
ಬೆಂಗಳೂರು(ಮೇ 22): ದಕ್ಷ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ಪ್ರಕರಣದಲ್ಲಿ ಇನ್ನಷ್ಟು ಮಾಹಿತಿ ಮತ್ತು ಸುಳಿವುಗಳು ಸಿಗುತ್ತಿವೆ. ದೇಹದ ಪೋಸ್ಟ್'ಮಾರ್ಟಂ ವರದಿಯ ಅನೇಕ ಅಂಶಗಳು ತಿವಾರಿ ಕೊಲೆಯಾಗಿರಬಹುದೆಂಬ ಅನುಮಾನವನ್ನು ಗಟ್ಟಿಗೊಳಿಸುವಂತಿವೆ. ಈಗ ಇನ್ನಷ್ಟು ಸುಳಿವು ಸಿಕ್ಕಿದೆ. ಅನುರಾಗ್ ತಿವಾರಿ ಸಾವನ್ನಪ್ಪುವ ವೇಳೆ ಮೂತ್ರ ವಿಸರ್ಜನೆ ಮಾಡಿದ್ದರೆಂಬ ಮಾಹಿತಿಯು ಈಗ ಬಯಲಾಗಿದೆ.
ಉತ್ತರಪ್ರದೇಶದ ಪೊಲೀಸ್ ಇನ್ಸ್'ಪೆಕ್ಟರ್ ವಿನಯ್ ಶರ್ಮಾ ಎಂಬುವರು ತಿವಾರಿ ಮೃತದೇಹದ ಫೋಟೋಗಳನ್ನು ತಮ್ಮ ಮೊಬೈಲ್'ನಲ್ಲಿ ಕ್ಯಾಪ್ಚರ್ ಮಾಡಿದ್ದರು. ವಿನಯ್ ಶರ್ಮಾ ತೆಗೆದ ಆ ಫೋಟೋಗಳು ಹಾಗೂ ಕ್ರೈಂ ತಂಡದ ಫೋಟೋಗ್ರ್ಯಾಫರ್ಸ್ ತೆಗೆದ ಫೋಟೋಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಕೆಲವಾರು ಸುಳಿವುಗಳು ಸಿಕ್ಕಿವೆ. ತಿವಾರಿ ಅನೈಚ್ಛಿಕವಾಗಿ ಮೂತ್ರ ವಿಸರ್ಜಿಸಿದ್ದರ ಸೂಚನೆಗಳು ಈ ಫೋಟೋಗಳಿಂದ ಸಿಕ್ಕಿವೆ.
ಮೂತ್ರ ವಿಸರ್ಜನೆಯಿಂದ ಏನು ಗೊತ್ತಾಗುತ್ತೆ?
ಅನುರಾಗ್ ತಿವಾರಿ ಸಾಯುವ ಸಂದರ್ಭದಲ್ಲಿ ಅನೈಚ್ಛಿಕವಾಗಿ ಮೂತ್ರ ವಿಸರ್ಜಿಸಿದ್ದಾರೆ. ತಜ್ಞರ ಪ್ರಕಾರ, ಸಾಯುವಾಗ ಮೂತ್ರ ವಿಸರ್ಜನೆ ಮಾಡಿರುವುದು ಅಸಹಜ ಸಾವಿನ ಸೂಚನೆಯಾಗಿದೆ. ಉಸಿರುಗಟ್ಟಿ ಸಾವು ಸಂಭವಿಸಿದಾಗ ಮೂತ್ರ ವಿಸರ್ಜನೆಯಾಗುತ್ತದೆಯಂತೆ.
ಬೆಳಗ್ಗೆ ವಾಕಿಂಗ್'ಗೆಂದು ಗೆಸ್ಟ್ ಹೌಸ್'ನಿಂದ ಹೊರಗೆ ಹೋದ ಅನುರಾಗ್ ತಿವಾರಿ ಸಮೀಪದಲ್ಲೇ ಶವವಾಗಿ ಪತ್ತೆಯಾಗಿದ್ದರು. ತಿವಾರಿ ಉಸಿರುಗಟ್ಟಿ ಮೃತಪಟ್ಟಿರುವುದು ನಿಜವೇ ಆಗಿದ್ದಲ್ಲಿ, ಬಯಲು ಪ್ರದೇಶದಲ್ಲಿ ಅವರು ಉಸಿರುಗಟ್ಟರು ಹೇಗೆ ಸಾಧ್ಯವಾಯಿತು? ತಿವಾರಿಗೆ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಎದುರಾಗಿದ್ದೇಕೆ? ಎಂಬ ಪ್ರಶ್ನೆಗಳು ಏಳುತ್ತಿವೆ.
ಅನುರಾಗ್ ತಿವಾರಿ ಬೇರೆಲ್ಲೋ ಮೃತಪಟ್ಟಿದ್ದು, ಅವರ ಶವವನ್ನು ರಸ್ತೆಗೆ ತಂದಿಟ್ಟಿರುವ ಸಾಧ್ಯತೆ ಇದೆ ಎಂಬಂತಹ ಅನುಮಾನಗಳು ಕಾಡುತ್ತಿವೆ. ಆಳವಾದ ತನಿಖೆಯಿಂದಷ್ಟೇ ಇದಕ್ಕೆ ಉತ್ತರ ಸಿಗಲು ಸಾಧ್ಯ. ಉತ್ತರಪ್ರದೇಶದ ಎಸ್'ಐಟಿಯು ಪ್ರಕರಣದ ತನಿಖೆ ನಡೆಸುತ್ತಿದೆ. ಆದರೆ, ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿ ಒತ್ತಾಯಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.