ಹೆಲೋ ಮೋದಿ ಕಾಲಿಂಗ್.. ಪೋನ್ ಎತ್ತಿದ ಟ್ರಂಪ್... ಅತ್ತ ಇಮ್ರಾನ್ ಗಡಗಡ

By Web Desk  |  First Published Aug 19, 2019, 10:29 PM IST

30 ನಿಮಿಷ ಕಾಲ ದೂರವಾಣಿಯಲ್ಲಿ ಮಾತನಾಡಿದ ನರೇಂದ್ರ ಮೋದಿ-ಟ್ರಂಪ್/  ಪಾಕಿಸ್ತಾನದ ಖ್ಯಾಥೆ ಬಗ್ಗೆಯೂ ಮಾತುಕತೆ ನಡೆದಿದೇಯಾ/ ಬಡತನ ನಿರ್ಮೂಲನೆ ಬಗ್ಗೆ ಇಬ್ಬರು ನಾಯಕರ ಮಾತುಕತೆ


ನವದೆಹಲಿ[ಆ. 19]  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರು ಮೂವತ್ತು ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತುಕತೆ ನಡೆಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಇಬ್ಬರೂ ನಾಯಕರು ದ್ವಿಪಕ್ಷೀಯ ವಿಚಾರಗಳನ್ನು ಚರ್ಚೆ ನಡೆಸಿದ್ದು, ಮೋದಿ ಅವರು, ಒಸಾಕಾದಲ್ಲಿ ನಡೆದಿದ್ದ ಜಿ-20 ಶೃಂಗ ಸಭೆಯಲ್ಲಿ ಇಬ್ಬರ ನಡುವೆ ನಡೆದ ಮಾತುಕತೆಗಳ ಬಗ್ಗೆ ಟ್ರಂಪ್ ಅವರಿಗೆ ನೆನಪು ಮಾಡಿದರು ಎನ್ನಲಾಗಿದೆ.

Latest Videos

undefined

370 ರದ್ದು: ಮೋದಿ ಸರ್ಕಾರಕ್ಕೆ ಬಹುಪರಾಕ್ ಎಂದ ಕಾಂಗ್ರೆಸ್ ಮಾಜಿ ಸಿಎಂ

ಭಾರತ ಮತ್ತು ಅಮೆರಿಕದ ಹಣಕಾಸಿನ ಮಂತ್ರಿಗಳು ಮುಂದಿನ ದಿನಗಳಲ್ಲಿ ಭೇಟಿಯಾಗಿ ಎರಡೂ ದೇಶಗಳ ನಡುವೆ ವ್ಯಾಪಾರ, ವ್ಯವಹಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಾರೆ ಎಂಬ ಆಶಾವಾದ ಇದೆ ಎಂದು ಮೋದಿ ಟ್ರಂಪ್ ಬಳಿ ಹೇಳಿದ್ದಾರೆ ಎನ್ನಲಾಗಿದೆ.

ಬಡತನ ಕೊನೆಗಾಣಿಸುವಿಕೆ, ಅನಕ್ಷರತೆ ಮೆಟ್ಟಿ ನಿಲ್ಲುವುದು ಮತ್ತು ಪರಿಸರ ಕಾಪಾಡುವ ವಿಚಾರದ ಬಗ್ಗೆಯೂ ಇಬ್ಬರು ನಾಯಕರ ನಡುವೆ ಮಾತುಕತೆ ನಡೆಯಿತು. ಭಾರತದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳು ಶಾಂತಿ ಸ್ಥಾಪನೆಗೆ ಕಾರಣವಾಗುವುದಿಲ್ಲ ಎಂದು ಇದೇ ವೇಳೆ ಮೋದಿ ಹೇಳಿದ್ದಾರೆ.

click me!