‘ಸಮಾಜವಾದಿ’ ಸಿದ್ದು 60 ಸಾವಿರ ಬೂಟು ಹಾಕ್ತಾರೆ: ವಾಜು ವಿವಾದದ ನಂತರ ಸಿಎಂ ವಿರುದ್ಧ ಶುರುವಾದ ಹೊಸ ಬಾಂಬ್

Published : Nov 12, 2017, 08:57 AM ISTUpdated : Apr 11, 2018, 12:36 PM IST
‘ಸಮಾಜವಾದಿ’ ಸಿದ್ದು 60 ಸಾವಿರ ಬೂಟು ಹಾಕ್ತಾರೆ: ವಾಜು ವಿವಾದದ ನಂತರ ಸಿಎಂ ವಿರುದ್ಧ  ಶುರುವಾದ ಹೊಸ ಬಾಂಬ್

ಸಾರಾಂಶ

ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ವಿರುದ್ಧ ಡೋಂಗಿ ಎಂಬ ಪದವನ್ನು ಬಳಕೆ ಮಾಡುತ್ತಾರೆ. ಆದರೆ, ಆ ಪದವು ಮುಖ್ಯಮಂತ್ರಿಗಳಿಗೆ ಸರಿಹೊಂದುತ್ತದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೋಂಗಿ ಸಮಾಜವಾದಿಯಾಗಿದ್ದು, ಸಮಾಜವಾದ ಹಿನ್ನೆಲೆಯಿಂದ ಬಂದರೂ ಸುಮಾರು 60 ಸಾವಿರ ಮೌಲ್ಯದ ಶೂಗಳನ್ನು ಹಾಕುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

‘ಈ ಹಿಂದೆ ದುಬಾರಿ ವಾಚ್  ಧರಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡ ಮುಖ್ಯಮಂತ್ರಿಗಳು ದುಬಾರಿ ಶೂ ಧರಿಸುವ ಮೂಲಕ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾ ಗಿದ್ದಾರೆ. ಸಮಾಜವಾದ ಜೀವನ ಆಳವಡಿಸಿಕೊಂಡಿರುವ ಕುರಿತು ಸಿದ್ದರಾಮಯ್ಯ ಮಾತನಾಡುತ್ತಾರೆ. ಆದರೆ, ಬಂಡವಾಳಶಾಯಿ ಧೋರಣೆಯ ಐಷಾರಾಮಿ ಜೀವನ ನಡೆಸುತ್ತಾರೆ’ ಎಂದು ಸುದ್ದಿಗೋಷ್ಠಿ ಯಲ್ಲಿ ಟೀಕಿಸಿದರು.ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ವಿರುದ್ಧ ಡೋಂಗಿ ಎಂಬ ಪದವನ್ನು ಬಳಕೆ ಮಾಡುತ್ತಾರೆ. ಆದರೆ, ಆ ಪದವು ಮುಖ್ಯಮಂತ್ರಿಗಳಿಗೆ ಸರಿಹೊಂದುತ್ತದೆ ಎಂದರು.

ರೈತರು, ಕಲ್ಲಿದ್ದಲು, ಲೋಡ್‌ಶೆಡ್ಡಿಂಗ್ ಚರ್ಚೆ:

ಸೋಮವಾರದಿಂದ ಆರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ರೈತರ ಬೆಳೆನಷ್ಟ, ಕಲ್ಲಿದ್ದಲು ಕೊರತೆ, ವಿದ್ಯುತ್ ಲೋಡ್‌ಶೆಡ್ಡಿಂಗ್ ವಿಷಯಗಳ ಕುರಿತು ಜೆಡಿಎಸ್ ಪ್ರಮುಖವಾಗಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ ಎಂದು ಎಚ್.ಡಿ.ಕುಮಾರ ಸ್ವಾಮಿ ತಿಳಿಸಿದ್ದಾರೆ.

ರೈತರ ಸಮಸ್ಯೆಗಳನ್ನು ಸರ್ಕಾರ ಪರಿಗಣಿಸುತ್ತಿಲ್ಲ. ರೈತರ ಸಂಕಷ್ಟ ಮತ್ತು ಬೆಳೆ ನಷ್ಟ ಕುರಿತು ಅಧಿವೇಶನದಲ್ಲಿ ಪಕ್ಷದ ಶಾಸಕರು ಪ್ರಸ್ತಾಪಿಸಲಿದ್ದಾರೆ. ವಿದ್ಯುತ್ ಲೋಡ್ ಶೆಡ್ಡಿಂಗ್, ವಿದ್ಯುತ್ ಉತ್ಪಾದನೆಗೆ ಅಗತ್ಯ ಇರುವ ಕಲ್ಲಿದ್ದಲಿನ ತೀವ್ರ ಕೊರತೆ ಎದುರಿಸಲಾಗುತ್ತಿದೆ. ಈ ಕುರಿತು ಸಹ ಚರ್ಚಿಸಲಾಗುವುದು. ಇಂಧನ ಇಲಾಖೆಯ ಸದನ ಸಮಿತಿ ವರದಿಯ ಕುರಿತು ದೊಡ್ಡಮಟ್ಟದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ, ಸರ್ಕಾರ ಮಂಡಿಸುವ ಮಸೂದೆಗಳ ಮೇಲಿನ ಚರ್ಚೆಯಲ್ಲಿನ ಪಕ್ಷದ ಶಾಸಕರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿಗೆ ಸಮಾಧಿ ತೋಡುತ್ತೇವೆ: ಕಾಂಗ್ರೆಸ್ ವೋಟ್ ಚೋರಿ ಸಮಾವೇಶದಲ್ಲಿ ಕಾರ್ಯಕರ್ತರ ಘೋಷಣೆ
'ಇದಪ್ಪಾ ಕಾನ್ಪಿಡೆನ್ಸ್‌ ಅಂದ್ರೆ..' ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಬರೋ ಮುನ್ನವೇ 12 ಸಾವಿರ ಲಡ್ಡು ಮಾಡಿಸಿಟ್ಟ ಸ್ಪರ್ಧಿ!