ಮತ್ತೆ ಸರ್ಕಾರದ ವಿರುದ್ಧ ಬೀದಿಗಿಳಿದ ಅಂಗನವಾಡಿ ಕಾರ್ಯಕರ್ತೆಯರು

By Suvarna Web DeskFirst Published Dec 5, 2017, 1:40 PM IST
Highlights

ಮತ್ತೆ ಅಂಗನವಾಡಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ  ಬೀದಿಗಿಳಿದಿದ್ದಾರೆ.   ರಾಜ್ಯ ಸರ್ಕಾರದ  ಮಾತೃಪೂರ್ಣ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ.  ಈ ಹಿನ್ನೆಲೆಯಲ್ಲಿ  ಮಾತೃ ಪೂರ್ಣ ಯೋಜನೆಗೆ ಪೂರೈಕೆ ಆಗುವ ಆಹಾರವನ್ನು ಬಾಣಂತಿಯರ ಮನೆಗೆ ಪೂರೈಸುವಂತೆ ಅಂಗನವಾಡಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.  ಕನಿಷ್ಠ 18 ಸಾವಿರ ವೇತನ ಆಗ್ರಹ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ   ಫ್ರೀಡಂ ಪಾರ್ಕ್'ನಲ್ಲಿ ಸಾವಿರಾರು ಪ್ರತಿಭಟನೆಕಾರರು ಜಮಾಯಿಸಿದ್ದಾರೆ.

ಬೆಂಗಳೂರು (ಡಿ.05): ಮತ್ತೆ ಅಂಗನವಾಡಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ  ಬೀದಿಗಿಳಿದಿದ್ದಾರೆ.   ರಾಜ್ಯ ಸರ್ಕಾರದ  ಮಾತೃಪೂರ್ಣ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ.  ಈ ಹಿನ್ನೆಲೆಯಲ್ಲಿ  ಮಾತೃ ಪೂರ್ಣ ಯೋಜನೆಗೆ ಪೂರೈಕೆ ಆಗುವ ಆಹಾರವನ್ನು ಬಾಣಂತಿಯರ ಮನೆಗೆ ಪೂರೈಸುವಂತೆ ಅಂಗನವಾಡಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.  ಕನಿಷ್ಠ 18 ಸಾವಿರ ವೇತನ ಆಗ್ರಹ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ   ಫ್ರೀಡಂ ಪಾರ್ಕ್'ನಲ್ಲಿ ಸಾವಿರಾರು ಪ್ರತಿಭಟನೆಕಾರರು ಜಮಾಯಿಸಿದ್ದಾರೆ.

ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು ಐದು  ಸಾವಿರಕ್ಕೂ ಹೆಚ್ಚು  ಕಾರ್ಯಕರ್ತೆಯರು ಬೆಂಗಳೂರಿಗೆ ಬಂದಿಳಿದಿದ್ದು ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್'ವರೆಗೆ ಬೃಹತ್ ರ್ಯಾಲಿ ನಡೆಸುತ್ತಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ನಾಗರತ್ನಮ್ಮ ಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದ್ದಾರೆ.  ಮನವಿ ಸ್ವೀಕರಿಸಿ ಮಾತನಾಡಿದ ಜಂಟಿ ನಿರ್ದೇಶಕಿ ನಾಗರತ್ನಮ್ಮ,   ಮಾತೃ ಪೂರ್ಣ ಅತ್ಯಂತ ಮಹತ್ವ ಯೋಜನೆ.  ಇದಕ್ಕೆ ಸಾಕಷ್ಟು ತೊಂದರೆ ಇದೆ ಎಂದು ಮನವಿ ಕೊಟ್ಟಿದ್ದಾರೆ.  ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಿದ ನಂತರ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು  ಡಿ. 17 ರವರೆಗೆ ಗಡುವು ನೀಡಿದ್ದು, ಬೇಡಿಕೆ ಪೂರೈಸದಿದ್ದರೆ ಮತ್ತೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

click me!