
ಮುಂಬೈ/ಚಂಡೀಘಢ್(ಅ.24): ತೀವ್ರ ಕುತೂಹಲ ಮೂಡಿಸಿರುವ ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. ನಿರೀಕ್ಷೆಯಂತೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಹರಿಯಾಣದಲ್ಲಿ ಮಾತ್ರ ಆಡಳಿತಾರೂಢ ಬಿಜೆಪಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾದಂತಿದೆ.
ಒಟ್ಟು 90 ಸೀಟುಗಳ ಹರಿಯಾಣ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, ಸದ್ಯದ ಮಾಹಿತಿ ಪ್ರಕಾರ ಬಿಜೆಪಿ ಕೇವಲ 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅದರಂತೆ ಕಾಂಗ್ರೆಸ್ 30ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ದುಷ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಹರಿಯಾಣದ ಕುಮಾರಸ್ವಾಮಿ ಆಗ್ತಾರಾ ದುಷ್ಯಂತ್: ದೋಸ್ತಿ ಬಯಸಿದೆ ಕಾಂಗ್ರೆಸ್!
ಈ ಹಿನ್ನೆಲೆಯಲ್ಲಿ ಹರಿಯಾಣದಲ್ಲಿ ಈಗಾಗಲೇ ಮೈತ್ರಿ ಮಾತುಗಳು ಕೇಳಿ ಬರುತ್ತಿದ್ದು, ಕಾಂಗ್ರೆಸ್-ಜೆಜೆಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್ ದುಷ್ಯಂತ್ ಚೌಟಾಲಾ ಅವರನ್ನು ಭೇಟಿ ಮಾಡಿ ಮೊದಲ ಸುತ್ತಿನ ಮಾತುಕತೆ ನಡೆಸಿದೆ.
ಆದರೆ ಹರಿಯಾಣದಲ್ಲಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುವ ಬಿಜೆಪಿ, ಪೂರ್ಣ ಫಲಿತಾಂಶ ಹೊರಬಂದ ಬಳಿಕವಷ್ಟೇ ಸರ್ಕಾರ ರಚೆನೆಯ ಕಸರತ್ತಿಗೆ ಕೈಹಾಕಲು ನಿರ್ಧರಿಸಿದೆ. ಇನ್ನು ಬಿಜೆಪಿಯ ತಂತ್ರಗಾರಿಕೆ ಅರಿತಿರುವ ಕಾಂಗ್ರೆಸ್, ಶಾಸಕರ ಕುದುರೆ ವ್ಯಾಪಾರ ತಪ್ಪಿಸಲು ಸಿದ್ಧರೆ ಆರಂಭಿಸಿದೆ.
ಹರಿಯಾಣ ಪಕ್ಷಗಳ ಬಲಾಬಲ:
(ಮುನ್ನಡೆ)
ಬಿಜೆಪಿ-41
ಕಾಂಗ್ರೆಸ್-31
ಜೆಜೆಪಿ-10
ಇತರರು-6
ಇನ್ನು ಒಟ್ಟು 288 ಸೀಟುಗಳ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ 161 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್-ಎನ್‌ಸಿಪಿ ಕೇವಲ 96 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 27 ಕ್ಷೇತ್ರಗಳಲ್ಲಿ ಮುಂದಿದ್ದಾರೆ.
ಆದರೆ ಮಹಾರಾಷ್ಟ್ರದಲ್ಲಿ ಬಿಜೆಪಿ ನಿರೀಕ್ಷಿತ ಸಾಧನೆ ಮಾಡಲಾಗಿಲ್ಲ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿ ಕೇವಲ 99 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಿತ್ರಪಕ್ಷ ಶಿವಸೇನೆ 60 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಶಿವಸೇನೆ ತನ್ನ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿದೆ. ಶೀವಸೇನೆ ಯುವ ನಾಯಕ ಆದಿತ್ಯ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕು ಎಂದು ಮಹಾರಾಷ್ಟ್ರದ ಜನತೆ ಬಯಸುತ್ತಿದ್ದು, ಅವರೇ ಸಿಎಂ ಆಗಲಿದ್ದಾರೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಶಿವಸೇನೆ'ಮಹಾ'ಬೇಡಿಕೆ: ಸಾಧ್ಯನಾ ಆದಿತ್ಯ ಠಾಕ್ರೆ ಸಿಎಂ ಆಗೋಕೆ?
ಮಹಾರಾಷ್ಟ್ರ ಪಕ್ಷಗಳ ಬಲಾಬಲ:
(ಮುನ್ನಡೆ)
ಬಿಜೆಪಿ-ಶಿವಸೇನೆ: 162
ಕಾಂಗ್ರೆಸ್-ಎನ್‌ಸಿಪಿ: 96
ಇತರರು: 28
ಹರಿಯಾಣ-ಮಹಾರಾಷ್ಟ್ರ ಹಿನ್ನೆಡೆಯಿಂದ ಗೊಂದಲದಲ್ಲಿರುವ ಬಿಜೆಪಿ , ಮಹಾರಾಷ್ಟ್ರದಲ್ಲಿನ ಶಿವಸೇನೆ ಒತ್ತಡ ಹಾಗೂ ಹರಿಯಾಣದ ಆಡಳಿತ ವಿರೋಧಿ ಅಲೆಯನ್ನು ಹೇಗೆ ನಿಭಾಯಿಸಲಿದೆ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.