ಕಾಂಗ್ರೆಸ್‌ನ ಈ ಸಚಿವರ ಖಾತೆಗೆ ಕತ್ತರಿ

By Web DeskFirst Published Aug 28, 2018, 12:48 PM IST
Highlights

ಸಮ್ಮಿಶ್ರ ಸರ್ಕಾರದಲ್ಲಿ ಇದೀಗ ಕೆಲವು ಅಸಮಧಾನಗಳು ಏಳುತ್ತಿರುವ ಬೆನ್ನಲ್ಲೇ ಇದೀಗ ಕೆಲ ಸಚಿವರಿಗೆ ಶಾಕ್ ನೀಡಲು ಕಾಂಗ್ರೆಸ್ ಹೈ ಕಮಾಂಡ್ ಸಿದ್ಧವಾಗಿದೆ. 2 ಖಾತೆ ಹೊಂದಿರುವ ಸಚಿವ ಸ್ಥಾನಗಳಲ್ಲಿ ಒಂದನ್ನು ಹಿಂದಕ್ಕೆ ಪಡೆಯಲು ಪ್ಲಾನ್ ಮಾಡಲಾಗುತ್ತಿದೆ. 

ಬೆಂಗಳೂರು: ಎರಡು ಖಾತೆ ಹೊಂದಿರುವ ಸಚಿವರ ಖಾತೆಗಳಿಗೆ ಕತ್ತರಿ ಬೀಳುತ್ತಿದ್ದು, ಕಾಂಗ್ರೆಸ್ ಹಿರಿಯ ಸಚಿವರ ಖಾತೆ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಪ್ಲಾನ್ ಮಾಡಿದೆ.  

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಒಂದು ಖಾತೆ ಬಿಟ್ಟುಕೊಡಬೇಕು ಎಂದು ಸೂಚಿಸಿರುವ ಹೈಕಮಾಂಡ್, ಈ ಸಂಬಂಧ ಸೆಪ್ಟಂಬರ್ 1 ಮತ್ತು 2 ರಂದು ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಿದೆ.

ಸಂಪುಟ ವಿಸ್ತರಣೆ, ಲೋಕಸಭಾ ಚುನಾವಣೆ ತಯಾರಿ ಕುರಿತು ಕೂಡ ಈ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಅಲ್ಲದೇ ಸರ್ಕಾರಕ್ಕೆ 100 ದಿನ ತುಂಬುತ್ತಿದ್ದು ಇದೇ ವೇಳೆ ಕಾಂಗ್ರೆಸ್ ಸಚಿವರ ಮೌಲ್ಯಮಾಪನವನ್ನೂ ಕೂಡ ಮಾಡಲಾಗುತ್ತದೆ. ಸಚಿವರ ಕಾರ್ಯ ವೈಖರಿ ಬಗ್ಗೆಯೂ ಕೂಡ ಚರ್ಚೆ ಮಾಡಲಾಗುತ್ತದೆ. 

ಸಂಪುಟ ವಿಸ್ತರಣೆ ವೇಳೆ ಎರಡು ಖಾತೆ ಹೊಂದಿದವರು ಒಂದು ಖಾತೆ ಬಿಟ್ಟುಕೊಡಲು ಉಸ್ತುವಾರಿ ವೇಣುಗೋಪಾಲ್ ಅವರು ತಾಕೀತು ಮಾಡಲಿದ್ದಾರೆ.  ತಾಕೀತು ಮಾಡಲಿರುವ ವೇಣುಗೋಪಾಲ್.  ಕೆಪಿಸಿಸಿ ಯಲ್ಲಿ ಸಭೆ ನಡೆಯಲಿದ್ದು, ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್ ಸಭೆಯಲ್ಲಿ ಭಾಗಿಯಾಗಲಿದ್ಧಾರೆ.

click me!