ಪಾಂಪೋರ್ ನಲ್ಲಿ ಮುಂದುವರಿದ ಸೇನಾ ಕಾರ್ಯಚರಣೆ; ಇಬ್ಬರು ಉಗ್ರರು ಬಲಿ

Published : Oct 12, 2016, 07:48 AM ISTUpdated : Apr 11, 2018, 12:45 PM IST
ಪಾಂಪೋರ್ ನಲ್ಲಿ ಮುಂದುವರಿದ ಸೇನಾ ಕಾರ್ಯಚರಣೆ; ಇಬ್ಬರು ಉಗ್ರರು ಬಲಿ

ಸಾರಾಂಶ

ಇಬ್ಬರು ಉಗ್ರರ ಮೃತ ದೇಹವನ್ನು ವಶಕ್ಕೆ ಪಡೆದಿರುವ ಯೋಧರು ಅವರ ಬಳಿ ಇದ್ದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಇನ್ನುಳಿದ ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಪಾಂಪೋರ್ (ಅ.12): ಜಮ್ಮು ಕಾಶ್ಮೀರದ  ಪಾಂಪೋರ್’ನಲ್ಲಿ ಸೇನಾ ಕಾರ್ಯಚರಣೆ ಮುಂದುವರಿದೆ. ಸೇನಾ ದಾಳಿಗೆ ಮತ್ತೊರ್ವ ಉಗ್ರ ಬಲಿಯಾಗಿದ್ದಾನೆ.

ಕಳೆದ 3 ದಿನದಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ, ಇಡಿಐ ಬಿಲ್ಡಿಂಗ್ ನಲ್ಲಿ ಅಡಗಿ ಕುಳಿತಿದ್ದ ಉಗ್ರರ ಪೈಕಿ ಈವರೆಗೆ ಇಬ್ಬರನ್ನು ಭಾರತೀಯ ಯೋಧರು ಸದೆ ಬಡಿದಿದ್ದಾರೆ. ನಿನ್ನೆ ಸಂಜೆ ಒಬ್ಬ ಉಗ್ರನನ್ನು ಗುಂಡಿಕ್ಕಿ ಕೊಂದಿದ್ದ ಯೋಧರು, ಇಂದು ಮತ್ತೊರ್ವನನ್ನು ನೆಲಕುರಿಳಿಸಿದ್ದಾರೆ.

ಇಬ್ಬರು ಉಗ್ರರ ಮೃತ ದೇಹವನ್ನು ವಶಕ್ಕೆ ಪಡೆದಿರುವ ಯೋಧರು ಅವರ ಬಳಿ ಇದ್ದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಇನ್ನುಳಿದ ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಇದರ ಜೊತೆ  ಭಾರತ ಪಾಕ್ ಗಡಿಯಲ್ಲಿ ಲಷ್ಕರ್  ಏ ತೋಯ್ಬ ದ ಇನ್ನು ಆರು ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿಯನ್ನು ನೀಡಿದೆ. ಇದರಿಂದ ಗುಪ್ತಚರದಳ ಎಚ್ಚರಿಕೆ ವಹಿಸುವಂತೆ ಭಾರತೀಯ ಸೇನೆಗೆ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!