3 ವರ್ಷ ಜೊತೆಗಿದ್ದು ಕೈಕೊಟ್ಟ ಸತೀಶ್ ವಿರುದ್ಧ ನಟಿ ಅನಿತಾ ಭಟ್ ಆಕ್ರೋಶ

Published : Mar 27, 2017, 08:10 AM ISTUpdated : Apr 11, 2018, 12:44 PM IST
3 ವರ್ಷ ಜೊತೆಗಿದ್ದು ಕೈಕೊಟ್ಟ ಸತೀಶ್ ವಿರುದ್ಧ ನಟಿ ಅನಿತಾ ಭಟ್ ಆಕ್ರೋಶ

ಸಾರಾಂಶ

ಕಳೆದ ಒಂದು ವಾರದಿಂದ ನಟಿ ಅನಿತಾ ಭಟ್‌ ಅವರದ್ದೇ ಸುದ್ದಿ ಮತ್ತು ವಿವಾದ. ಅದಕ್ಕೆ ಕಾರಣ ಅವರ ರಿಯಲ್‌ ಪ್ರೇಮ್‌ ಕಹಾನಿ ಕತೆಯಲ್ಲಿ ಎದುರಾದ ಏರುಪೇರುಗಳು. ತೆರೆ ಮೇಲೆ ಎಷ್ಟೋ ಪ್ರೇಮ ಕತೆಗಳು ಬಂದಿವೆ. ಜತೆಗೆ ಭಗ್ನ ಪ್ರೇಮಿಗಳು ಅನಾವರಣಗೊಂಡಿದ್ದಾರೆ. ಈ ಎಲ್ಲ ರೀತಿಯ ಕತೆಗಳಿಗೆ ಬಣ್ಣ ಹಚ್ಚಿದ ಸಿನಿಮಾದವರ ನಿಜ ಪ್ರೇಮ ಕತೆಯನ್ನೂ ಭಗ್ನತೆಯ ಗಾಳಿ ಬೀಸುತ್ತದೆ. ಅಂಥದ್ದೇ ಗಾಳಿಗೆ ಸಿಕ್ಕಿ ಒದ್ದಾಡುತ್ತಿರುವ ನಟಿ ಅನಿತಾ ಭಟ್‌. ಹಾಗೆ ನೋಡಿದರೆ ಇದು ಹದಿಹರೆಯದ ಪ್ರೇಮವಲ್ಲ. ನಡುವಯಸ್ಸಿನ ಪ್ರೇಮ! ನಾಯಕ ಸತೀಶ್‌. ಸತೀಶ್‌ ಚಿತ್ರರಂಗದಿಂದ ಆಚೆಗಿರುವ ವ್ಯಕ್ತಿ. ಇವರು ಪಿವಿಆರ್‌ನ ಪ್ರಾದೇಶಿಕ ಮ್ಯಾನೇಜರ್‌. ಹಾಗೆ ನೋಡಿದರೆ ಇವರಿಗೆ ಮದುವೆ ಆಗಿದೆ. ಅನಿತಾ ಭಟ್‌ ಅವರಿಗೂ ಮದುವೆ ಆಗಿ ಪತಿಯಿಂದ ವಿಚ್ಛೇದನ ಪಡೆದು ದೂರವಿ­ ದ್ದಾರೆ. ಅಲ್ಲದೆ ಇವರಿಗೆ ಪುತ್ರಿಯೂ ಇದ್ದಾರೆ. ಇಬ್ಬರೂ ನಡು ವಯಸ್ಸಿನವರು. ಸಿನಿಮಾ ಕಾರ್ಯಕ್ರಮ­ವೊಂದರಲ್ಲಿ ಸತೀಶ್‌ ಮತ್ತು ಅನಿತಾ ಭಟ್‌ ಪರಿಚಯವಾಗಿ ಆ ಸ್ನೇಹ ಪ್ರೀತಿಗೆ ತಿರುಗಿ ಕೊನೆಗೂ ಎರಡ್ಮೂರು ವರ್ಷ ಒಟ್ಟಿಗೆ ಒಂದೇ ಮನೆಯಲ್ಲಿ ಜೀವನ ಕೂಡ ಮಾಡಿದ್ದಾರೆ.

ಅಂದಹಾಗೆ ಇವರ ಪ್ರೀತಿ ಹುಟ್ಟಿಕೊಂಡಿದ್ದು ಬೆಂಗಳೂರಿನ ಈಟಿಎ ಮಾಲ್‌ನಲ್ಲಿ. ಆಗ ಸತೀಶ್‌ ಸಿನಿಪೋಲೀಸ್‌ನ ಪ್ರಾದೇಶಿಕ ಮ್ಯಾನೇಜರ್‌ ಆಗಿದ್ದರು. ಆಗ ಪರಿಚಯವಾದ ಸತೀಶ್‌ ಅವರೊಂದಿಗೆ ಮೂರು ವರ್ಷ ಸಹ ಜೀವನ ನಡೆಸಿದ್ದಾರೆ. ಆದರೆ, ಈ ನಡುವೆ ಸತೀಶ್‌ ಅವಗಲೇ ಮದುವೆ ಆಗಿರುವ ಸುದ್ದಿ ತಡವಾಗಿ ಗೊತ್ತಾಗಿದೆ. ಈ ಬಗ್ಗೆ ಇಬ್ಬರ ನಡುವೆ ಮಾತು- ಜಗಳ ಕೂಡ ಆಗಿದೆ. ‘ನನಗೆ ಮದುವೆ ಆಗಿರುವುದು ನಿಜ. ಆದರೆ ನನಗೆ ನೆಮ್ಮದಿ ಜೀವನ ಇಲ್ಲ. ಪತ್ನಿಗೆ ವಿಚ್ಚೇದನ ಕೊಡುತ್ತಿದ್ದೇನೆ. ನಿಮ್ಮ ಜತೆನೇ ಜೀವನ ಕಟ್ಟಿಕೊಳ್ಳುತ್ತಿದ್ದೇನೆ' ಎಂದವರು ಇದ್ದಕ್ಕಿದ್ದಂತೇ ನಾಪತ್ತೆಯಾಗಿದ್ದಾರಂತೆ.

ಇಷ್ಟಕ್ಕೂ ಈ ವಿವಾಹಿತರ ಪ್ರೇಮ ಕಹಾನಿಗೆ ಮುರಿದುಬಿದ್ದಿದ್ದು ಯಾಕೆ ಎನ್ನುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಎಲ್ಲವನ್ನೂ ಮರೆತು ನಟನೆಯಲ್ಲಿ ತೊಡಗಿಸಿಕೊಂಡಿದ್ದ ಅನಿತಾ ಭಟ್‌ ಮತ್ತು ಸತೀಶ್‌ ಪ್ರೇಮ ಕತೆ ಈಗ ಬೆಳಕಿಗೆ ಬಂದಿದೆ. ಅದು ಅದು ಬ್ರೇಕ್‌ ಅಪ್‌ ಸ್ಟೋರಿ ಎಂಬುದು ಅನಿತಾ ಅವರೇ ಹೇಳಿಕೊಂಡಿದ್ದಾರೆ. ‘ನಾನು ಸತೀಶ್‌ ಅವರನ್ನು ನಂಬಿ ಅವರೊಂದಿಗೆ ಜೀವನ ಹಂಚಿಕೊಂಡಿದ್ದೆ. ಈಗ ನೋಡಿದರೆ ಇದ್ದಕ್ಕಿದಂತೆ ನಾಪತ್ತೆಯಾಗಿದ್ದಾರೆ' ಎನ್ನುವುದು ಅನಿತಾ ಭಟ್‌ ಅವರ <ಅರೋಪ. ಇದರಲ್ಲಿ ನಿಜವೆಷ್ಟು? ಈಗ ಸತೀಶ್‌ ಅವರು ಮಾತನಾಡಬೇಕಿದೆ.

ಅನಿತಾ ಭಟ್ ಹೇಳಿದ್ದಿಷ್ಟು

ಹೌದು, ನಾನು ಸತೀಶ್‌ ಪ್ರೀತಿಸಿ ಒಟ್ಟಿಗೆ ಜೀವನ ಮಾಡುತ್ತಿದ್ದು ನಿಜ. ನನ್ನ ಬಗ್ಗೆ ಅವರಿಗೆ ಎಲ್ಲವನ್ನೂ ಹೇಳಿಕೊಂಡಿದ್ದೆ. ಆದರೆ, ಅವರ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಅವರ ಮೊದಲೇ ಮದುವೆ ಆದ ಸುದ್ದಿ ನನಗೆ ತಡವಾಗಿ ಗೊತ್ತಾಯಿತು. ಆ ನಂತರ ನಮ್ಮಿಬ್ಬರ ನಡುವೆ ಜಗಳ ಆಗಿದ್ದು ನಿಜ. ಆದರೂ ಒಟ್ಟಿಗೆ ಜೀವನ ಮಾಡುವ ಉದ್ದೇಶ ನನಗೆ ಇತ್ತು. ಸತೀಶ್‌ ಅವರ ಮನೆಯವರ ಕಡೆಯಿಂದ ತುಂಬಾ ತೊಂದರೆಗಳಾಗುತ್ತಿದ್ದವು. ಈ ನಡುವೆ ಸತೀಶ್‌ ಇದ್ದಕ್ಕಿದಂತೆ ನನ್ನಿಂದ ದೂರವಾಗಿದ್ದಾರೆ. ಯಾಕೆಂಬುದು ಗೊತ್ತಿಲ್ಲ.

ವರದಿ: ಕನ್ನಡ ಪ್ರಭ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್ ರೀತಿಯಲ್ಲೇ ಮತ್ತೊಂದು ಉಗ್ರ ಕೃತ್ಯ, ಗುಂಡಿನ ದಾಳಿಯಲ್ಲಿ 10 ಸಾವು, ಹಲವರು ಗಂಭೀರ
ಐಟಿ ಪಾರ್ಕ್ ಗುತ್ತಿಗೆ 30 ವರ್ಷ, ವಿಸ್ತರಣೆಗೂ ಅವಕಾಶ: ಸಚಿವ ಪ್ರಿಯಾಂಕ್‌ ಖರ್ಗೆ