'6 ಕ್ವಿಂಟಾಲ್‌ ಗಾಂಜಾ ಸಿಕ್ಕಿದೆ, ಕಳೆದುಕೊಂಡವರು ಆತಂಕ ಪಡಬೇಕಾಗಿಲ್ಲ'!

Published : Jun 06, 2019, 09:02 AM IST
'6 ಕ್ವಿಂಟಾಲ್‌ ಗಾಂಜಾ ಸಿಕ್ಕಿದೆ, ಕಳೆದುಕೊಂಡವರು ಆತಂಕ ಪಡಬೇಕಾಗಿಲ್ಲ'!

ಸಾರಾಂಶ

6 ಕ್ವಿಂಟಾಲ್‌ ಗಾಂಜಾ ಸಿಕ್ಕಿದೆ, ಕಳೆದುಕೊಂಡವರು ಚಿಂತೆ ಮಾಡಬೇಕಾದ ಅವಶ್ಯಕತೆ ಇಲ್ಲ| ಪೊಲೀಸರ ಹಾಸ್ಯ ಪ್ರಜ್ಞೆಗೆ ಭಾರಿ ಮೆಚ್ಚುಗೆ

ಗುವಾಹಟಿ[ಜೂ.06]: ಬರೋಬ್ಬರಿ 590 ಕೆ.ಜಿ. ಗಾಂಜಾ ವಶಪಡಿಸಿಕೊಂಡಿರುವ ಅಸ್ಸಾಂ ಪೊಲೀಸರು ಆ ವಿಚಾರವನ್ನು ಅತ್ಯಂತ ತಮಾಷೆಯಾಗಿ ಜನರಿಗೆ ಹೇಳಿರುವುದು ಟ್ವೀಟರ್‌ನಲ್ಲಿ ಭಾರಿ ವೈರಲ್‌ ಆಗಿದೆ. ಕರ್ತವ್ಯದ ಒತ್ತಡದಲ್ಲಿ ಸಿಡುಕು ಸ್ವಭಾವ ತೋರುವ ಪೊಲೀಸರ ಹಾಸ್ಯಪ್ರಜ್ಞೆ ಮೆಚ್ಚುಗೆಗೂ ಪಾತ್ರವಾಗಿದೆ.

‘ಯಾರಾದರೂ ಭಾರಿ ಪ್ರಮಾಣದ (590 ಕೆ.ಜಿ.) ಗಾಂಜಾ ಹಾಗೂ ಒಂದು ಟ್ರಕ್‌ ಅನ್ನು ಚಾಗೋಲಿಯಾ ಚೆಕ್‌ಪಾಯಿಂಟ್‌ ಬಳಿ ನಿನ್ನೆ ರಾತ್ರಿ ಕಳೆದುಕೊಂಡಿದ್ದೀರಾ? ಚಿಂತೆ ಬೇಡ, ನಾವು ಪತ್ತೆ ಹಚ್ಚಿದ್ದೇವೆ. ಧೂಬ್ರಿ ಪೊಲೀಸರ ಜತೆ ಸಂಪರ್ಕದಲ್ಲಿರಿ. ಅವರು ನಿಮಗೆ ಖಂಡಿತವಾಗಿಯೂ ಸಹಾಯ ಮಾಡುತ್ತಾರೆ :) ಗ್ರೇಟ್‌ ಜಾಬ್‌ ಟೀಮ್‌ ಧೂಬ್ರಿ’ ಎಂದು ಇಮೋಜಿ ಹಾಗೂ ಸ್ಮೈಲಿ ಸಹಿತ ಅಸ್ಸಾಂ ಪೊಲೀಸರು ಬುಧವಾರ ಟ್ವೀಟ್‌ ಮಾಡಿದ್ದಾರೆ.

ಪೊಲೀಸ್‌ ಭಾಷೆಯಲ್ಲೇ ಜಪ್ತಿಯಾದ ವಸ್ತುಗಳನ್ನು ತಿಳಿಸುತ್ತಿದ್ದ ಅಸ್ಸಾಂ ಪೊಲೀಸರು ತಮಾಷೆಯಾಗಿ ತಮ್ಮ ಕಾರ್ಯಾಚರಣೆಯನ್ನು ತಿಳಿಸಿರುವುದು ಟ್ವೀಟರ್‌ ಬಳಕೆದಾರರ ಮೆಚ್ಚುಗೆಗೆ ಕಾರಣವಾಗಿದೆ. ಬ್ಯಾಡ್ಮಿಂಟನ್‌ ಆಟಗಾರ್ತಿ ಜ್ವಾಲಾ ಗುಟ್ಟಾಸೇರಿ 1200 ಮಂದಿ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. 16800 ಮಂದಿ ಲೈಕ್‌ ಮಾಡಿದ್ದರೆ, 6000 ಬಾರಿ ಇದು ರೀಟ್ವೀಟ್‌ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Viral Video: ವೇದಿಕೆಯಲ್ಲೇ ಮಹಿಳಾ ವೈದ್ಯೆಯ ಹಿಜಾಬ್‌ ತೆಗೆಯಲು ಯತ್ನಿಸಿದ ಬಿಹಾರ ಸಿಎಂ ನಿತೀಶ್‌ ಕುಮಾರ್‌
ಅನುದಾನಿತ ಶಾಲೆಯಲ್ಲಿ 9ನೇ ಕ್ಲಾಸ್ ಹುಡ್ಗೀರ ಎಣ್ಣೆ ಪಾರ್ಟಿ; ವೈರಲ್ ವಿಡಿಯೋ ಆಧರಿಸಿ 6 ವಿದ್ಯಾರ್ಥಿನಿಯರು ಅಮಾನತು!