
ಕೈರೋ(ಡಿ.15): ಈಜಿಪ್ಟ್ ಭೂಮಿಯೇ ಹಾಗೆ. ಹಲವಾರು ರಹಸ್ಯಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಫೆರೊಗಳ ಭೂಮಿ ಅದು. ಮಮ್ಮಿಗಳ ರೂಪದಲ್ಲಿ ಇಂದಿಗೂ ನಮ್ಮೊಂದಿಗೆ ಇರುವ ಭೂತಕಾಲದ ಶ್ರೇಷ್ಠ ನಾಗರಿಕತೆ ಅದು.
ಈಜಿಪ್ಟ್ ನಲ್ಲಿ ಮಮ್ಮಿಗಳಿಗೇನೂ ಕೊರತೆ ಇಲ್ಲ. ಬಗೆದಷ್ಟೂ ಮಮ್ಮಿಗಳು ಇಲ್ಲಿ ಸಿಗುತ್ತವೆ. ಇವುಗಳಲ್ಲಿ ಕೆಲವು ಅತ್ಯಂತ ಮಹತ್ವದ ಮಮ್ಮಿಗಳೂ ಇವೆ.
ಅದರಂತೆ ಈಜಿಪ್ಟ್ ನ ಪುರಾತತ್ವ ಶಾಸ್ತ್ರಜ್ಞರು ಸುಮಾರು 4,400 ವರ್ಷಗಳಷ್ಟು ಹಳೆಯದಾದ ಪೂಜಾರಿಯೋರ್ವನ ಮಮ್ಮಿಯನ್ನು ಸಂಶೋಧಿಸಿದ್ದಾರೆ.
ಕೈರೋದ ದಕ್ಷಿಣ ಭಾಗದಲ್ಲಿರುವ ಸಖ್ಖಾರಾ ಪ್ರದೇಶದಲ್ಲಿ ಈ ಮಮ್ಮಿ ದೊರೆತಿದ್ದು, ಇದು ವಾಹ್ ತೈ ಎಂಬ ಅತ್ಯಂತ ಪ್ರತಿಷ್ಠಿತ ಪೂಜಾರಿಯ ಮಮ್ಮಿ ಎಂದು ಗುರುತಿಸಲಾಗಿದೆ.
ವಾಹ್ ತೈ ಈಜಿಪ್ಟ್ ನ 5ನೇ ರಾಜಮನೆತನದ ನೆಫಿರಕರೆ ಎಂಬ ರಾಜನ ಆಸ್ಥಾನದಲ್ಲಿ ಪೂಜಾರಿಯಾಗಿದ್ದ ಎಂದು ಇತಾಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಾಹ್ ತೈ ಮಮ್ಮಿ ಪಕ್ಕದಲ್ಲೇ ಆತನ ತಾಯಿ, ಪತ್ನಿಯ ಮಮ್ಮಿಯೂ ಇದ್ದು, ಎಲ್ಲವೂ ಸುಸ್ಥಿತಿಯಲ್ಲಿವೆ ಎಂದು ಪುರಾತತ್ವ ಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.