್​ ಇ ಇತ್ತೇಹದುಲ್​ ಮುಸ್ಲಿಮೀನ್​ (ಎಐಎಂಐಎಂ) ಮುಖ್ಯಸ್ಥ ಓವೈಸಿ ಪ್ರಮಾಣವಚನ ಸ್ವೀಕಾರಕ್ಕೆ ಸ್ಪೀಕರ್ ಸಮೀಪದ ವೇದಿಕೆ ಬಳಿಗೆ ಸದನದ ಮೆಟ್ಟಿಲು ಇಳಿದು ಬರುವಾಗ ಕೆಲ ಸಂಸದರು ವಂದೇ ಮಾತರಂ, ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್​ ಎಂಬ ಘೋಷಣೆಗಳನ್ನು ಕೂಗಿದರು. ಎರಡು ಕೈಗಳನ್ನು ಬೀಸುತ್ತಾ ವೇದಿಕೆ ಬಳಿಗೆ ಬಂದ ಓವೈಸಿ ಜೈ ಭೀಮ್​, ತಕ್​ಬೀರ್ ಅಲ್ಲಾ ಹು ಅಕ್ಬರ್ ಎನ್ನುತ್ತ ಪ್ರಮಾಣ ತೆಗೆದುಕೊಂಡರು.

ನಂತರ ಸುದ್ದಿಸಂಸ್ಥೆಯೊಂದಕ್ಕೆ ಮಾತನಾಡಿ,  ಇಂಥಹ ಘಟನೆ ನಡೆಯಬೇಕಾಗಿತ್ತು. ಅದೇ ರೀತಿ ಅವರು ಸಂವಿಧಾನವನ್ನು ನೆನಪು ಮಾಡಿಕೊಳ್ಳಲಿ ಮತ್ತು ಬಿಹಾರದಲ್ಲಿ ಮಕ್ಕಳು ಸಾಯುತ್ತಿರುವುದನ್ನು ನೆನಪು ಮಾಡಿಕೊಳ್ಳಲಿ ಎಂದು ಹೇಳಿ ಹೊರಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು