
ಪುಣೆ(ಜ.09): ಪ್ರೀತಿ ಏಕೆ ಭೂಮಿ ಮೇಲಿದೆ ಅಂತಾ ಯಾರಾದ್ರೂ ಕೇಳಿದ್ರೆ ಬೇರೆ ಎಲ್ಲೂ ಜಾಗ ಇಲ್ಲವೇ ಅಂತಾನೇ ತಾನೇ ನೀವು ಹೇಳೊದು?. ಹೌದು, ಮನುಷ್ಯ ಸಮೇತ ಈ ಭುಮಿಯ ಸಕಲ ಚರಾಚರ ಪ್ರಾಣಿಗಳಲ್ಲಿ ಅಡಕವಾಗಿರುವ ಪ್ರೀತಿಗೆ ಭೂಮಿ ಬಿಟ್ಟರೆ ನಿಜಕ್ಕೂ ಬೇರೆಲ್ಲೂ ಜಾಗವಿಲ್ಲ.
ಸಾವಿರಾರು ವರ್ಷಗಳ ಹಿಂದೆ ನಾಶವಾಗಿರುವ ಸಿಂಧೂ ನಾಗರಿಕತೆಯ ಅವಧಿಯ ಜೋಡಿ ಅಸ್ಥಿಪಂಜರವೊಂದು ಈ ವಾದಕ್ಕೆ ಪುಷ್ಠಿ ನೀಡಿದೆ. ಹೌದು, ಹರಪ್ಪ ನಾಗರಿಕತೆಯ ಕಾಲದ ಜೋಡಿ ಅಸ್ಥಿಪಂಜರವೊಂದು ದೊರೆತಿದ್ದು, ಪುರುಷನ ಅಸ್ಥಿಪಂಜರದ ಮುಖ ಮಹಿಳೆಯ ಅಸ್ಥಿಪಂಜರದತ್ತ ನೋಡುತ್ತಿರುವ ಈ ದೃಶ್ಯ ಪ್ರಿತಿಗೆ ನಿಜಕ್ಕೂ ಹೊಸ ಭಾಷ್ಯ ಬರೆದಂತಿದೆ.
ಸಾವಿರಾರು ವರ್ಷಗಳ ಹಿಂದೆ ಸಮಾಧಿ ಮಾಡಲ್ಪಟ್ಟ ಈ ಜೋಡಿ ಅಸ್ಥಿಪಂಜರವನ್ನು ಪುಣೆಯ ಡೆಕ್ಕನ್ ಕಾಲೇಜ್ ಡೀಮ್ಡ್ ವಿವಿಯ ಮಾನವಶಾಸ್ತ್ರಜ್ಞರು ಸಂಶೋಧಿಸಿದ್ದಾರೆ.
ಇದೇ ಮೊದಲ ಬಾರಿಗೆ ಜೋಡಿ ಅಸ್ಥಿಪಂಜರವೊಂದು ದೊರೆತಿದ್ದು, ಪುರುಷ ಅಸ್ಥಿಪಂಜರದ ಮುಖ ಮಹಿಳಾ ಅಸ್ಥಪಿಪಂಜರದತ್ತ ನೋಡುತ್ತಿರುವುದು ನಿಜಕ್ಕೂ ಆಶ್ಚರ್ಯ ತಂದಿರುವುದರಲ್ಲಿ ಅನುಮಾನವಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.