ಸಿದ್ದರಾಮಯ್ಯ ಅಲ್ಲ, ’ಛಿದ್ರ’ ರಾಮಯ್ಯ ಎಂದು ವ್ಯಂಗ್ಯವಾಡಿದ ಅನಂತ್ ಕುಮಾರ್ ಹೆಗಡೆ

By Suvarna Web DeskFirst Published Mar 25, 2018, 10:35 PM IST
Highlights

ಪಾಕಿಸ್ತಾನಕ್ಕೆ ಪಾಠ ಕಲಿಸುವುದು ದೊಡ್ಡ ಸವಾಲಲ್ಲ.  ದೇಶದಲ್ಲಿ ಛಿದ್ರ ’ರಾಮಯ್ಯನಂತವರಿಗೆ ಮೊದಲು ಪಾಠ ಕಲಿಸಬೇಕಾಗಿದೆ‌ ಎಂದು ಯಾದಗಿರಿ ವಿರಾಟ್ ಸಮಾವೇಶದಲ್ಲಿ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ಯಾದಗಿರಿ (ಮಾ. 25):  ಪಾಕಿಸ್ತಾನಕ್ಕೆ ಪಾಠ ಕಲಿಸುವುದು ದೊಡ್ಡ ಸವಾಲಲ್ಲ.  ದೇಶದಲ್ಲಿ ಛಿದ್ರ ’ರಾಮಯ್ಯನಂತವರಿಗೆ ಮೊದಲು ಪಾಠ ಕಲಿಸಬೇಕಾಗಿದೆ‌ ಎಂದು ಯಾದಗಿರಿ ವಿರಾಟ್ ಸಮಾವೇಶದಲ್ಲಿ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ತಂದೆಯೆ ಇರಲಿ, ತಾಯಿಯೆ ಇರಲಿ ನಮ್ಮ ಸಮಾಜವನ್ನು ಒಡೆಯಲೂ ಬಿಡಲ್ಲ. ಅದಕ್ಕೆ ಕಡಿವಾಣ ಹಾಕ್ತೇವೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಎಂದಿದ್ದಾರೆ. ಭಾಷಣದ ಉದ್ದಕ್ಕೂ ಸಿಎಂ ಸಿದ್ದರಾಮಯ್ಯಗೆ ಛಿದ್ರ ರಾಮಯ್ಯ, ಛಿದ್ರ ರಾಮಯ್ಯ ಎಂದು ವ್ಯಂಗ್ಯವಾಡಿದ್ದಾರೆ.

ಧರ್ಮಗೋಸ್ಕರ ಯಾರು ತಮ್ಮ ಮೈಗೆ ಬೆಂಕಿ ಹಚ್ಚಿಕೊಳ್ಳುತ್ತಾರೋ ಅಂತವರ ಜೊತೆ ನೀವೆಲ್ಲರೂ ಇರಬೇಕು.  ಪಾಕಿಸ್ತಾನ ವಿಭಜನೆ ಆದಾಗ ಅದೆಷ್ಟೋ  ಹಿಂದುಗಳು ಅತ್ಯಾಚಾರ, ಅನ್ಯಾಯಕ್ಕೆ ಒಳಗಾದರು. ಹಿಂದೂ ಸಮಾಜ ಅನಾಥ ಆದ್ರೆ ನಿಮ್ಮ ಮನೆತನಕ್ಕೆ ಗೌರವವಿಲ್ಲ. ಅನಾಥವಾಗಲು ಬಿಡಬೇಡಿ ಎಂದಿದ್ದಾರೆ.

23 ಹಿಂದು ಮಕ್ಕಳ ಕೊಂದಾಗ ಎಲ್ಲೋಗಿದ್ದರು ಲಂಕೇಶ್ ವಾದಿಗಳು, ವಿಚಾರವಾದಿ, ಬುದ್ದಿ ಜೀವಿಗಳು?  ಈ ದೇಶವನ್ನು ಹಾಳ ‌ಮಾಡಿದ್ದೆ ಈ ಎಡಬಿಡಂಗಿಗಳು, ದೇಶ ದ್ರೋಹಿಗಳು. ಅಪರೂಪಕ್ಕೆ ಒಬ್ಬ ಮೆಚ್ಚುವಂತವ ನಾಯಕ ಬಂದಿದ್ದಾರೆ ಅವರಿಗೆ ಬೆಂಬಲಿಸಬೇಕಾಗಿದೆ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

click me!