ಬಿಬಿಎಂಪಿಯಲ್ಲಿ ಶೂಟಿಂಗ್ ಮಾಡಿದ್ರೂ ಹೇಳೋರ್ ಕೇಳೋರೇ ಇಲ್ಲ!

By Web DeskFirst Published Nov 9, 2018, 11:17 AM IST
Highlights

ಬಿಬಿಎಂಪಿ ಕಚೇರಿಯಲ್ಲಿ ಯಾರು ಬೇಕಾದ್ರು ಸಿನಿಮಾ ಶೂಟಿಂಗ್ ಮಾಡಬಹುದು. ಕಮಿಷನರ್ ಕಚೇರಿ ಬೇಕಾ? ಮೇಯರ್ ಚೇಂಬರ್ ಬೇಕಾ? ನಿಮಗೆ ಇಷ್ಟ ಬಂದಹಾಗೆ  ಶೂಟಿಂಗ್ ಮಾಡಿಕೊಳ್ಳಿ‌.  ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹೇಳೋರು ಇಲ್ಲ ಕೇಳೋರೂ ಇಲ್ಲ! 

ಬೆಂಗಳೂರು (ನ. 09):  ಬಿಬಿಎಂಪಿ ಕಚೇರಿಯಲ್ಲಿ ಯಾರು ಬೇಕಾದ್ರು ಸಿನಿಮಾ ಶೂಟಿಂಗ್ ಮಾಡಬಹುದು.  ಕಮಿಷನರ್ ಕಚೇರಿ ಬೇಕಾ? ಮೇಯರ್ ಚೇಂಬರ್ ಬೇಕಾ? ನಿಮಗೆ ಇಷ್ಟ ಬಂದಹಾಗೆ  ಶೂಟಿಂಗ್ ಮಾಡಿಕೊಳ್ಳಿ‌.  ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹೇಳೋರು ಇಲ್ಲ ಕೇಳೋರೂ ಇಲ್ಲ! ಏನಪ್ಪಾ ಇದು? ಅಂತ ಯೋಚಿಸ್ತಿದೀರಾ? ಹೌದು

ತಮಿಳಿನ ಇಮೈಕ ನೋಡಿಗಲ್ ಸಿನಿಮಾ ಶೂಟಿಂಗ್ ಗೆ ಬಿಬಿಎಂಪಿ ಅವಕಾಶ ಮಾಡಿ ಕೊಟ್ಟಿದೆ.  ತಮಿಳು ಚಲನಚಿತ್ರವನ್ನು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿಯೇ ಚಿತ್ರೀಕರಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳನ್ನ ಪ್ರಶ್ನಿಸಿದರೆ ಅನುಮತಿ ನೀಡಿಲ್ಲ ಅಂತಿದ್ದಾರೆ. ಹಾಗಿದ್ರೆ ಅಧಿಕಾರಿಗಳ ಕಣ್ಣು ತಪ್ಪಿ ಬಿಬಿಎಂಪಿಯಲ್ಲಿ ಶೂಟಿಂಗ್ ಮಾಡೋಕೆ ಸಾಧ್ಯವಿದೆಯಾ? ಎಂಬ ಪ್ರಶ್ನೆ ಉದ್ಭವವಾಗಿದೆ.  

ಇನ್ನೂ ಅಚ್ಚರಿ ಅಂದರೆ ಕಮಿಷನರ್‌ ಕಚೇರಿಯಲ್ಲೇ ಚಿತ್ರೀಕರಣವಾಗಿದ್ದರೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೇ ವಿಷಯವೇ ಗೊತ್ತಿಲ್ಲ.  ಬಿಬಿಎಂಪಿಯನ್ನ ಸಿಬಿಐ ಆಫೀಸ್ ರೂಪದಲ್ಲಿ‌ ಇಮೈಕ ನೋಡಿಗಲ್ ಚಿತ್ರತಂಡ ಚಿತ್ರೀಕರಿಸಿದೆ.  

ಬಿಬಿಎಂಪಿ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.  ಬಿಬಿಎಂಪಿ ಕಮಿಷನರ್‌ ಗೆ ಟ್ವೀಟ್ ಮೂಲಕ ‌ಅವಕಾಶ ನೀಡಿದ್ದರೆ ಹೇಳಿ ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ. 

ಬಿಬಿಎಂಪಿ ಮಹಾಪೌರರು ಮತ್ತು ಬಿಬಿಎಂಪಿ ಹಿರಿಯ ಅಧಿಕಾರಿಗಳು ಯಾವುದೇ ಅನುಮತಿ ನೀಡಿಲ್ಲವೆಂದು ಹೇಳಿದ್ದಾರೆ. 

click me!