ಪರಮೇಶ್ವರ್ ನಾಯ್ಕ್, ಶ್ರೀರಾಮುಲು, ಡಿಜಿಪಿ ವಿರುದ್ಧ ದೂರು ನೀಡಲು ಮುಂದಾದ ಅನುಪಮಾ ಶೆಣೈ

By internet deskFirst Published Oct 5, 2016, 2:04 PM IST
Highlights

ಬೆಂಗಳೂರು(ಅ.05): ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ಬಳಿಕ ನಾಪತ್ತೆಯಾಗಿದ್ದ ಅನುಪಮಾ ಶೆಣೈ ಮತ್ತೆ ಸುದ್ದಿ ಮಾಡಿದ್ದಾರೆ. ಜಿ.ಪಂ ಮತ್ತು ತಾ. ಪಂ. ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪರಮೇಶ್ವರ್ ನಾಯ್ಕ್​, ಸಂಸದ ರಾಮುಲು, ಡಿಜಿಪಿ ಓಂಪ್ರಕಾಶ್ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ.

ಹಲಸೂರು ಗೇಟ್ ಠಾಣೆ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ದಾಖಲು ಮಾಡಲು ಅನುಪಮಾ ಶೆಣೈ ಮುಂದಾಗಿದ್ದರು. ಆದರೆ, ದೂರು ದಾಖಲಿಸಿಕೊಳ್ಳಲು ಕಾನೂನು ಪರಿಮಿತಿಯಲ್ಲಿ ಅವಕಾಶವಿಲ್ಲ ಎಂದು ಹಲಸೂರು ಗೇಟ್ ಠಾಣಾಧಿಕಾರಿ ಹೇಳಿ ಕಳುಹಿಸಿದ್ದಾರೆ. ಹೀಗಾಗಿ, ಕೋರ್ಟ್`ನಲ್ಲಿ ದೂರು ನೀಡಲು ಅನುಪಮಾ ಶೆಣೈ ನಿರ್ಧರಿಸಿದ್ದಾರೆ.

click me!