ಒಂದೇ ವಾರದಲ್ಲಿ ಎಲ್ಲ ಚಾನಲ್'ಗಳ ದಾಖಲೆ'ಗಳನ್ನು ಧೂಳಿಪಟ ಮಾಡಿದ ಅರ್ನಾಬ್'ರ ಮೊದಲ ಮಾತು

Published : May 18, 2017, 09:17 PM ISTUpdated : Apr 11, 2018, 01:05 PM IST
ಒಂದೇ ವಾರದಲ್ಲಿ ಎಲ್ಲ ಚಾನಲ್'ಗಳ ದಾಖಲೆ'ಗಳನ್ನು ಧೂಳಿಪಟ ಮಾಡಿದ ಅರ್ನಾಬ್'ರ ಮೊದಲ ಮಾತು

ಸಾರಾಂಶ

ವೀಕ್ಷಕರ ಸಮೀಕ್ಷಾ ಮಂಡಳಿ 'ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್' ಕಳೆದ ಒಂದು ವಾರದ ಅಂಕಿಅಂಶಗಳನ್ನು ನೀಡಿದ್ದು, ಇದರನ್ವಯ ಮೇ 12ರವರೆಗೆ ರಿಪಬ್ಲಿಕ್ ಟಿವಿ 2.11 ಮಿಲಿಯನ್ ಇಂಪ್ರೆಷನ್ ಅಥವಾ ಟೆವಿವಿಷನ್ ವ್ಯೂವರ್ ಶಿಪ್ ಇನ್ ಥೌಸೆಂಡ್ (ಟಿವಿಟಿ) ಗಳನ್ನು ಪಡೆದಿದೆ. ಅಲ್ಲದೆ ದೇಶದ ಪ್ರಮುಖ ಸುದ್ದಿ ವಾಹಿನಿಯೆನಿಸಿಕೊಂಡಿರುವ  'ಟೈಮ್ಸ್ ನೌ' ಅನ್ನು  ಹಿಂದಿಕ್ಕಿ ಶೇ.84.4ರಷ್ಟು ಹೆಚ್ಚಿನ ಮುನ್ನಡೆ ಪಡೆದಿದೆ. ಹಲವು ವರ್ಷಗಳ ಕಾಲ ಮೊದಲಸ್ಥಾನ ಅಲಂಕರಿಸಿದ್ದ ಟೈಮ್ಸ್'ನೌ ರಿಪಬ್ಲಿಕ್ ಬಂದ ಆರಂಭಗೊಂಡ ಮೊದಲ ವಾರದಲ್ಲಿ 1.14 ಮಿಲಿಯನ್ ವೀಕ್ಷಣೆಯೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ.  

ಹಲವು ಗುರಿ, ನಿರೀಕ್ಷೆಗಳೊಂದಿಗೆ ಸಾರ್ವಜನಿಕರ ಮುಂದೆ ಕೇವಲ ಒಂದು ವಾರದ ಹಿಂದಷ್ಟೆ ಆರಂಭಗೊಂಡಿದ್ದ  ಅರ್ನಾಬ್ ಗೋ'ಸ್ವಾಮಿ ನೇತೃತ್ವದ 'ರಿಪಬ್ಲಿಕ್' ಇಂಗ್ಲಿಷ್ ವಾಹಿನಿಗೆ ಭರ್ಜರಿ ಯಶಸ್ಸು ದೊರಕಿದೆ.

ಪ್ರಾರಂಭವಾದ ಒಂದು ವಾರದಲ್ಲಿ ಭಾರತದ ಅತಿರಥ ಹಾಗೂ ಮಹಾರಥರೆನಿಸಿಕೊಂಡಿದ್ದ ಎಲ್ಲ ಚಾನಲ್'ಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದೆ. ತಮ್ಮ ವಿರುದ್ಧ ಟೀಕೆ ಮಾಡುತ್ತಿದ್ದವರಿಗೆಲ್ಲ ತಕ್ಕ ಉತ್ತರ ನೀಡಿದ್ದಾರೆ. ಇಡೀ ಚಾನಲ್'ಗಳ ಜಾಹೀರಾತು ಮಾರುಕಟ್ಟೆಯನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳುವ ಎಲ್ಲ ಸಾಧ್ಯತೆಗಳು ಗೋಚರವಾಗಿದೆ. ಶಹಬುದ್ದೀನ್

ವೀಕ್ಷಕರ ಸಮೀಕ್ಷಾ ಮಂಡಳಿ 'ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್' ಕಳೆದ ಒಂದು ವಾರದ ಅಂಕಿಅಂಶಗಳನ್ನು ನೀಡಿದ್ದು, ಇದರನ್ವಯ ಮೇ 12ರವರೆಗೆ ರಿಪಬ್ಲಿಕ್ ಟಿವಿ 2.11 ಮಿಲಿಯನ್ ಇಂಪ್ರೆಷನ್ ಅಥವಾ ಟೆವಿವಿಷನ್ ವ್ಯೂವರ್ ಶಿಪ್ ಇನ್ ಥೌಸೆಂಡ್ (ಟಿವಿಟಿ) ಗಳನ್ನು ಪಡೆದಿದೆ. ಅಲ್ಲದೆ ದೇಶದ ಪ್ರಮುಖ ಸುದ್ದಿ ವಾಹಿನಿಯೆನಿಸಿಕೊಂಡಿರುವ  'ಟೈಮ್ಸ್ ನೌ' ಅನ್ನು  ಹಿಂದಿಕ್ಕಿ ಶೇ.84.4ರಷ್ಟು ಹೆಚ್ಚಿನ ಮುನ್ನಡೆ ಪಡೆದಿದೆ. ಹಲವು ವರ್ಷಗಳ ಕಾಲ ಮೊದಲಸ್ಥಾನ ಅಲಂಕರಿಸಿದ್ದ ಟೈಮ್ಸ್'ನೌ ರಿಪಬ್ಲಿಕ್ ಬಂದ ಆರಂಭಗೊಂಡ ಮೊದಲ ವಾರದಲ್ಲಿ 1.14 ಮಿಲಿಯನ್ ವೀಕ್ಷಣೆಯೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ.  

ಮೊದಲ ಯಶಸ್ಸಿನ ಸಂತಸಕ್ಕೆ ಸಂಸ್ಥಾಪಕ ಸಂಪಾದಕ ಅರ್ನಾಬ್ ಗೋಸ್ವಾಮಿ ಪ್ರತಿಕ್ರಿಯೆ ನೀಡಿದ್ದು ಹೀಗೆ,

‘ರಿಪಬ್ಲಿಕ್ ಟಿವಿ ಕೇವಲ ಒಂದೇ ವಾರದಲ್ಲೇ ನಿರೀಕ್ಷೆಗೂ ಮೀರಿದ ಅತೀ ದೊಡ್ಡ ಮಟ್ಟದ ಯಶಸ್ಸಿನ ವೀಕ್ಷಣೆಯನ್ನು ಗಳಿಸಿದೆ. ಜನರು ವಿಶ್ವಾಸಾರ್ಹ ಸುದ್ದಿಗಳನ್ನು ನೋಡುತ್ತಾರೆ ಎಂಬ ನಂಬಿಕೆ ನಿಜವಾಗಿದೆ. ರಿಪಬ್ಲಿಕ್ ಟೀವಿ'ಯನ್ನುದೇಶದ ಮೊದಲ ಸ್ಥಾನಕ್ಕೆ ತಲುಪಿಸಿದ ಸಾರ್ವಜನಿಕರಿಗೆ ನಾನು ಕೃತಜ್ಞನಾಗಿದ್ದೇನೆ.' ಎಂದು ತಮ್ಮ ಸಂದೇಶ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ