
ನವದೆಹಲಿ (ಆ. 28): ಯಶಸ್ವಿ ಕಿಡ್ನಿ ಕಸಿ ನಂತರ ಅರುಣ್ ಜೇಟ್ಲಿ ನಾರ್ತ್ ಬ್ಲಾಕ್‌ನ ಹಣಕಾಸು ಇಲಾಖೆಗೆ ಮರಳಿದ್ದು, ಮುಂದಿನ ಒಂದು ತಿಂಗಳು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕಚೇರಿಗೆ ಬರಲಿದ್ದು, ಮಧ್ಯಾಹ್ನದ ನಂತರ ಮನೆಯಿಂದಲೇ ಕೆಲಸ ಮಾಡುವವರಿದ್ದಾರೆ.
ಸೋಂಕಿನ ಭೀತಿಯಿಂದ ಯಾರ ಜೊತೆಗೂ ಕೈಕುಲುಕದಂತೆ, 5 ಫೀಟ್ ಅಂತರದಿಂದಲೇ ಮಾತನಾಡಿ ಕಳಿಸುವಂತೆ ವೈದ್ಯರು ಜೇಟ್ಲಿಗೆ ಸೂಚಿಸಿದ್ದಾರೆ. ಹೀಗಾಗಿ ಕಚೇರಿಗೆ ಬಂದ ಮೊದಲ ಸಭೆಯಲ್ಲಿ ಹಣಕಾಸು ಕಾರ್ಯದರ್ಶಿಗಳು ಕೂಡ ಜೇಟ್ಲಿ ಅವರಿಂದ ಬಹುದೂರ ಕುಳಿತೇ ಸಭೆ ನಡೆಸಬೇಕಾಯಿತು.
ತುಂಬಾ ದಿನಗಳ ನಂತರ ಅರುಣ್ ಜೇಟ್ಲಿ ಅವರನ್ನು ನೋಡಿದ ಪ್ರಧಾನಿ ಮೋದಿ ಕೈ ಕುಲುಕಲು ಬಂದಾಗ ಹತ್ತಿರ ಬರಬೇಡಿ ಎಂದು ಕೇಳಿಕೊಂಡ ಜೇಟ್ಲಿ ದೂರದಿಂದಲೇ ಕೈಮುಗಿದು ಕುಳಿತುಕೊಂಡರು. ಅಂದ ಹಾಗೆ ಇಡೀ ಹಣಕಾಸು ಇಲಾಖೆಯಲ್ಲಿ ಅತೀ ಹೆಚ್ಚು ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.