ಯೋಗಿ ಅಧಿಕಾರಕ್ಕೇರಿದ ಮೇಲೆ 300 ಕಸಾಯಿಖಾನೆಗಳಿಗೆ ಬೀಗ

By Suvarna Web DeskFirst Published Mar 24, 2017, 4:50 PM IST
Highlights

ಭಾರತದಿಂದ ರಫ್ತಾಗುವ ಮಾಂಸದಲ್ಲಿ ಉತ್ತರ ಪ್ರದೇಶ ಶೇ.34ರಷ್ಟು ಪಾಲು ಹೊಂದಿದೆ.

ಲಖನೌ(ಮಾ.24): ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಅಕ್ರಮ ಕಸಾಯಿಖಾನೆ ಮುಚ್ಚುವ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಇದುವರೆಗೆ 300ಕ್ಕೂ ಅಧಿಕ ಅಕ್ರಮ ಕಸಾಯಿಖಾನೆಗಳಿಗೆ ಬೀಗಜಡಿಯಲಾಗಿದೆ.

ಇದರ ಬಿಸಿ ಬಿಜೆಪಿ ಮುಖಂಡ ಹಾಗೂ ಮಾಂಸ ವ್ಯಾಪಾರಿ ಯಾಕುಬ್ ಖುರೇಷಿ ಅವರಿಗೂ ತಟ್ಟಿದ್ದು, ಮೇರಠ್‌'ನಲ್ಲಿ ಯಾಕುಬ್ ಮತ್ತು ಅವರ ಕುಟುಂಬ ಹೊಂದಿರುವ ಹಲವಾರು ಮಾಂಸ ಸಂಸ್ಕರಣಾ ಘಟಕಗಳನ್ನು ಮುಚ್ಚಲಾಗಿದೆ.

Latest Videos

ಪಶ್ಚಿಮ ಉತ್ತರ ಪ್ರದೇಶದಲ್ಲಿ ನೂರಾರು ಮಾಂಸ ಸಂಸ್ಕರಣಾ ಘಟಕಗಳಿದ್ದು, ಎಮ್ಮೆ ಮಾಂಸವನ್ನು ರಫ್ತು ಮಾಡಲಾಗುತ್ತಿದೆ. ಅನೇಕ ಮಾಂಸ ಸಂಸ್ಕರಣಾ ಘಟಕಗಳಲ್ಲಿ ಗೋ ವಧೆ ಮಾಡಲಾಗುತ್ತಿದೆ ಎಂದು ಹಿಂದು ಸಂಘಟನೆಗಳು ಆರೋಪಿಸಿವೆ.

ಭಾರತದಿಂದ ರಫ್ತಾಗುವ ಮಾಂಸದಲ್ಲಿ ಉತ್ತರ ಪ್ರದೇಶ ಶೇ.34ರಷ್ಟು ಪಾಲು ಹೊಂದಿದೆ. ಇಡೀ ವಿಶ್ವದಲ್ಲಿ ಬಳಕೆಯಾಗುವ ಎಮ್ಮೆ ಮಾಂಸದ ಪೈಕಿ ಶೇ.43ರಷ್ಟು ಉತ್ತರಪ್ರದೇಶದಿಂದ ರವಾನೆಯಾಗುತ್ತದೆ.

click me!