Fact Check: ರಾಜ್ಯಸಭಾ ಅಧಿವೇಶನದ ವೇಳೆ ನಿದ್ದೆಗೆ ಜಾರಿದ್ರಾ ಅಮಿತ್ ಶಾ?

By Web DeskFirst Published Jun 24, 2019, 9:12 AM IST
Highlights

ರಾಜ್ಯಸಭಾ ಅಧಿವೇಶನದ ವೇಳೆ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ನಿದ್ದೆಗೆ ಜಾರಿದ್ದರು ಎನ್ನುವ ಸಂದೇಶ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? ಈ ಸುದ್ದಿ ಓದಿ. 

ರಾಜ್ಯಸಭಾ ಅಧಿವೇಶನದ ವೇಳೆ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ನಿದ್ದೆಗೆ ಜಾರಿದ್ದರು ಎನ್ನುವ ಸಂದೇಶ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಅಮಿತ್‌ ಶಾ ನಿದ್ದೆ ಮಾಡಿದಂತೆ ಕಾಣುವ ಫೋಟೋವನ್ನು ಪೋಸ್ಟ್‌ ಮಾಡಿ, ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಮೇಲ್ಮನೆಯಲ್ಲಿ ಮಾತನಾಡುತ್ತಿದ್ದ ವೇಳೆ ಅಮಿತ್‌ ಶಾ ನಿದ್ದೆ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಜೊತೆಗೆ ‘ಭಕ್ತರ ಬೂಟಾಟಿಕೆಗೆ ಸಾಟಿಯೇ ಇಲ್ಲ! ಅಧಿವೇಶದ ವೇಳೆ ರಾಹುಲ್‌ ಗಾಂಧಿ ಮೊಬೈಲ್‌ ಬಳಸಿದರೆ ತಪ್ಪು. ಅದೇ ಅಮಿತ್‌ ಶಾ ನಿದ್ದೆ ಮಾಡಿದರೆ ತೊಂದರೆ ಇಲ್ಲ!’ ಎಂದು ಒಕ್ಕಣೆ ಬರೆಯಲಾಗಿದೆ. ಇದೀಗ ಫೇಸ್‌ಬುಕ್‌ ಮತ್ತು ಟ್ವೀಟರ್‌ನಲ್ಲಿ ವೈರಲ್‌ ಆಗಿದೆ.

ಪಶ್ಚಿಮ ಬಂಗಾಳ ಕಾಂಗ್ರೆಸ್‌ನ ಅಧಿಕೃತ ಟ್ವೀಟರ್‌ ಖಾತೆಯೂ ಈ ಫೋಟೋವನ್ನು ಟ್ವೀಟ್‌ ಮಾಡಿದೆ.

 

If is using his mobile it's an insult to the parliament but if takes a nap it's alright...
Heights of Hypocrisy 😡😡 pic.twitter.com/uggAEtz40u

— Unicorn 💫 (@snapnchat)

ಆದರೆ ನಿಜಕ್ಕೂ ಅಮಿತ್‌ ಶಾ ನಿದ್ದೆ ಮಾಡುತ್ತಿದ್ದರೇ ಎಂದು ‘ಬೂಮ್‌ ಲೈವ್‌’ ಪರಿಶೀಲಿಸಿದಾಗ ಅಮಿತ್‌ ಶಾ ನಿದ್ದೆ ಮಾಡುತ್ತಿರಲಿಲ್ಲ. ರವಿಶಂಕರ್‌ ಪ್ರಸಾದ್‌ ಭಾಷಣದ ವೇಳೆ ಪೂರ್ಣ ಎಚ್ಚರವಿದ್ದರು ಎಂದು ತಿಳಿದುಬಂದಿದೆ.

ಬೂಮ್‌ ಅಧಿವೇಶನದ ರಾಜ್ಯಸಭಾ ಟೀವಿಯ ಮೂಲ ದೃಶ್ಯಗಳನ್ನು ಪಡೆದು ಪರಿಶೀಲಿಸಿದಾಗ ಈ ವಾಸ್ತವವಾಂಶ ತಿಳಿದುಬಂದಿದೆ. 15 ನಿಮಿಷದ ಈ ವಿಡಿಯೋದಲ್ಲಿ ರವಿಶಂಕರ್‌ ಪ್ರಸಾದ ಮಾತನಾಡುತ್ತಿದ್ದ ವೇಳೆ, ಏನನ್ನೋ ಓದುತ್ತಿದ್ದಾ ಅಮಿತ್‌ ಶಾ ಅನೇಕ ಬಾರಿ ಕಣ್ಣನ್ನು ಮಿಟುಕಿಸಿದ್ದಾರೆ. ಇದೇ ಸಂದರ್ಭದ ಸ್ಕ್ರೀನ್‌ಶಾಟ್‌ ತೆಗೆದು ಸುಳ್ಳುಸುದ್ದಿ ಹರಡಲಾಗುತ್ತಿದೆ.
 

click me!