3 ಕೋಟಿ ಫಾಲೋವರ್ಸ್ ಇರುವ ಮೋದಿಗೆ ನೀವು ಟ್ವೀಟರ್ನಲ್ಲಿದ್ದೀರಾ? ಎಂದು ಕೇಳಿದ ಪತ್ರಕರ್ತೆ

Published : Jun 03, 2017, 10:41 AM ISTUpdated : Apr 11, 2018, 01:01 PM IST
3 ಕೋಟಿ ಫಾಲೋವರ್ಸ್ ಇರುವ ಮೋದಿಗೆ ನೀವು ಟ್ವೀಟರ್ನಲ್ಲಿದ್ದೀರಾ? ಎಂದು ಕೇಳಿದ ಪತ್ರಕರ್ತೆ

ಸಾರಾಂಶ

ಅಮೆರಿಕದ ಎನ್‌ಬಿಸಿ ನ್ಯೂಸ್‌ ಚಾನೆಲ್‌ನ ನಿರೂಪಕಿ ಮೆಗಿನ್‌ ಕೆಲ್ಲಿ ಅವರು ಭಾರತದ ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್‌ ಅವರ ಜಂಟಿ ಸಂದರ್ಶನವನ್ನೇನೋ ನಡೆಸಿದರು. ಆದರೆ ಕೆಲ್ಲಿ ಅವರು ಮೋದಿ ಅವರನ್ನು ‘ನೀವು ಟ್ವೀಟರ್‌ನಲ್ಲಿದ್ದೀರಾ' ಎಂದು ಕೇಳಿ ಫಜೀತಿಗೊಳಗಾಗಿದ್ದಾರೆ.

ಸೇಂಟ್‌ ಪೀಟರ್ಸ್‌ಬರ್ಗ್‌(ಜೂ.03): ಅಮೆರಿಕದ ಎನ್‌ಬಿಸಿ ನ್ಯೂಸ್‌ ಚಾನೆಲ್‌ನ ನಿರೂಪಕಿ ಮೆಗಿನ್‌ ಕೆಲ್ಲಿ ಅವರು ಭಾರತದ ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್‌ ಅವರ ಜಂಟಿ ಸಂದರ್ಶನವನ್ನೇನೋ ನಡೆಸಿದರು. ಆದರೆ ಕೆಲ್ಲಿ ಅವರು ಮೋದಿ ಅವರನ್ನು ‘ನೀವು ಟ್ವೀಟರ್‌ನಲ್ಲಿದ್ದೀರಾ' ಎಂದು ಕೇಳಿ ಫಜೀತಿಗೊಳಗಾಗಿದ್ದಾರೆ.

ಸಂದರ್ಶನಕ್ಕೂ ಮೊದಲು ಮೋದಿ ಮತ್ತು ಪುಟಿನ್‌ ಅವರನ್ನು ಕೆಲ್ಲಿ ಬರಮಾಡಿಕೊಳ್ಳುತ್ತಾರೆ. ಆಗ ಮೋದಿ, ಶುಕ್ರವಾರವಷ್ಟೇ ಮಳೆಯಲ್ಲಿ ಕೆಲ್ಲಿ ಛತ್ರಿ ಹಿಡಿದುಕೊಂಡು ತೆಗೆಸಿಕೊಂಡ ಫೋಟೋವನ್ನು ಪ್ರಶಂಸಿಸಿ ಚಟಾಕಿ ಹಾರಿಸುತ್ತಾರೆ. ಆಗ ಕೆಲ್ಲಿ ಅವರು, ‘ನೀವು ಟ್ವೀಟರ್‌ನಲ್ಲಿದ್ದೀರಾ?' ಎಂದು ಕೇಳುತ್ತಾರೆ. ಆಗ ಮೋದಿ ಅವರು ನಕ್ಕು ಹೌದೆಂದು ತಲೆಯಾಡಿಸಿ ಸಂವಾದ ಮುಂದುವರಿಸುತ್ತಾರೆ.

 

 

 

 

 

 

 

 

 

 

 

ಈ ವಿಡಿಯೋ ಈಗ ವೈರಲ್‌ ಆಗಿದ್ದು, ಅವರ ‘ಜ್ಞಾನ' ಮತ್ತು ‘ಪೂರ್ವತಯಾರಿ'ಯನ್ನು ಜನರು ಪ್ರಶ್ನಿಸಿದ್ದಾರೆ. ಮೋದಿ ಟ್ವೀಟರ್‌ನಲ್ಲಿ ವಿಶ್ವದ ನಂ.2 ಜನಪ್ರಿಯ ವ್ಯಕ್ತಿಯಾಗಿದ್ದು, 3 ಕೋಟಿ ಫಾಲೋವರ್‌ ಹೊಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರೀತಿಸಿ ಮದುವೆಯಾದ ಮಗಳ ರಕ್ತದಲ್ಲಿ ಕೈ ತೊಳೆದ ತಂದೆ; ಹುಬ್ಬಳ್ಳಿಯಲ್ಲಿ ಮರ್ಯಾದ ಹ*ತ್ಯೆ
ಹೂವಿನಹಡಗಲಿ: ಕೇಳಿದ್ದು 237 ಕೊಠಡಿ, ಸರ್ಕಾರ ಕೊಟ್ಟಿದ್ದು ಒಂದೇ ಕೊಠಡಿ! ಮಕ್ಕಳ ಶಿಕ್ಷಣಕ್ಕೆ ಇಲ್ವಾ ಬೆಲೆ?