2019 ಟಾರ್ಗೆಟ್ 400: ಲೋಕಸಭೆ ಚುನಾವಣೆಗೆ ಅಮಿತ್ ಶಾ ಮಾಸ್ಟರ್ ಪ್ಲಾನ್

By Suvarna Web DeskFirst Published Apr 30, 2017, 3:28 AM IST
Highlights

ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿದೆ. ಆದರೆ ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಚುನಾವಣಾ ಯುದ್ಧಕ್ಕೆ ಹೊರಟು ನಿಂತಿದ್ದಾರೆ. ಇದಕ್ಕಾಗಿ  ಬ್ಲೂಪ್ರಿಂಟ್ ಕೂಡ ಸಿದ್ದಪಡಿಸಿದ್ದಾರೆ. ಮಿಷನ್ 2019 ಅಡಿಯಲ್ಲಿ ದೇಶವ್ಯಾಪಿ ಪ್ರವಾಸ ಕೈಗೊಂಡಿರುವ ಅಮಿತ್ ಶಾ 400 ಸೀಟುಗಳನ್ನು ಗೆಲ್ಲುವ ಟಾರ್ಗೆಟ್ ಹೊಂದಿದ್ದಾರೆ.

ನವದೆಹಲಿ(ಎ.30): ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿದೆ. ಆದರೆ ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಚುನಾವಣಾ ಯುದ್ಧಕ್ಕೆ ಹೊರಟು ನಿಂತಿದ್ದಾರೆ. ಇದಕ್ಕಾಗಿ  ಬ್ಲೂಪ್ರಿಂಟ್ ಕೂಡ ಸಿದ್ದಪಡಿಸಿದ್ದಾರೆ. ಮಿಷನ್ 2019 ಅಡಿಯಲ್ಲಿ ದೇಶವ್ಯಾಪಿ ಪ್ರವಾಸ ಕೈಗೊಂಡಿರುವ ಅಮಿತ್ ಶಾ 400 ಸೀಟುಗಳನ್ನು ಗೆಲ್ಲುವ ಟಾರ್ಗೆಟ್ ಹೊಂದಿದ್ದಾರೆ.

ಲೋಕಸಭೆ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದೆ. ಕಾಂಗ್ರೆಸ್ ಮುಕ್ತ ಭಾರತಕ್ಕೆ ಪಣತೊಟ್ಟಿರುವ ಅಮಿತ್ ಶಾ, ‘ ಮಿಷನ್ 2019’ ಅಡಿಯಲ್ಲಿ ಇಂದಿನಿಂದ ದೇಶವ್ಯಾಪಿ ಪ್ರವಾಸ ಕೈಗೊಂಡಿದ್ದಾರೆ. ‘ ಮಿಷನ್ 2019’  ಅಡಿಯಲ್ಲಿ 400 ಲೋಕಸಭೆ ಸೀಟುಗಳನ್ನು ಗೆಲ್ಲಲು ರಣತಂತ್ರ ರೂಪಿಸಿದ್ದಾರೆ. ಉತ್ತರ ಪ್ರದೇಶ , ಉತ್ತರಾಖಂಡ್, ಮಣಿಪುರ, ಗೋವಾದಲ್ಲಿ ಅಧಿಕಾರ, ದೆಹಲಿ ಮುನ್ಸಿಪಲ್ ಎಲೆಕ್ಷನ್‌ನಲ್ಲೂ ಭರ್ಜರಿ ಗೆಲುವಿನಿಂದ ಉತ್ಸುಕದಲ್ಲಿರುವ ಅಮಿತ್ ಶಾ, ಲೋಕಸಭೆ ಚುನಾವಣೆಯಲ್ಲೂ ಈ ಗೆಲುವು ವಿಸ್ತರಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ಅಮಿತ್ ಶಾ ಮಾಸ್ಟರ್ ಪ್ಲಾನ್

‘ಮಿಷನ್ 2019’ ಅಡಿಯಲ್ಲಿ ಅಮಿತ್ ಶಾ ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಪ್ರವಾಸ ಮಾಡಲಿದ್ದಾರೆ. ದೇಶದ ಮೂಲೆಮೂಲೆಗಳಲ್ಲೂ ಸುತ್ತಾಡಿ, ಪಕ್ಷ ಸಂಘಟನೆ ಹಾಗೂ ಚುನಾವಣಾ ಕಾರ್ಯತಂತ್ರ ರೂಪಿಸಲಿದ್ದಾರೆ.ಬಿಜೆಪಿ ಬಲಹೀನವಾಗಿರುವ ರಾಜ್ಯಗಳಾದ ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ , ಕೇರಳ ರಾಜ್ಯಗಳ ಮೇಲೆ ಕಣ್ಣಿಟ್ಟಿದ್ದಾರೆ. ಒಟ್ಟು 95 ದಿನಗಳ ಕಾಲ ಅಮಿತ್ ಶಾ ಪ್ರವಾಸ ಮಾಡಲಿದ್ದು, ಸೆಪ್ಟೆಂಬರ್ 25ಕ್ಕೆ ದೀನ್​ ದಯಾಳ್​ ಉಪಾಧ್ಯಾಯ್​ ಜನ್ಮದಿನದಂದು ಅಂತ್ಯಗೊಳಿಸಲಿದ್ದಾರೆ.

ಒಟ್ನಲ್ಲಿ 2014ರಲ್ಲಿ 282 ಸೀಟುಗಳನ್ನು ಗೆದ್ದು ಐತಿಹಾಸಿಕ ಜಯಗಳಿಸಿದ ಬಿಜೆಪಿ, ಇದೀಗ ಮಿಷನ್‌ 2019' ಅಡಿಯಲ್ಲಿ 400 ಸೀಟುಗಳನ್ನು ಗೆದ್ದು, ಕಾಂಗ್ರೆಸ್ ಮುಕ್ತ ಭಾರತಕ್ಕೆ ಅಮಿತ್ ಶಾ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಆದ್ರೆ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಆಂತರಿಕ ಕಲಹ ಇರುವುದರಿಂದ ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತದೆ ಕಾದು ನೋಡಬೇಕಾಗಿದೆ.

click me!