ಅಮಿತ್ ಶಾ ಎನ್'ಡಿಎ'ನಲ್ಲಿ ಪ್ರಮುಖ ಹುದ್ದೆ ?

Published : Aug 28, 2017, 11:11 PM ISTUpdated : Apr 11, 2018, 01:09 PM IST
ಅಮಿತ್ ಶಾ ಎನ್'ಡಿಎ'ನಲ್ಲಿ ಪ್ರಮುಖ ಹುದ್ದೆ ?

ಸಾರಾಂಶ

ಬಿಜೆಪಿಗೇ ಈಗ ಏಕಾಂಗಿಯಾಗಿ ಬಹುಮತ ಸಿಕ್ಕಿರುವ ಹಿನ್ನೆಲೆಯಲ್ಲಿ ಎನ್‌ಡಿಎ ಅಂಗಪಕ್ಷಗಳ ಮೇಲೆ ಅವಲಂಬನೆ ಕಡಿಮೆ ಇದೆ.

ನವದೆಹಲಿ(ಆ.28): ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಎನ್‌ಡಿಎ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ವಾಜಪೇಯಿ ಸರ್ಕಾರ ಇದ್ದಾಗ ಎನ್‌ಡಿಎ ಅಂಗಪಕ್ಷಗಳು ಅವರಿಗೆ ಸದಾ ಕಾಟ ಕೊಡುತ್ತಿದ್ದವು. ಆದರೆ ಈಗ ಸ್ಥಿತಿ ಹಾಗಿಲ್ಲ. ಬಿಜೆಪಿಗೇ ಈಗ ಏಕಾಂಗಿಯಾಗಿ ಬಹುಮತ ಸಿಕ್ಕಿರುವ ಹಿನ್ನೆಲೆಯಲ್ಲಿ ಎನ್‌ಡಿಎ ಅಂಗಪಕ್ಷಗಳ ಮೇಲೆ ಅವಲಂಬನೆ ಕಡಿಮೆ ಇದೆ. ಹೀಗಾಗಿ ಈ ಪಕ್ಷಗಳಿಗೆ ಅಷ್ಟು ಪ್ರಾಧಾನ್ಯತೆ ನೀಡದ ಮೋದಿ-ಶಾ ಜೋಡಿ, ಅವುಗಳನ್ನು ಹದ್ದುಬಸ್ತಿನಲ್ಲಿ ಇಟ್ಟಿದ್ದಾರೆ. ಇದೇ ಕಾರಣಕ್ಕೆ ಶಾ ಅವರನ್ನೇ ಸಂಚಾಲಕ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಜಾರ್ಜ್ ಫರ್ನಾಂಡಿಸ್, ಶರದ್ ಯಾದವ್ ಹಾಗೂ ನಿತೀಶ್ ಕುಮಾರ್ ಎನ್‌ಡಿಎ ಸಂಚಾಲಕರಾಗಿದ್ದರು. ಆದರೆ ಈಗ ಪುನಃ ನಿತೀಶ್ ಎನ್‌ಡಿಎ ತೆಕ್ಕೆಗೆ ಮರಳಿದ್ದಾರಾದರೂ ಅವರಿಗಾಗಲಿ, ಅಂಗಪಕ್ಷಗಳಿಗಾಗಲಿ ಈ ಹುದ್ದೆ ನೀಡುವ ಸಾಧ್ಯತೆ ಇಲ್ಲ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್