ಖಟ್ಟರ್ ಕರೆಸಿಕೊಂಡ ಶಾ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸುಭಾಷ್ ಭರಾಲಾ ರಾಜೀನಾಮೆ!

By Web DeskFirst Published Oct 24, 2019, 1:28 PM IST
Highlights

ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತ ಎಣಿಕೆ ಕಾರ್ಯ ಆರಂಭ| ನಿರೀಕ್ಷೆಯಂತೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಮುನ್ನಡೆ| ಹರಿಯಾಣದಲ್ಲಿಆಡಳಿತಾರೂಢ ಬಿಜೆಪಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲ| ಹರಿಯಾಣದಲ್ಲಿ ಕಾಂಗ್ರೆಸ್-ಜೆಜೆಪಿ ಮೈತ್ರಿ ಸಾಧ್ಯತೆ| ಸಿಎಂ ಮನೋಹರ್‌ಲಾಲ್ ಖಟ್ಟರ್ ಅವರನ್ನು ದೆಹಲಿಗೆ ಕರೆಸಿಕೊಂಡ ಅಮಿತ್ ಶಾ|  ಹಿನ್ನೆಡೆಗೆ ಕಾರಣ ಕೇಳಿ ಖಟ್ಟರ್‌ಗೆ ನೊಟೀಸ್ ಕಳುಹಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ| ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸುಭಾಷ್ ಭರಾಲಾ ರಾಜೀನಾಮೆ|

ಚಂಡೀಘಡ್(ಅ.24): ತೀವ್ರ ಕುತೂಹಲ ಮೂಡಿಸಿರುವ ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. ನಿರೀಕ್ಷೆಯಂತೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ  ಮುನ್ನಡೆ ಸಾಧಿಸಿದ್ದು, ಹರಿಯಾಣದಲ್ಲಿ ಮಾತ್ರ ಆಡಳಿತಾರೂಢ ಬಿಜೆಪಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾದಂತಿದೆ.

ಒಟ್ಟು 90 ಸೀಟುಗಳ  ಹರಿಯಾಣ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, ಸದ್ಯದ ಮಾಹಿತಿ ಪ್ರಕಾರ ಬಿಜೆಪಿ ಕೇವಲ 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅದರಂತೆ ಕಾಂಗ್ರೆಸ್ 30ಸ್ಥಾನಗಳಲ್ಲಿ ಮುನ್ನಡೆ  ಸಾಧಿಸಿದ್ದು, ದುಷ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಹರಿಯಾಣದ ಕುಮಾರಸ್ವಾಮಿ ಆಗ್ತಾರಾ ದುಷ್ಯಂತ್: ದೋಸ್ತಿ ಬಯಸಿದೆ ಕಾಂಗ್ರೆಸ್!

ಈ ಹಿನ್ನೆಲೆಯಲ್ಲಿ ಹರಿಯಾಣದಲ್ಲಿ ಈಗಾಗಲೇ ಮೈತ್ರಿ ಮಾತುಗಳು ಕೇಳಿ ಬರುತ್ತಿದ್ದು, ಕಾಂಗ್ರೆಸ್-ಜೆಜೆಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್ ದುಷ್ಯಂತ್ ಚೌಟಾಲಾ ಅವರನ್ನು ಭೇಟಿ ಮಾಡಿ ಮೊದಲ ಸುತ್ತಿನ ಮಾತುಕತೆ ನಡೆಸಿದೆ. 

ಆದರೆ ಹರಿಯಾಣದಲ್ಲಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುವ ಬಿಜೆಪಿ, ಪೂರ್ಣ ಫಲಿತಾಂಶ ಹೊರಬಂದ ಬಳಿಕವಷ್ಟೇ ಸರ್ಕಾರ ರಚೆನೆಯ ಕಸರತ್ತಿಗೆ ಕೈಹಾಕಲು ನಿರ್ಧರಿಸಿದೆ.  ಇನ್ನು ಬಿಜೆಪಿಯ ತಂತ್ರಗಾರಿಕೆ ಅರಿತಿರುವ ಕಾಂಗ್ರೆಸ್, ಶಾಸಕರ ಕುದುರೆ ವ್ಯಾಪಾರ ತಪ್ಪಿಸಲು ಸಿದ್ಧರೆ ಆರಂಭಿಸಿದೆ.

ಶಿವಸೇನೆ'ಮಹಾ'ಬೇಡಿಕೆ: ಸಾಧ್ಯನಾ ಆದಿತ್ಯ ಠಾಕ್ರೆ ಸಿಎಂ ಆಗೋಕೆ?

ಇನ್ನು ಹರಿಯಾಣ ಹಿನ್ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೂಡಲೇ ದೆಹಲಿಗೆ ಬರುವಂತೆ ಹರಿಯಾಣ ಸಿಎಂ ಮನೋಹರ್‌ಲಾಲ್ ಖಟ್ಟರರ್ ಅವರಿಗೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಹಿನ್ನೆಡೆಗೆ ಕಾರಣವೇನು ಎಂದು ಕೇಳಿ ಖಟ್ಟರ್ ಅವರಿಗೆ ಅಮಿತ್ ಶಾ ನೊಟೀಸ್ ಕಳುಹಿಸಿದ್ದಾರೆ. ಅಲ್ಲದೇ ದೆಹಲಿಗೆ ಬಂದು ತಮ್ಮನ್ನು ಭೇಟಿಯಾಗುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಹರಿಯಾಣ, ಮಹಾರಾಷ್ಟ್ರ ಸದ್ಯದ ಬಲಾಬಲ: ಇದು ಚುನಾವಣಾ ರಣರಂಗದ ಕುತೂಹಲ!

ಇತ್ತ ಹರಿಯಾಣದಲ್ಲಿನ ಕಳಪೆ ಪ್ರದರ್ಶನಕ್ಕೆ ನೊಂದಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಸುಭಾಷ್ ಭರಾಲಾ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷವನ್ನು  ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ತರಲು ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಭರಾಲಾ ತಿಳಿಸಿದ್ದಾರೆ.

ನನಗೆ ಸಿಎಂ ಪಟ್ಟ ಕೊಡುವ ಪಕ್ಷಕ್ಕೆ ಬೆಂಬಲ: ಚೌಟಾಲಾ ಒಲಿಸಲು ಬಿಜೆಪಿ-ಕಾಂಗ್ರೆಸ್ ಹಂಬಲ!

click me!