
ವಾಷಿಂಗ್ಟನ್(ಫೆ.03): ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷ ಸ್ಥಾನ ಸ್ವೀಕರಿಸಿ ಇನ್ನೂ 2 ವಾರಗಳಾಗಿಲ್ಲ. ಅಷ್ಟರಲ್ಲೇ, ಅಮೆರಿಕನ್ನರಲ್ಲಿ ಟ್ರಂಪ್ ಬಗ್ಗೆ ಅಸಹನೆ ಮೂಡಿದೆ.
ಈಗ ಬಹುತೇಕ ಅಮೆರಿಕನ್ನರು ಬರಾಕ್ ಒಬಾಮ ಅವರೇ ಮತ್ತೆ ಅಧ್ಯಕ್ಷರಾಗಲಿ ಎಂದೂ, ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಎಂದೂ ಬಯಸುತ್ತಿದ್ದಾರೆ. ಹೀಗೆಂದು ಪಬ್ಲಿಕ್ ಪಾಲಿಸಿ ಪೋಲಿಂಗ್'ನವರು ನಡೆಸಿದ ಹೊಸ ಸಮೀಕ್ಷೆಯೊಂದು ತಿಳಿಸಿದೆ.
ಶೇ.52 ಮಂದಿ ಒಬಾಮ ಅವರ ಅವಧಿಯೇ ಚೆನ್ನಾಗಿತ್ತು ಎಂದರೆ, ಶೇ.43ರಷ್ಟು ಮಂದಿಯಷ್ಟೇ ಟ್ರಂಪ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಟ್ರಂಪ್‌ರ ವಲಸೆ ನೀತಿಯನ್ನು ಶೇ.49 ಮಂದಿ ವಿರೋಧಿಸಿದರೆ, ಶೇ.47 ಮಂದಿ ಬೆಂಬಲಿಸಿದ್ದಾರೆ ಎಂದೂ ಸಮೀಕ್ಷೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.