
ಲಿಟಲ್ ರಾಕ್(ಅ.13): 93 ವರ್ಷದ ಹಳೆಯದಾದ ಸೇತುವೆಯನ್ನ ಕೆಡವಿ ಹೊಸದಾಗಿ ನಿರ್ಮಾಣ ಮಾಡಲು ಮುಂದಾದ ಸಂದರ್ಭದಲ್ಲಿ ಸ್ಪೋಟಕಗಳನ್ನು ಕಟ್ಟಿ ಸೇತುವೆಯನ್ನು ಬ್ಲಾಸ್ಟ್ ಮಾಡಿದರು ಮೊದಲ ಯತ್ನಕ್ಕೆ ಸೇತುವೆ ಬಿಳಲೆ ಇಲ್ಲ.
ಈ ಘಟನೆ ಅಮೆರಿಕದಲ್ಲಿ ನಡೆದಿದೆ. ಅರ್ಕಾನ್ಸಾಸ್ ನದಿಗೆ ಅಡ್ಡಲಾಗಿ ಲಿಟಲ್ ರಾಕ್ ಮತ್ತು ಉತ್ತರ ಲಿಟಲ್ ರಾಕ್ ನಡುವೆ ಇದ್ದ ಈ ಬ್ರಾಡ್ ವೇ ಸೇತುವೆಯು ಶಿಥಿಲಾವಾಗಿತ್ತು. ಹೀಗಾಗಿ ಸ್ಪೋಟಕಗಳನ್ನು ಉಪಯೋಗಿಸಿ ಉರುಳಿಸುವ ಯೋಜನೆ ರೂಪಿತವಾಗಿತ್ತು.
ಮೊದಲು ಸೇತುವೆಗೆ ಸ್ಪೋಟಕಗಳನ್ನು ಕಟ್ಟಿ ಬ್ಲಾಸ್ಟ್ ಮಾಡಲಾಯಿತು. ಆದರೆ ಮೊದಲ ಪ್ರಯತ್ನಕ್ಕೆ ಸೇತುವೆ ಕಿಂಚಿತ್ತೂ ಆಲುಗಾಡಿಲ್ಲ. ನಂತರ ಮತ್ತೆ ನಡೆದ ಪ್ರಯತ್ನದಲ್ಲಿ ಸೇತುವೆಯನ್ನು ಕೆಡಲಾಗಿದೆ.
ಸತತ ಐದು ಘಂಟೆಗಳ ಪರಿಶ್ರಮದಿಂದ ಉಕ್ಕಿನ ಕಾಮನುಗಳನ್ನು ಕೆಡವಲಾಗಿದೆ. ಇದರ ಜೊತೆಗೆ ಈ ಪ್ರಾಂತ್ಯದಲ್ಲಿ ಇನ್ನು ಮೂರು ಸೇತುವೆಗಳನ್ನು ಕೆಡವಿ ಆರು ತಿಂಗಳುಗಳಲ್ಲಿ ಮರು ನಿರ್ಮಾಣ ಮಾಡುವ ಕೆಲಸ ಸಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.