ಜೈಷ್-ಎ-ಸೈತಾನ್: ಅಜರ್ ಮುಸುಡಿಗಿಷ್ಟು ಎಂದ ಒವೈಸಿ!

Published : Feb 24, 2019, 12:53 PM IST
ಜೈಷ್-ಎ-ಸೈತಾನ್: ಅಜರ್ ಮುಸುಡಿಗಿಷ್ಟು ಎಂದ ಒವೈಸಿ!

ಸಾರಾಂಶ

ಜೈಷ್-ಎ-ಮೊಹ್ಮದ್ ಸಂಘಟನೆ ಅಸಲಿ ಹೆಸರೇನು ಗೊತ್ತಾ? ಜೈಷ್ ಸಂಘಟನೆಯ ಅಸಲಿ ಮುಖ ಬಿಚ್ಚಿಟ್ಟ ಅಸದುದ್ದೀನ್ ಒವೈಸಿ| ಜೈಷ್-ಎ-ಸೈತಾನ್ ಉಗ್ರ ಸಂಘಟನೆ ಎಂದ ಒವೈಸಿ| ಪುಲ್ವಾಮಾ ದಾಳಿಯಲ್ಲಿ ಪಾಕ್ ಕೈವಾಡ ಸ್ಪಷ್ಟ ಎಂದ ಸಂಸದ|

ಮುಂಬೈ(ಫೆ.24): ಪುಲ್ವಾಮಾ ಉಗ್ರ ದಾಳಿಯನ್ನು ಬಲವಾಗಿ ಖಂಡಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ, ದಾಳಿಯ ರೂವಾರಿ ಜೈಷ್-ಎ-ಮೊಹ್ಮದ್ ಸಂಘಟನೆಗೆ ಮುಟ್ಟಿ ನೋಡಿಕೊಳ್ಳುವಂತ ಜವಾಬು ನೀಡಿದ್ದಾರೆ.

ಮುಂಬಯಿನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಒವೈಸಿ, ಉಗ್ರ ಮಸೂದ್ ಅಜರ್ ನ ಸಂಘಟನೆ ಹೆಸರು ಜೈಷ್-ಎ-ಮೊಹ್ಮದ್(ಮೊಹ್ಮದ್ ಅವರ ಸೈನ್ಯ) ಅಲ್ಲ ಜೈಷ್-ಎ-ಸೈತಾನ್(ರಾಕ್ಷಸನ ಸೈನ್ಯ) ಎಂದು ಒವೈಸಿ ಗುಡುಗಿದ್ದಾರೆ.

ಪುಲ್ವಾಮಾ ದಾಳಿಯ ಹಿಂದೆ ಪಾಕ್ ಕೈವಾಡವಿದ್ದು, ಅಲ್ಲಿನ ಸರ್ಕಾರ, ಐಎಸ್ ಐ ಹಾಗೂ ಜೆಇಎಂ ಸೇರಿ ಈ ದಾಳಿಯನ್ನು ನಡೆಸಿವೆ ಎಂದು ಒವೈಸಿ ನೇರ ಆರೋಪ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಟ್ರಂಪ್ ಮಾತ್ರವಲ್ಲ, ಕ್ಲಿಂಟನ್, ಬಿಲ್ ಗೇಟ್ಸ್ ಕೂಡ..' ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಫೋಟೋಗಳು ರಿಲೀಸ್
ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!