ರಾಜ್ಯಕ್ಕೆ ಸಿಗದ ವಿಶೇಷ ಸ್ಥಾನಮಾನ: ಉಪಸ್ಪೀಕರ್ ಹುದ್ದೆ ಬೇಡವೆಂದ CM

Published : Jun 24, 2019, 09:36 AM IST
ರಾಜ್ಯಕ್ಕೆ ಸಿಗದ ವಿಶೇಷ ಸ್ಥಾನಮಾನ: ಉಪಸ್ಪೀಕರ್ ಹುದ್ದೆ ಬೇಡವೆಂದ CM

ಸಾರಾಂಶ

ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲಿಲ್ಲವೆಂಬ ಕಾರಣಕ್ಕೆ ಆಂಧ್ರ ಮಾಜಿ ಸಿಎಂ ಎನ್‌ಡಿಎ ಮೈತ್ರಿಕೂಟದಿಂದ ಹೊರ ಬಂದಿದ್ದಲ್ಲದೇ, ಮೋದಿ ಸರಕಾರದೊಂದಿಗೆ ಮುನಿಸು ತೋರಿದ್ದರು. ಇದೀಗ ಜಗನ್ ಕೇಂದ್ರದ ಆಫರ್ ತಿರಸ್ಕರಿಸುವ ಮೂಲಕ ತಮ್ಮ ಸಿಟ್ಟು ತೋರ್ಪಡಿಸಿದ್ದಾರೆ.

ನವದೆಹಲಿ (ಜೂ.24): ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತು ಬಿಜೆಪಿಯಿಂದ ಇದುವರೆಗೆ ಯಾವುದೇ ಖಚಿತ ಭರವಸೆ ಸಿಗದ ಹಿನ್ನೆಲೆಯಲ್ಲಿ, ಲೋಕಸಭೆಯಲ್ಲಿನ ಉಪಸ್ಪೀಕರ್‌ ಹುದ್ದೆ ವಹಿಸಿಕೊಳ್ಳುವಂತೆ ಎನ್‌ಡಿಎ ನೀಡಿದ್ದ ಆಹ್ವಾನವನ್ನು ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ಜಗನ್ಮೋಹನ್‌ ರೆಡ್ಡಿ ಒಪ್ಪುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಉಪಸ್ಪೀಕರ್‌ ಹುದ್ದೆ ವಹಿಸಿಕೊಂಡರೆ ಅದು ಎನ್‌ಡಿಎ ಜೊತೆ ಗುರುತಿಸಿಕೊಂಡಂತೆ ಆಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಖಚಿತ ಭರವಸೆ ಸಿಗುವವರೆಗೂ ಎನ್‌ಡಿಎ ಮತ್ತು ವಿಪಕ್ಷಗಳಿಂದ ಸಮಾನದೂರ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. 22 ಸ್ಥಾನ ಗೆದ್ದಿರುವ ವೈಎಸ್‌ಆರ್‌ಸಿ 4ನೇ ಅತಿದೊಡ್ಡ ಪಕ್ಷವಾಗಿದೆ.

ಆಂಧ್ರದಂತೆ ರಾಜ್ಯದಲ್ಲಿ ಜೆಡಿಎಸ್ ಕಟ್ಟಲು ನಿಖಿಲ್ ಪ್ಲ್ಯಾನ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸದಾಗಿ 545 ಪಿಎಸ್‌ಐ ಶೀಘ್ರ ಸೇವೆಗೆ ನಿಯೋಜನೆ: ಗೃಹ ಸಚಿವ ಪರಮೇಶ್ವರ್‌
India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್