
ಶಬರಿಮಲೆ : ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲು ತೆರಳಿದ ರೆಹನಾ ಫಾತಿಮಾ ಹಿನ್ನೆಲೆ ಸಾಕಷ್ಟು ರೋಚಕವಾಗಿದೆ. ಅವರು ಓರ್ವ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದು, ತಾವೂ ಅಯ್ಯಪ್ಪನ ಭಕ್ತೆ ಎಂದು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದಾರೆ.
ಎರ್ನಾಕುಲಂ ನಿವಾಸಿಯಾಗಿರುವ ರೆಹನಾ ಬಿಎಸ್ ಎನ್ ಎಲ್ ನಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂ ಮಹಿಳೆಯಾಗಿರುವ ರೆಹನಾಗೆ ಆಡಳಿತ ಮಂಡಳಿ ಹಾಗೂ ಅಯ್ಯಪ್ಪ ಭಕ್ತರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಮೂಲತಃ ಅವರು ಮಾಡೆಲ್ ಕೂಡ ಆಗಿರುವ ರೆಹನಾ ಅನೇಕ ರೀತಿಯಲ್ಲಿ ಈ ಹಿಂದೆ ಸುದ್ದಿಯಾಗಿದ್ದರು. 2014ರಲ್ಲಿ ಕೇರಳದಲ್ಲಿ ಭಾರೀ ಸದ್ದು ಮಾಡಿದ್ದ ಕಿಸ್ ಆಫ್ ಲವ್ ನಲ್ಲಿಯೂ ಕೂಡ ಪಾಲ್ಗೊಂಡಿದ್ದರು.
ಕಳೆದ ಮಾರ್ಚ್ ನಲ್ಲಿಯೂ ಕೂಡ ಫ್ರೊಫೆಸರ್ ಓರ್ವರು, ಮಹಿಳೆಯರು ತಮ್ಮ ಎದೆಯನ್ನು ಕಲ್ಲಂಗಡಿ ಹಣ್ಣಿನಂತೆ ಮುಚ್ಚಿಕೊಳ್ಳಬೇಕು ಎಂದು ನೀಡಿದ್ದ ವಿವಾದಿತ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ಮಹಿಳಾ ಹೋರಾಟಗಾರ್ತಿಯೂ ಆಗಿರುವ ಫಾತಿಮಾ ವಾಟರ್ ಮೆಲನ್ ನಲ್ಲಿ ಎದೆ ಮುಚ್ಚಿಕೊಂಡು ಫೋಸ್ ಕೊಟ್ಟು ಸಾಕಷ್ಟು ಸುದ್ದಿಯಾಗಿದ್ದರು.
ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ರೆಹಾನಾ ಫಾತಿಮಾ ಮನೆ ಧ್ವಂಸ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.