‘ನಾನು ಹಿಂದೂ, ಆದರೆ ನನಗೆ ಹಿಂದೂಸ್ಥಾನದಲ್ಲಿರಲು ಭಯವಾಗ್ತಿದೆ’

By Web DeskFirst Published Jul 12, 2019, 4:36 PM IST
Highlights

ಬಾಲಿವುಡ್ ನಿಂದ ಮರೆಯಾಗಿದ್ದ ಅಸಹಿಷ್ಣುತೆ ಕೂಗು ಮತ್ತೆ ಎದ್ದಿದೆಯೇ? ಎಂಬ ಪ್ರಶ್ನೆ ಮೂಡುವಂತಾಗಿದೆ. ನಟಿಯೊಬ್ಬಳು ನೀಡಿದ ಹೇಳಿಕೆ ಇದಕ್ಕೆಲ್ಲ  ಮೂಲ ಕಾರಣ..

ಮುಂಬೈ[ಜು. 12]  ನನ್ನ ಟ್ವಿಟರ್ ಅಕೌಂಟ್​ ಅನ್ನ ಮುಂಬೈ ಪೊಲೀಸರು ಬ್ಲಾಕ್​ ಮಾಡಿದ್ದಾರೆ ಅಂತಾ ಬಾಲಿವುಡ್​ ನಟಿ ಪಾಯಲ್​ ರೋಹ್ಟಗಿ ಆರೋಪಿಸಿದ್ದರು. ಅದಲ್ಲೇ ತನ್ನ ಟ್ವಿಟರ್​ ಖಾತೆಯನ್ನ ಬ್ಲಾಕ್​ ಮಾಡಿದ್ದಾರೆ ಎನ್ನಲಾಗಿರುವ ಸ್ಕ್ರೀನ್​ ಶಾಟ್ ಅನ್ನು ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದರು. ಸಹಜವಾಗಿ ಈ ಸುದ್ದಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಆದರೆ ಇಷ್ಟೆ ಆಗಿದ್ದರೆ ಪ್ರಕರಣ ಅಲ್ಲಿಗೆ ಅಂತ್ಯ ಕಾಣುತ್ತಿತ್ತೆನೋ?  ಆದರೆ ಮುಂದುವರಿದ ನಟಿ,  'ನಾನು ಹಿಂದೂ ನಟಿ. ಆದ್ರೆ ಪೊಲೀಸರ ನಡೆಯಿಂದ ನನಗೆ ಹಿಂದೂಸ್ಥಾನದಲ್ಲಿ ವಾಸಿಸಲು ಭಯವಾಗುತ್ತಿದೆ. ನನ್ನ ಕುಟುಂಬಸ್ಥರು ನನಗೆ ಹಿಂದೂ ಧರ್ಮದ ಪರವಾಗಿ ಮಾತನಾಡಬೇಡ ಅಂತಾ ಯಾಕೆ ಹೇಳುತ್ತಿದ್ದರು ಎಂಬುದು ಈಗ ಅರ್ಧವಾಗುತ್ತಿದೆ'  ಎಂದು ಬರೆದುಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದೆ.

ನನ್ನಿಂದಲೇ ನಿಮಗೆ ಆದಾಯ, ಧೈರ್ಯವಿದ್ರೆ ಬ್ಯಾನ್ ಮಾಡಿ: ಪ್ರೆಸ್‌ಗೆ ಕಂಗನಾ ಸವಾಲ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಮೇಲ್ ಮಾಡಿ ಮಾಹಿತಿ ನೀಡಿದ್ದೇನೆ  ಎಂದಿದ್ದಾರೆ. ನಟಿ ಆರೋಪಕ್ಕೆ ಉತ್ತರ ನೀಡಿರುವ ಮುಂಬೈ ಪೊಲೀಸರು, ನಾವು ಸಾರ್ವಜನಿಕರ ಪರವಾಗಿ ಸದಾ ಕೆಲಸ ಮಾಡುತ್ತೇವೆ.  ನಿಮ್ಮ ಖಾತೆಯನ್ನು ನಿರ್ವಹಿಸಲು ನೀವು ಸ್ವತಂತ್ರರು. ನಮ್ಮ ತಾಂತ್ರಿಕ ವಿಭಾಗ ಸಹ ನಿಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.

Why has blocked me 🧐 ? Are U BFF with drug accused jailed minority tag actor 🤨As a I am scared to live in Hindustan if Police has such baised behaviour. Now I understand why my family tells me 2 stop talking 4 Hindus😡 pic.twitter.com/dhYmCFM3RC

— PAYAL ROHATGI & Team -BHAKTS of BHAGWAN RAM (@Payal_Rohatgi)

I have emailed ma’am & 🙏 regarding your biased attitude towards me. pic.twitter.com/krniLoNmzd

— PAYAL ROHATGI & Team -BHAKTS of BHAGWAN RAM (@Payal_Rohatgi)
click me!