ಮಾಲೀಕನನ್ನೇ ತಿಂದು ತೇಗಿದ 18 ಸಾಕುನಾಯಿಗಳು!

Published : Jul 12, 2019, 04:36 PM IST
ಮಾಲೀಕನನ್ನೇ ತಿಂದು ತೇಗಿದ 18 ಸಾಕುನಾಯಿಗಳು!

ಸಾರಾಂಶ

ಮಾಲೀಕನನ್ನೇ ತಿಂದು ತೇಗಿದ 18 ಸಾಕುನಾಯಿಗಳು| ಟೆಕ್ಸಾಸ್’ನಲ್ಲಿ ನಡೆಯಿತು ಹೃದಯ ವಿದ್ರಾವಕ ಘಟನೆ| ಪ್ರೀತಿಯಿಂದ ಸಾಕಿದ ನಾಯಿಗಳಿಗೆ ಆಹಾರವಾದ ಫ್ರೆಡಿ ಮ್ಯಾಕ್| 

ಟೆಕ್ಸಾಸ್(ಜು.12): ನಾಯಿ ಮನುಷ್ಯನ ಅತ್ಯಂತ ನಂಬಿಗಸ್ಥ ಪ್ರಾಣಿ ಅಂತಾರೆ. ತನ್ನ ಮಾಲೀಕನಿಗಾಗಿ ಸಾಕುನಾಯಿಗಳು ತಮ್ಮ ಜೀವವನ್ನೇ ಕೊಡುತ್ತವೆ. ಆದರೆ ಇದಕ್ಕೆ ಅಪವಾದ ಎಂಬಂತೆ ಅತ್ಯಂತ ಪ್ರೀತಿಯಿಂದ ಸಾಕಿದ ನಾಯಿಗಳೇ ಮಾಲೀಕನನ್ನು ತಿಂದು ತೇಗಿದ ಹೃದಯ ವಿದ್ರಾವಕ ಘಟನೆ ಟೆಕ್ಸಾಸ್’ನಲ್ಲಿ ನಡೆದಿದೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇಲ್ಲಿನ ಫ್ರೆಡಿ ಮ್ಯಾಕ್ ಎಂಬ ವ್ಯಕ್ತಿ ತನ್ನ 18 ನಾಯಿಗಳೊಂದಿಗೆ ತನ್ನ ಫಾರ್ಮ್ ಹೌಸ್’ಗೆ ತೆರಳಿದ್ದ. ಕಳೆದೊಂದು ತಿಂಗಳಿನಿಂದ ಮ್ಯಾಕ್ ಕುರಿತು ಯಾವುದೇ ಮಾಹಿತಿಯೇ ಇರಲಿಲ್ಲ ಎನ್ನಲಾಗಿದೆ.

ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮ್ಯಾಕ್ ಅಥವಾ ಆತನ ಶವಕ್ಕಾಗಿ ಶೋಧ ನಡೆಸುತ್ತಲೇ ಇದ್ದರು. ಈ ಮಧ್ಯೆ ಆತನ ನಾಯಿಗಳನ್ನು ಪರಿಶೀಲನೆ ನಡೆಸಿದಾಗ ಅವುಗಳ ದೇಹದಲ್ಲಿ ಮ್ಯಾಕ್’ನ ದೇಹದ ಅಂಶಗಳು ಪತ್ತೆಯಾಗಿವೆ ಎನ್ನಲಾಗಿದೆ.

ಅನಾರೋಗ್ಯಪೀಡಿತ ಮ್ಯಾಕ್’ನನ್ನು ಆತನ ಸಾಕುನಾಯಿಗಳೇ ಕೊಂದು ತಿಂದವೋ ಅಥವಾ ಆತ ಅಸುನೀಗಿದ ಬಳಿಕ ಆತನ ಮೃತದೇಹವನ್ನಷ್ಟೇ ತಿಂದಿವೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ