
ಚಿಕ್ಕಮಗಳೂರು (ಅ.13): ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಕುತೂಹಲ ಹಾಗು ರಾಜಿಕೀಯ ಸಂಚಲನ ಮೂಡಿಸಿದ ಡಿವೈಎಸ್’ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮತ್ತು ವ್ಯಕ್ತಿ ಅಪಹರಣ ಪ್ರಕರಣದ ವಿಚಾರಣೆ ಚಿಕ್ಕಮಗಳೂರಿನ ಸೆಷನ್ಸ್ ನ್ಯಾಯಲಯದಲ್ಲಿ ಇಂದಿನಿಂದ ಆರಂಭವಾಗಲಿದೆ.
ಕ್ರಿಕೆಟ್ ಬೆಟ್ಟಿಂಗ್ ದಂಧೆಯ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಅಪಹರಣಕ್ಕೆ ಸಹಕಾರ, ಆರೋಪಿಗಳಿಂದ 10 ಸಾವಿರ ರೂ. ಹಣ ಪಡೆದ ಆರೋಪಕ್ಕೆ ಗುರಿಯಾಗಿ ಅವಮಾನ ತಾಳದೆ ಡಿವೈಎಸ್’ಪಿ ಕಲ್ಲಪ್ಪ ಹಂಡಿಭಾಗ್ ಕಳೆದ ಜುಲೈ 5ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅಪಹರಣ ಪ್ರಕರಣದ ಮುಖ್ಯ ಆರೋಪಿ ವಿಶ್ವಹಿಂದೂ ಪರಿಷತ್ ಮುಖಂಡ ಖಾಂಡ್ಯ ಪ್ರವೀಣ್ ತಲೆ ಮರೆಸಿಕೊಂಡಿದ್ದರೆ, ಕಲ್ಮನೆ ಚಿಟ್ ಫಂಡ್‌ನ ನಟರಾಜ್, ಅಭೀಷೇಕ್, ಬಜರಂಗದಳದ ಪ್ರದೀಪ್ ಹಾಗು ನವೀನ್ ಶೆಟ್ಟಿ, ಜಾಯ ಮಿಲ್ಸನ್, ಯಶಸ್ ಗೌಡ, ಜೀವನ್ ಕುಮಾರ್, ವಿಜಯಕುಮರ್, ಅಶ್ವಿನ್ ಶೆಟ್ಟಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಡಲಾಗಿದ್ದು, ವಿಚಾರಣೆ ವೇಳೆ ಅವರನ್ನೂ ನ್ಯಾಯಲಯಕ್ಕೆ ಕರೆತರುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.