ಪಾನ್‌ ಅರ್ಜಿ ಸಲ್ಲಿಕೆಗೆ ಇನ್ನು ಇದೆಲ್ಲಾ ಕಡ್ಡಾಯವಲ್ಲ

By Web DeskFirst Published Sep 1, 2018, 12:55 PM IST
Highlights

ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇನ್ನು ಮುಂದೆ ಈ ಕಡ್ಡಾಯ ಇರುವುದಿಲ್ಲ. ಸಿಂಗಲ್ ಪೇರೆಂಟ್ ಚಿಲ್ಡ್ರನ್ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ತಂದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು ಎನ್ನುವ ನಿಯಮ ತೆಗೆದು ಹಾಕಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. 

ನವದೆಹಲಿ: ಪಾನ್‌ ಕಾರ್ಡ್‌ ಸಲ್ಲಿಕೆ ವೇಳೆ ತಂದೆ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು ಎಂಬ ನಿಯಮವನ್ನು ತೆಗೆದು ಹಾಕಲು ಆದಾಯ ತೆರಿಗೆ ಇಲಾಖೆ ಮುಂದಾಗಿದ್ದು, ಸೆ.17ರವರೆಗೆ ಸಾರ್ವಜನಿಕರ ಆಕ್ಷೇಪಗಳನ್ನು ಆಹ್ವಾನಿಸಿದೆ.

ಕರಡು ಅಧಿಸೂಚನೆ ಪ್ರಕಾರ, ‘ತಾಯಿ ಮಾತ್ರವೇ ಏಕ ಪೋಷಕರಾಗಿರುವವಂಥವರು ಪಾನ್‌ ಅರ್ಜಿ ಸಲ್ಲಿಕೆ ವೇಳೆ ತಂದೆ ಹೆಸರಿನ ಬದಲಿಗೆ ತಾಯಿ ಹೆಸರನ್ನು ನಮೂದಿಸಬಹುದಾಗಿದೆ. ಅಂಥವರ ಪಾನ್‌ ಕಾರ್ಡ್‌ನ ಮೇಲೆ ತಾಯಿಯ ಹೆಸರು ಉಲ್ಲೇಖವಾಗಲಿದೆ’ ಎಂದಿದೆ.

ಇದಕ್ಕೂ ಮುನ್ನ ಪಾನ್‌ ಸಂಖ್ಯೆ ಸಲ್ಲಿಕೆ ವೇಳೆ ತಂದೆಯ ಹೆಸರನ್ನು ಮಾತ್ರವೇ ಅರ್ಜಿಯಲ್ಲಿ ಉಲ್ಲೇಖಿಸಬೇಕಿತ್ತು. ಆದರೆ, ಇದೀಗ ಪಾನ್‌ ಸಂಖ್ಯೆಗೆ ಅರ್ಜಿ ಸಲ್ಲಿಸುವವರು ತಾಯಿ ಅಥವಾ ತಂದೆ ಹೆಸರನ್ನು ಉಲ್ಲೇಖಿಸಬಹುದಾಗಿದೆ.

click me!